
ಸಾಲಿಗ್ರಾಮ(ಸಂಘಟನೆ ಮಂಜುನಾಥ್): ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜ ನೆಗಳನ್ನು ಅಧಿಕಾರಿಗಳು ಸಮರ್ಪಕ ವಾಗಿ ಅನುಷ್ಠಾನ ಮಾಡಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯ್ ಶಂಕರ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರು ಯಾವುದೇ ಯೋಜನೆಯ ಬಗ್ಗೆ ಅದಕ್ಕೆ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರುಗಳಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕಾರ್ಯನಿರ್ವ ಹಿಸಬೇಕು ಎಂದರು.
ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಬರುವಂತಹ ಸಂದರ್ಭದಲ್ಲಿ ಕಳೆದ ಸಭೆಗಳಲ್ಲಿ ಬಂದಿರುವ ದೂರುಗಳು ಹಾಗೂ ಅದಕ್ಕೆ ಪರಿಹಾರ ಕಲ್ಪಿಸಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ತರುವ ಮೂಲಕ ಸಾರ್ವಜನಿಕರ ಸಮಸ್ಯೆ ಗಳನ್ನು ಪರಿಹಾರ ಮಾಡಲು ಅಗತ್ಯ ಕ್ರಮ ವಹಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ. ಪಡಿತರ ಚೀಟಿದಾರರ ಹೆಬ್ಬಟ್ಟು ಪಡೆಯುವ ದಿನದಂದೇ ಪಡಿತರ ವನ್ನು ವಿತರಿಸಲು ಅಗತ್ಯ ಕ್ರಮವಹಿ ಸಬೇಕು ಎಂದರು.
ಸಾಲಿಗ್ರಾಮ ಪಟ್ಟಣದಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ದಲ್ಲಿನ ಶೌಚಾ ಲಯದ ಸ್ವಚ್ಛತೆಯನ್ನು ಕಾಪಾಡಬೇಕು, ಉತ್ತಮವಾದ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹಲವು ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಇದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಹಾಗೂ ರಾತ್ರಿ ಸಮಯದಲ್ಲಿ ಬಸ್ಸುಗಳನ್ನು ಬಸ್ ನಿಲ್ದಾಣದ ಒಳಗಡೆ ನಿಲುಗಡೆ ಮಾಡುವಂತೆ ಕ್ರಮವಹಿಸಬೇಕೆಂದು ಸೂಚಿಸಿದರು.

ತಾಲ್ಲೂಕಿನ ಹಲವೆಡೆ ವಿದ್ಯುತ್ ಸಮಸ್ಯೆಗಳು ಕಂಡುಬಂದರೂ ಕೂಡ ಸೆಸ್ಕ್ ಇಂಜಿನಿಯರ್‌ಗಳು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಅಸ ಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಅಗತ್ಯ ಕ್ರಮ ವಹಿಸ ಬೇಕು ಎಂದು ಎಚ್ಚರಿಕೆ ನೀಡಿದರು.
22 ಸಭೆಯಲ್ಲಿ ತಾ.ಪಂ. ಎ.ಎನ್.ರವಿ, ಗ್ಯಾರಂಟಿ ಯೋಜ ನೆಗಳ ಅನುಷ್ಠಾನ ಸಮಿತಿ ಸದಸ್ಯ ರಾದ ಮಹಾಲಿಂಗಪ್ಪ, ರಾಣಿ ಕುಮಾರ್, ಅನಿಲ್, ಮೋಹನ್, ಮೂರ್ತಿ, ರವೀಶ್, ಲೋಕೇಶ್, ವಾಸಿಮ್, ಮಹದೇವಪ್ಪ, ಸಿಡಿಪಿಒ ಅಣ್ಣಯ್ಯ, ಆಹಾರ ಇಲಾಖೆಯ ಸುರೇಶ, ಸಾರಿಗೆ ಇಲಾಖೆ ಗುರು, ಸೆಸ್ಕ್ ಎಇಇ ಮಧುಸೂದನ್, ಇತರರು ಪಾಲ್ಗೊಂಡಿದ್ದರು.








