LatestMysore

ಸರಗೂರಿನ ಅಗತ್ತೂರು ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ – ಆಂಗ್ಲ ಮಾಧ್ಯಮ ತರಗತಿಗಳ ಆರಂಭ

ಬಿಇಒ ಎಸ್.ಎನ್. ರಾಜು ಉದ್ಘಾಟನೆ.. ಸರ್ಕಾರಿ ಸೌಲಭ್ಯ ಸದ್ಬಳಕೆಗೆ ಕರೆ

ಸರಗೂರು(ದಾಸೇಗೌಡ): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಇಸಿಸಿಇ (ECCE) ಕಾರ್ಯಕ್ರಮದಡಿ ಸರಗೂರು ತಾಲ್ಲೂಕಿನ ಅಗತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಎಲ್‌ಕೆಜಿ ಹಾಗೂ 1ರಿಂದ 5ನೇ ತರಗತಿವರೆಗೆ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಎಸ್.ಎನ್. ರಾಜು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯ ಎಲ್‌ಕೆಜಿ ಹಾಗೂ ಆಂಗ್ಲ ಮಾಧ್ಯಮ ತರಗತಿಗಳಿಗೆ ದಾಖಲಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಮಕ್ಕಳ ಪೌಷ್ಟಿಕತೆಗಾಗಿ ಬೆಳಿಗ್ಗೆ ಹಾಲಿನೊಂದಿಗೆ ಮೊಟ್ಟೆ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಶಾಲಾ ಬ್ಯಾಗ್, ಸಮವಸ್ತ್ರ, ಶೂ-ಸಾಕ್ಸ್ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸೈಕಲ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಬಿ ಇ ಓ ಎಸ್. ಎನ್ ರಾಜುರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ. ರಾಜೇಶ್, ಮುಖ್ಯ ಶಿಕ್ಷಕ ಸಿದ್ಧರಾಜು, ಎಸ್‌ಡಿಎಂಸಿ ಸದಸ್ಯರಾದ ಪರಶಿವಮೂರ್ತಿ, ಮಹದೇವಮ್ಮ, ಪೂರ್ಣಿಮಾ, ಜ್ಯೋತಿ, ಗೌರಿ, ಪ್ರೀತಿ, ಮಂಗಳಮ್ಮ, ಪುಟ್ಟಮ್ಮ ಹಾಗೂ ಶಿಕ್ಷಕರಾದ ರಂಗರಾಜು, ಜಯರಾಮ್ ಆರ್., ಲಕ್ಷ್ಮಿ ಎಸ್.ಜೆ., ಶಿಲ್ಪಮೇರಿ, ರೇಖಾ, ಧರ್ಮಕ್ಕಮ್ಮ ಮತ್ತು ಸರಸ್ವತಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want