LatestMysore

ನಾಗರಿಕರು ಸಂಘ-ಸಂಸ್ಥೆಗಳ ಸಹಕಾರದಿಂದ ಪಟ್ಟಣದ ಸಮಗ್ರ ಅಭಿವೃದ್ಧಿ ಸಾಧ್ಯ: ಎಚ್.ಪಿ.ಮಧು

 ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ನಾಗರೀಕರು ಸಂಘ-ಸಂಸ್ಥೆಗಳು ಸಹಕಾರ ನೀಡಿದರೆ ಪಟ್ಟಣದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಎಚ್.ಪಿ.ಮಧು ಮತ್ತು ತಿಳಿಸಿದರು.

ಪಿರಿಯಾಪಟ್ಟಣ ಪುರಸಭೆ, ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ನಂದಿ ಎನ್‌ಕ್ಲೇವ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ  ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಿರಿಯಾಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಲ್ಲಿ ಪೌರಕಾರ್ಮಿಕರ ಸೇವೆ ಬಹು ಮಹತ್ವದ್ದಾಗಿದ್ದು ಮಳೆಗಾಲದಲ್ಲಿ ಉಂಟಾಗುತ್ತಿದ್ದ ನೀರಿನ ಅವಘಡಗಳನ್ನು ತಪಿಸಲು ಮುಂಜಾಗ್ರತ ಕ್ರಮವಾಗಿ ನಾಲೆಗಳ ಸ್ವಚ್ಛತೆಯನ್ನು ಮಾಡಲಾಗಿದೆ.

ಶಾಸಕ ಕೆ.ವೆಂಕಟೇಶ್ ಶ್ರಮದಿಂದ ಎರಡು ರಾಜ ಕಾಲುವೆಗಳು ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದಕ್ಕೆ ಇದ್ದ ಅಡೆತಡೆಗಳನ್ನು ಸರ್ಮಥವಾಗಿ ಎದುರಿಸಿ ರಾಜಕಾಲುವೆ ನಿರ್ಮಾಣ ಪೂರ್ಣ ಗೊಳಿಸಲಾಗಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖ ಉದ್ಯಾನವನಗಳು ಮತ್ತಿತರ ಕಡೆಗಳಲ್ಲಿ ಗಿಡಗಳನ್ನು ನೆಟ್ಟು ಸಂಘ ಸಂಸ್ಥೆಗಳ ಸಹಕಾರದಿಂದ ಅವುಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ ಪಿರಿಯಾಪಟ್ಟಣ ಪುರಸಭೆ ಸ್ವಚ್ಛತೆಯಲ್ಲಿ ಮುಂದೆ ಇದ್ದು ಜಾತ್ರಾ ಮಹೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ತಕ್ಷಣದ ಸ್ವಚ್ಛತೆಗೆ ಆದ್ಯತೆ ನೀಡಿ ಪಟ್ಟಣವನ್ನು ಸುಂದರವಾಗಿಡಲು ಸಹಕಾರವಾಗಿದೆ. ಅಲ್ಲದೆ ಮುಖ್ಯ ಅಧಿಕಾರಿ ಎಚ್.ಪಿ.ಮಧುರವರ ಮುಂಜಾಗ್ರತಾ ಕ್ರಮದಿಂದ ರಾಜಕಾಲುವೆಗಳನ್ನು  ಸ್ವಚ್ಛಗೊಳಿಸುವುದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಆಗುತ್ತಿದ್ದ ತೊಂದರೆಗಳು ಈ ಬಾರಿ ಇಲ್ಲದಂತಾಗಿದೆ ಎಂದು ತಿಳಿಸಿದರು.

ಪರಿಸರ ಇಂಜಿನಿಯರ್ ವೈಶಾಲಿ ಮಾತನಾಡಿ ನಾಗರಿಕರು ಹಸಿ ಕಸ ಮತ್ತು ಒಣ ಕಸ ಎಂಬ ಎರಡು ರೀತಿಯ ಕಸಗಳನ್ನು ಮಾತ್ರ ವಿಂಗಡನೆ ಮಾಡುತ್ತಿದ್ದರು ಆದರೆ ಈ ಬಾರಿ ಹೊಸ ಆದೇಶದಂತೆ ನಾಲ್ಕು ರೀತಿಯ ಕಸ ವಿಂಗಡನೆ ಮಾಡಿ ಪುರಸಭೆಗೆ ನೀಡಬೇಕಾಗಿದೆ. ಹಸಿ ತ್ಯಾಜ್ಯ ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ವಿಶೇಷ ಕಾಳಜಿಯ ತ್ಯಾಜ್ಯ ಇವುಗಳನ್ನು ವಿಂಗಡನೆ ಮಾಡಿ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಂದಿ ಎನ್ ಕ್ಲೇವ್ ಬಡಾವಣೆಯ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿ ಎಚ್.ಪಿ. ಮಧುರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರವಿಚಂದ್ರ, ನಿಯೋಜಿತ ರೋಟರಿ ಐಕಾನ್ ಅಧ್ಯಕ್ಷ ಟಿ.ಎಸ್.ಹರೀಶ್, ಪುರಸಭಾ ಸದಸ್ಯ ರವಿ, ಪುರಸಭೆಯ  ಸಮುದಾಯ ಸಂಘಟಕಿ ಶರ್ಮಿಳಾ, ಹೆಲ್ ಇನ್ಸ್ ಪೆಕ್ಟರ್ ಮೋಹನ್, ಪ್ರದೀಪ್, ಆರ್ ಒ ಗಿರೀಶ್, ಆರ್ ಐ ರಾಮಕೃಷ್ಣ,  ಮೇಸ್ತ್ರಿ ಮಹೇಶ್, ಸಿಬ್ಬಂದಿಗಳಾದ ಚಂದನ್, ಮಹದೇವ್, ನಿಶ್ಚಿತ, ಕುಮಾರ್, ಪರ್ತಕರ್ತರಾದ ಸುಬ್ರಹ್ಮಣ್ಯ, ಪವನ್, ಇಮ್ತಿಯಾಜ್, ವೆಂಕಟೇಶ್, ವಸಂತ, ಸೇರಿದಂತೆ ಮತ್ತಿತರರು ಹಾಜರಿದ್ದರು.

admin
the authoradmin

Leave a Reply

Translate to any language you want