
ಮೈಸೂರು: ನಗರದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2026 ಐಪಿಎಲ್ ಫೈನಲ್ ಪಂದ್ಯಾವಳಿ ನಡೆಯಲಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಆಡಲಿದ್ದು ಮತ್ತೊಮ್ಮೆ ಆರ್‌ಸಿಬಿ ಫೈನಲ್ ನಲ್ಲಿ ವಿಜಯ ಸಾಧಿಸಲಿ ಎಂದು ಆಟಗಾರರ ಹೆಸರಿನಲ್ಲಿ ಆರ್‌ಸಿಬಿ ಜರ್ಸಿ ಧರಸಿ ವಿಶೇಷ ಪೂಜೆಯನ್ನು ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಕ್ರಿಕೆಟ್ ಪ್ರೇಮಿಗಳು ಪೂಜೆ ನೆರವೇರಿಸಿದರು.
ಇದೇ ವೇಳೆ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡರವರು ಮತ್ತೊಮ್ಮೆ ಆರ್‌ಸಿಬಿ ಜಯಗಳಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದು ಕೊಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕುಮಾರ್, ಪ್ರವೀಣ್ ಜೈನ, ನವೀನ, ರವಿಚಂದ್ರ, ಕಿರಣ್ , ಗುರುರಾಜ್ ಶೆಟ್ಟಿ, ಲೋಕೇಶ, ನಿತಿನ್, ಹರೀಶ್ ಗೌಡ, ಪಾಪಣ್ಣ ನಿಶಾಂತ, ಎಸ್ ಎನ್ ರಾಜೇಶ, ಪ್ರಮೋದ್, ವಿನೋದ್, ನಂಜುಂಡಸ್ವಾಮಿ, ಮಂಜುನಾಥ, ಹರ್ಷ, ಶ್ರೀನಿವಾಸ್ ಶೆಟ್ಟಿ, ಜಯರಾಮ, ಹಾಗೂ ಇನ್ನೂ ಅನೇಕ ಕ್ರಿಕೆಟ್ ಪ್ರೇಮಿಗಳು ಭಾಗವಹಿಸಿದ್ದರು.








