LatestMysore

ಮೈಸೂರು ಆಕಾಶವಾಣಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ.. ನಿವೃತ್ತರ ಸೇವೆಯ ಬಗ್ಗೆ ಶ್ಲಾಘನೆ

ಮೈಸೂರು: ರಾಜ್ಯದಲ್ಲಿಯೇ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಮೈಸೂರು ಮೂವರು ಅಧಿಕಾರಿಗಳು ನಿವೃತ್ತರಾಗುತ್ತಿದ್ದು, ಈ ಸಂಬಂಧ ಮೈಸೂರು ಆಕಾಶವಾಣಿಯ ಆವರಣದಲ್ಲಿ ಇತ್ತೀಚೆಗೆ ಆತ್ಮೀಯವಾಗಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಪ್ರಯುಕ್ತ ಮೈಸೂರು ಆಕಾಶವಾಣಿಯ ಕೇಳುಗರ ಬಳಗವಾದ ಸಮುದ್ಯತಾದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ ರವರು ಸೇರಿದಂತೆ ಅನೇಕರು ಆತ್ಮೀಯವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಳಗದ ಖಜಾಂಚಿ ಕಾಳಿಹುಂಡಿ ಶಿವಕುಮಾರ್, ಸದಸ್ಯರಾದ ಎ ಡಿ ನಂಜುಂಡಸ್ವಾಮಿ, ಬೂಕನಕೆರೆ ವಿಜಯೇಂದ್ರ, ಗುರು ಮಲ್ಲೇಗೌಡರು, ಶ್ರೀಕಂಠ ಮೂರ್ತಿ, ಮುಂತಾದವರು ಹಾಜರಾಗಿದ್ದರು.

ಮೈಸೂರು ಆಕಾಶವಾಣಿಯ  ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾದ ಹಾಗೂ ಮುಂದಿನ ನಿಯೋಜಿತ ಕಾರ್ಯಕ್ರಮ ಮುಖ್ಯಸ್ಥರಾದ ಕೃಷಿ ರಂಗ ಖ್ಯಾತಿಯ ಶ್ರೀ ಕೇಶವಮೂರ್ತಿಗಳು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಿವೃತ್ತ ಅಧಿಕಾರಿಗಳಾದ  ಬೇದ್ರೆ ಎನ್ ಮಂಜುನಾಥ್, ಕಾರ್ಯಕ್ರಮಗಳ ಮುಖ್ಯಸ್ಥರು. ಆನಂದನ್, ತಾಂತ್ರಿಕ ವಿಭಾಗದ ಮುಖ್ಯಸ್ಥರು.  ಶಿವಲಿಂಗೇಗೌಡರು ತಾಂತ್ರಿಕ ಸಹಾಯಕರು.  ಈ ಮೂವರು ಅಧಿಕಾರಿಗಳನ್ನು ಅಭಿನಂದಿಸಿ, ಸನ್ಮಾನಿಸಲಾಯಿಸಿ, ಅವರ ಸೇವೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುಂಚೆ ಸಮುದ್ಯತಾ ಕೇಳುಗರ ಬಳಗದ ಪರವಾಗಿ ಶ್ರೀ ಶಿವಲಿಂಗೇಗೌಡ ರನ್ನು ಬಳಗದ  ಗುರುಮಲ್ಲೇ ಗೌಡ್ರು, ಶ್ರೀ ಆನಂದನ್ ಅವರನ್ನು  ಶ್ರೀಕಂಠ ಮೂರ್ತಿಯವರು ಮತ್ತು ಶ್ರೀ ಬೇದ್ರೆ ಎನ್ ಮಂಜುನಾಥ್ ಅವರನ್ನು ಕಣ್ಣೂರು ವಿ ಗೋವಿಂದಾಚಾರಿ ಸನ್ಮಾನಿಸಿದರು.

ಇದೇ ಕಾರ್ಯಕ್ರಮದಲ್ಲಿ  ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಮೈಸೂರು ಉಮೇಶ್, ಕಾರ್ಯಕ್ರಮ ನಿರ್ವಾಹಕರಾದ ಬಿ ದಿಗ್ವಿಜಯ್, ಅಲ್ಲದೆ ಎಚ್ ಎಲ್ ಶಿವಶಂಕರ ಸ್ವಾಮಿ, ಜಿ ಎನ್ ಮಂಜುನಾಥ್, ಚಿನ್ಮಯ್, ಕೀರ್ತಿ ಬೈಂದೂರು, ತೇಜಸ್ವಿನಿ ಗಿರೀಶ್, ಸರಸ್ವತಿ, ಸಹನ ಮುಂತಾದವರು ಹಾಜರಿದ್ದರು.

ಅಲ್ಲದೆ ಆಕಾಶವಾಣಿ ನಿಲಯದ ನಿವೃತ್ತ ಉಪ ನಿರ್ದೇಶಕರಾಗಿದ್ದ ಎಸ್ ಎಸ್ ಉಮೇಶ್, ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ ಟಿ ವಿ ವಿದ್ಯಾ ಶಂಕರ್, ಆಕಾಶವಾಣಿಯ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಿವೃತ್ತ ಅಧಿಕಾರಿಗಳ ಕುಟುಂಬ ವರ್ಗದವರು ಹಾಜರಿದ್ದರು.

admin
the authoradmin

Leave a Reply

Translate to any language you want