LatestMysore

ನಾಗರಾಜ್ ಟೈಲರ್‌ ರಚಿತ ಯೋಗಪುರಿ ಕಾದಂಬರಿ ಯಶಸ್ವಿ ಬಿಡುಗಡೆ

ಮೈಸೂರು: ವಿಜಯನಗರದಲ್ಲಿರುವ ಸ್ಪೈನ್ ಅಟ್ಲಾಸ್ ಪಬ್ಲಿಕೇಷನ್ಸ್ ವತಿಯಿಂದ ನಾಗರಾಜ್ ಟೈಲರ್‌ರವರಿಂದ ರಚಿತ “ಯೋಗಪುರಿ” ಕಾದಂಬರಿಯನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತರಾದ ಸ್ನೇಹಪ್ರಿಯ ನಾಗರಾಜ್, ಗೀತರಚನೆಕಾರರಾದ ಹೃದಯಶಿವ, ರಂಗಕರ್ಮಿ ಮಹದೇವ ಹಡಪದ, ಚಿತ್ರನಟರಾದ ಯಶ್ ಶೆಟ್ಟಿ, ವರ್ಧನ್, ಉಗ್ರಂರವಿ, ತನುಪ್ ಪ್ರಸಾದ್, ದತ್ತು ಮತ್ತು ನಟಿಯರಾದ ನಿಖಿತಾ ಸ್ವಾಮಿ ಹಾಗೂ ಸ್ನೇಹರವರ ಉಪಸ್ಥಿತಿಯಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸ್ಪೈನ್ ಅಟ್ಲಾಸ್ ಪಬ್ಲಿಕೇಷನ್ಸ್ ಸಂಸ್ಥೆಯ ಸಂಸ್ಥಾಪಕರಾದ ಯಶಸ್. ಆರ್‌ರವರು ಲೇಖಕರಿಗೆ ಪ್ರಕಾಶನಾ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಲೇಖಕ ನಾಗರಾಜ್ ಟೈಲರ್ ಪುಸ್ತಕ ಪ್ರಕಾಶಿಸಿದ ಯಶಸ್‌ರವರಿಗೆ ಸನ್ಮಾನ ಮಾಡುವ ಮೂಲಕ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.

admin
the authoradmin

Leave a Reply