ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಚಿಬುಕಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ ಎನ್ ಶಿವರಾಜ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಸಿ ಎಂ ಶಿವಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶಿವರಾಜು ಸಿ ಎಸ್ ರವರನ್ನು ಬಿಟ್ಟು ಬೇರೆಯವರು ನಾಮಪತ್ರ ಸಲ್ಲಿಸದ ಕಾರಣ ಆಯ್ಕೆಯನ್ನು ಪ್ರಕಟಿಸಲಾಯಿತು.

ಅಧ್ಯಕ್ಷರಾದ ಶಿವರಾಜ್ ಸಿ ಎಸ್ ಮಾತನಾಡಿ ರೈತರಿಗೆ ಸಕಾಲದಲ್ಲಿ ಸಾಲ ಕೊಡಿಸುವುದು, ಟ್ರ್ಯಾಕ್ಟರ್, ಟಿಲ್ಲರ್, ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಕೊಡಿಸುವುದು ಹಾಗೂ ಸಂಘದ ಬೆಳವಣಿಗೆಗೆ ಸರ್ವ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸುವ ಜೊತೆಗೆ ಸಂಘದ ವತಿಯಿಂದ ಶೇರುದಾರ ಸದಸ್ಯರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಕೊಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸಂಘಟನೆ ಮಂಜುನಾಥ್, ವಿನಯ್ ದೊಡ್ಡ ಕೊಪ್ಪಲು, ಆನಂದ್ ಹೊಸೂರ್ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಉಪಾಧ್ಯಕ್ಷರಾದ ನಂಜೇಗೌಡ, ನಿರ್ದೇಶಕರಾದ ಪ್ರಸನ್ನ ಬಿ ಜಿ, ಬಿ ಸಚಿನ್, ಸಿ ಎ ಗಣೇಶ್, ಸಿ ಕೆ ರಮೇಶ್, ಎಚ್ ಎಸ್ ವೆಂಕಟೇಶ್, ಮಂಜುಳಾ,ವೀಣಾ, ಸ್ವಾಮಯ್ಯ, ನಿಂಗರಾಜು ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮೂಡಲಕೊಪ್ಪಲು ದಿನೇಶ್, ಸಿಇಓ ಕೃಷ್ಣೇಗೌಡ, ಸಹಾಯಕರಾದ ನಾಗರಾಜ್, ಕುಮಾರ್, ಜ್ಯೋತಿ ಉಪಸ್ಥಿತರಿದ್ದರು.

ಗ್ರಾಪಂ ಮಾಜಿ ಅಧ್ಯಕ್ಷ ಮಹದೇವ್, ಡೈರಿ ನಿರ್ದೇಶಕರಾದ ಮೋಹನ್ ಕುಮಾರ್, ಸೋಮಶೇಖರ್ ಊರಿನ ಯಜಮಾನರುಗಳಾದ ಸಿ ವಿ ರಾಜಪ್ಪ, ಚಿಕ್ಕೇಗೌಡರು ಹಾಗೂ ಊರಿನ ಗ್ರಾಮಸ್ಥರು ಪಟಾಕಿ ಸಿಡಿಸಿ ಸಿಹಿ ಹಂಚಿದರು








