LatestMysore

ಭವ್ಯ ಭಾರತದ ಪ್ರಜೆಯನ್ನು ಸೃಷ್ಟಿಸುವ ಶಿಲ್ಪಿ ಶಿಕ್ಷಕ: ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್

ನಿವೃತ್ತರಾದ ಮುಖ್ಯಶಿಕ್ಷಕಿ ಅನಸೂಯರವರಿಗೆ ಬೀಳ್ಕೊಡುಗೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಸರ್ಕಾರಿ ಸೇವೆಯಲ್ಲಿ ಉತ್ತಮ ಗೌರವ ಹುದ್ದೆ ಶಿಕ್ಷಣ ಕ್ಷೇತ್ರವಾಗಿದ್ದು ಭವ್ಯ ಭಾರತದ ಪ್ರಜೆಯನ್ನು ಸೃಷ್ಟಿಸುವ ಶಿಲ್ಪಿ ಶಿಕ್ಷಕ ಈ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ವಿದ್ಯೆ ಕಲಿಸಿದರೆ ಸದಾ ಗುರುಭಕ್ತಿ ಇರುತ್ತದೆ ಎಂದು ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ಹೇಳಿದರು.

ಪಟ್ಟಣದ ಬನ್ನಿಮಂಟಪ ಬಡಾವಣೆಯಲ್ಲಿರುವ ಸರ್ಕಾರಿ ಬಾಲಕಿಯರ ಮಹಿಳಾ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಅನುಸೂಯ ಅವರು ನಿವೃತ್ತಿಯಾಗುತ್ತಿದ್ದು ಸರಳವಾಗಿ ಶಾಲಾ ಸಭಾಂಗಣದಲ್ಲಿ ನಡೆದ ಬೀಳ್ಳೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆಲಸವನ್ನೇ ನನ್ನ ಆದ್ಯ ಕರ್ತವ್ಯ ಎಂದು ಪಾಲಿಸಿ ಕಳೆದ 2020ರಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬನ್ನಿಮಂಟಪ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಸೇವೆಗೆ ಸೇರಿದರು.  ನಮ್ಮ ತಾಲೂಕಿನಲ್ಲಿ ಶಿಕ್ಷಕಿ ಅನುಸೂಯ ಎಂದರೆ ಶಾಲೆಯನ್ನು ಮನೆಯಂತೆ ಸಹಶಿಕ್ಷಕರನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡವರು.

ಶಾಲೆಯನ್ನು ಉತ್ತಮ ಮಟ್ಟಕ್ಕೆ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತಿದೆ. ನಿವೃತ್ತಿ ನಂತರ ಈ ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕುಟುಂಬದ ಸದಸ್ಯರಂತೆ ತಿಳಿದು ಶಾಲೆಗೆ ಆಗಾಗ್ಗೆ ಬಂದು ಸಲಹೆ ಸೂಚನೆಗಳನ್ನು ನೀಡಬೇಕೆಂದರಲ್ಲದೆ, ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಸರ್ಕಾರಿ ಶಾಲೆ ಎಂದರೆ ಪೋಷಕರಲ್ಲಿ ಬೇಸರದ ಭಾವನೆ.  ಆದರೆ ನಮ್ಮ ಬನ್ನಿಮಂಟಪ ಬಡಾವಣೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಉತ್ತಮ ಸೌಲಭ್ಯ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಚಟುವಟಿಕೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ಸೌಲಭ್ಯ ಪಡೆದುಕೊಳ್ಳುವಲ್ಲಿ ಮುಂದೆ ನಿಲ್ಲುತ್ತಿದ್ದರು. ಶಿಕ್ಷಕಿ ಅನುಸೂಯ ಅವರು ಉತ್ತಮ ಅಥ್ಲೆಟಿಕ್ಸ್ ಕ್ರೀಡಾಪಟುವಾಗಿದ್ದಾರೆ ಎಂದರು.

ಸಮಾರಂಭದಲ್ಲಿ ಪುರಸಭಾ ಮಾಜಿ ಸದಸ್ಯ ಕೆ.ಎಲ್.ಜಗದೀಶ್, ಬಿಆರ್‌ಸಿ ವೆಂಕಟೇಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ್, ದೈಹಿಕ ಶಿಕ್ಷಣ ಸಂಯೋಜಕ ಸ್ವಾಮಿಗೌಡ, ಭೇರ್ಯ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರಸಾದ್, ನಾಗೇಂದ್ರ, ಶಿಕ್ಷಕಿ ಲತಾ ಮಾತನಾಡಿದರು.

ಅಭಿನಂದನಾ ಸಮಾರಂಭದಲ್ಲಿ ವಿಕಲಚೇತನ ಸಂಯೋಜಕ ಕೆ.ಎಲ್.ಹೇಮಂತ್‌ಕುಮಾರ್, ಶಿಕ್ಷಕರುಗಳಾದ ಯತೀಶ್, ಅರುಣ್‌ಕುಮಾರ್, ಜಲೇಂದ್ರ, ಮಂಜುಗೌಡ, ಮಧು, ಬಸವರಾಜು, ಪ್ರಕಾಶ್, ಲೋಕೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ರಂಗನಾಥ್, ಹೆಚ್.ಎಸ್.ಬಾಬು, ಉದ್ಯಮಿ ರವೀಶ್, ವೇಣು ಮತ್ತು ಎಸ್‌ಡಿಎಂಸಿ ಸದಸ್ಯರು ಮತ್ತು ಸಿಬ್ಬಂದಿ ಹಾಗೂ ಅನುಸೂಯ ಕುಟುಂಬ ವರ್ಗದವರು ಇದ್ದರು.

admin
the authoradmin

Leave a Reply

Translate to any language you want