ಮಂಡ್ಯ : ಜಿಲ್ಲಾ ಯುವ ಬರಹಗಾರರ ಬಳಗ ವತಿಯಿಂದ ಜಿಲ್ಲೆಯ ಹಿರಿಯ ಮತ್ತು ಕಿರಿಯ ಕವಯತ್ರಿಯರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಆಶಯದೊಂದಿಗೆ ಜಿಲ್ಲಾ ಮಟ್ಟದ ‘ಮಹಿಳಾ ಮುಂಗಾರು ಕವಿಗೋಷ್ಠಿ’ ಆಯೋಜಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಕವಯತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಜಿಲ್ಲೆಯ ಯಾವುದೇ ವಯೋಮಾನದ ಕವಯತ್ರಿಯರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿರುವ ಇಪ್ಪತ್ತೈದು ಸಾಲುಗಳ ಮಿತಿಯಲ್ಲಿರುವ, ತಮ್ಮ ಎರಡು ಅತ್ಯತ್ತಮ ಸ್ವರಚಿತ ಕವನಗಳನ್ನು ಕಳುಹಿಸಿಕೊಡಬೇಕು. ಆಯ್ಕೆಯಾದ ಕವಯತ್ರಿರಿಗೆ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಯುವ ಕಾವ್ಯ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತ ಕವಯತ್ರಿಯರು ತಮ್ಮ ಕವನಗಳನ್ನು ಕಿರು ಪರಿಚಯದೊಂದಿಗೆ ಜೂ. 10 ರೊಳಗೆ ತಲುಪುವಂತೆ ವಾಟ್ಸಾಫ್ ಸಂಖ್ಯೆ 8317457397 ಗೆ ಕಳುಹಿಸಿಕೊಡಬೇಕು. ಆಯ್ಕೆಯಾದ ಕವಯತ್ರಿಯರಿಗೆ ‘ಗುಣಸಾಗರಿ ನಾಗರಾಜು ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9880264678 ಗೆ ಸಂಪರ್ಕಿಸಬಹುದಾಗಿದೆ.








