
ಕೆ.ಆರ್.ನಗರ(ಸಂಘಟನೆ ಮಂಜುನಾಥ್): ನೊಂದವರ ಪಾಲಿನ ದೇವರಾಗಿ ಮತ್ತು ಸರಳ ಸಜ್ಜನಿಕೆಯ ಸಕಾರಮೂರ್ತಿಗಳಾದ ತಹಸೀಲ್ದಾರ್ ಸುರೇಂದ್ರಮೂರ್ತಿ ರವರಿಗೆ ದೊಡ್ಡಕೊಪ್ಪಲು ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ದೊಡ್ಡಕೊಪ್ಪಲು ಗ್ರಾಮದ ಬೀರೇಶ್ ಕೂನೇಗೌಡ ಹೇಳಿದರು.
ಪಟ್ಟಣದ ತಾಲ್ಲೋಕು ಕಛೇರಿಯಲ್ಲಿ ದೊಡ್ಡಕೊಪ್ಪಲು ಗ್ರಾಮದ ವತಿಯಿಂದ ತಹಸೀಲ್ದಾರ್ ರವರಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು ನಮ್ಮ ಮನವಿಗೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ತಾವು ಒಂದೇ ದಿನದಲ್ಲಿ 700ಮೀಟರ್ ರಸ್ತೆ ಮಾಡಿಸಿದ ಕೀರ್ತಿಗೆ ಪಾತ್ರರಾಗಿರುತ್ತೀರಿ ಮತ್ತು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಅತಿ ಶೀಘ್ರವಾಗಿ ಕೆಲಸಗಳನ್ನು ಮಾಡಿಕೊಡುವ, ನೊಂದವರ ಪಾಲಿನ ದೇವರಾಗಿ ಮತ್ತು ಸರಳ ಸಜ್ಜನಿಕೆಯ ಸಕಾರಮೂರ್ತಿಗಳಾದ ತಮಗೆ ದೊಡ್ಡಕೊಪ್ಪಲು ಗ್ರಾಮಸ್ಥರ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದವರ ಮನವಿಗೆ ಸ್ಪಂದಿಸಿ ನೊಂದ ರೈತರಿಗೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಕೋನವನ್ನು ಇಟ್ಟುಕೊಂಡು, ಅತ್ಯಂತ ಅಲ್ಪ ಅವಧಿಯಲ್ಲಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಬರುವ, ಉತ್ತರದಿಂದ ದಕ್ಷಿಣಕ್ಕೆ ಹಾದು ಹೋಗುವ ರಸ್ತೆಯನ್ನು, ಸರ್ವೆ ಸ್ಕೆಚ್‌ನಲ್ಲಿ ಇದ್ದಂತೆ ನಿರ್ಮಿಸಿಕೊಡಲು ಕಂದಾಯ ನಿರೀಕ್ಷಕರಾದ ಪ್ರಕಾಶ್ ರವರನ್ನು ಗ್ರಾಮ ಲೆಕ್ಕಿಗರಾದ ಜಮಖಂಡಿಯವರನ್ನು, ಸರ್ವೆ ನೌಕರರಾದ ಕುಮಾರಸ್ವಾಮಿಯವರನ್ನು ಹಾಗೂ ಗ್ರಾಮ ಸಹಾಯಕರಾದ ದರ್ಶನ್ ಜಿ.ಎಸ್. ರವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು, ಸರ್ಕಾರಿ ಓಣಿಯನ್ನು ಅಳತೆ ಮಾಡಿ, ಸುಮಾರು 20 ಅಡಿಗಳ ರಸ್ತೆಯನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಒಂದೇ ದಿನದಲ್ಲಿ ಸುಮಾರು 700ಮೀಟರ್ ರಸ್ತೆ ನಿರ್ಮಾಣ ಮಾಡಿಸಿದ ಕೀರ್ತಿ ತಮಗೆ ಸಲ್ಲುತ್ತದೆ. ದೊಡ್ಡ ಕೊಪ್ಪಲು ಗ್ರಾಮಸ್ಥರು ನಿಮಗೆ ಚಿರಋಣಿಯಾಗಿರುತ್ತೇವೆ ಎಂದರು.
ತಹಸೀಲ್ದಾರ್ ಸುರೇಂದ್ರಮೂರ್ತಿರವರು ಮಾತನಾಡಿ ನಾವು ಇರುವುದೇ ಜನರ ಸೇವೆ ಮಾಡಲು ತಾಲ್ಲೂಕಿನ ಜನಸಾಮಾನ್ಯರು ತಮ್ಮ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಯಾವುದೇ ಸಮಯದಲ್ಲಾದರೂ ನಮಗೆ ಕರೆ ಮಾಡಿದರೆ ನಾವು ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಈ ರಸ್ತೆಯನ್ನು ಮಾಡಿಕೊಂಡಿ ಎಂದು ತಮ್ಮ ಗ್ರಾಮದ ವತಿಯಿಂದ ನನಗೆ ಮನವಿ ಬಂದ ತಕ್ಷಣ ಕಾನೂನು ರೀತಿಯಲ್ಲಿ ಏನು ಕ್ರಮ ಕೈಕೊಳ್ಳಬೇಕು ಅದನ್ನು ಮಾಡಿದ್ದೇವೆ ಅಷ್ಟೇ ಎಂದರು.
ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ದೇವರಮನೆ ಮನೆತನದ ವಂಶಪಾರಂಪರ್ಯ ಗಣಾಚಾರಿಗಳಾದ ಬೀರೇಶ್ ಕೂನೇಗೌಡ, ನಿವೃತ್ತ ಮುಖ್ಯಶಿಕ್ಷಕರಾದ ಡಿ.ಟಿ.ರಮೇಶ್, ಪೂಜಾರಿ ಆನಂದ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಡಿ.ಟಿ.ಮಹೇಶ್ ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಡಿ.ಎಸ್.ಗೋವಿಂದೇಗೌಡ, ಸಣ್ಣ ಕರೀಗೌಡರ ಪುಟ್ಟೇಗೌಡ, ನಿವೃತ್ತ ಹಿರಿಯ ಪಶುಪಾಲನಾ ಅಧಿಕಾರಿಗಳಾದ ಡಿ.ಕೆ ಕೃಷ್ಣೇಗೌಡ, ಶಿವಣ್ಣೇಗೌಡ, ಡಿ.ಆರ್ ಪ್ರವೀಣ್ ಕುಮಾರ್, ಶ್ರೀಮತಿ ರತ್ನಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.








