LatestNews

ಯಳಂದೂರು ತಾಲೂಕಿನ  ಯರಗಂಬಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ಮನವಿ

ಚಾಮರಾಜನಗರ:  ಜಿಲ್ಲೆ ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 710/1 ರಲ್ಲಿ ವಿಸ್ತೀರ್ಣ 28 ಗುಂಟೆ ಸರ್ಕಾರಿ ಜಮೀನು ಹಾಗೂ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಪ್ಪುಶಿಲೆ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಯನ್ನು ವಂಚಿಸುತ್ತಿರುವ ಗಣಿ ಮಾಲೀಕರು ಹಾಗೂ ಇವರ ಜೊತೆ ಶಾಮೀಲಾಗಿ ಅಕ್ರಮ ಗಾಣಿಗಾರಿಕೆ ನಡೆಸಲು ಸಹಕರಿಸುತ್ತಿರುವ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಿಲ್ಲಾಧಿಕಾರಿ ಅವರಿಗೆ ಹೆಚ್ಚುವರಿ  ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಯರಗಂಬಳ್ಳಿ ಗ್ರಾಮದ ಸರ್ವೆ ನಂ- 710/1 ರಲ್ಲಿ ವಿಸ್ತಿರ್ಣ 28 ಗುಂಟೆ ಜಮೀನು, ಸರ್ಕಾರಿ ಜಮೀನು,ಸರ್ಕಾರಿ ಕೆರೆ ಆಗಿದ್ದು ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿಯಮ ಬಾಹಿರವಾಗಿ ಕಪ್ಪು ಶಿಲೆ ಗಾಣಿಗಾರಿಕೆಯನ್ನು ಹಲವು ವರ್ಷಗಳಿಂದ ನಡೆಸುತಿದ್ದು ಅಕ್ರನು ಗಾಣಿಗಾರಿಕೆಯಿಂದ ಪ್ರಕೃತಿಯ ಮಡಿಲಿಗೆ   ಗ್ರಾಮಸ್ಥರಿಗೆ, ಜಾನುವಾರುಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಸುಮಾರು 300 ಚದರ ಮೀಟರ್ ಆಳ ತೆಗೆದು ಸರ್ಕಾರಕ್ಕೆ ವಂಚನೆ ಮಾಡಿ ಪಕ್ಕದಲ್ಲಿರುವ ಕೆರೆಯನ್ನೂ ಕೂಡ ಒತ್ತುವರಿ ಮಾಡಿಕೊಂಡಿದ್ದು, ರೈತರು ತಮ್ಮ ಜಮೀನುಗಳಿಗೆ ಓಡಾಡಲು ಇರುವ ಕಬಿನಿ ನಾಲೆ ಬದಿಯ ರಸ್ತೆಯನ್ನು ಇವರು ತಮ್ಮ ಗಣಿಗಾರಿಕೆ ಪ್ರದೇಶದಿಂದ ಕಪ್ಪುಶಿಲೆಯನ್ನು ಸಾಗಿಸಲು ಬಳಸುತ್ತಿದ್ದು, ಅತೀ ಭಾರ ತುಂಬಿದ ಗಣಿಗಾರಿಕೆ ಲಾರಿಗಳ ಓಡಾಟದಿಂದ ಕಬಿನಿ ನಾಲೆ ಬದಿಯ ರಸ್ತೆಯ ಮಣ್ಣು ಕುಸಿದು ಕಬಿನಿ ನಾಲೆಗೆ ತುಂಬಿಕೊಳ್ಳುತ್ತಿದೆ.

ಇದರಿಂದ ಕಬಿನಿ ನಾಲೆಯಿಂದ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿದುಹೋಗಲು ತೊಂದರೆಯಾಗಿರುತ್ತದೆ. ಮತ್ತು ಈಗಾಗಲೇ ಈ ಗ್ರಾಮದಲ್ಲಿ ಎಂಟು ಕುಡಿಯುವ ನೀರಿನ ಬೋರ್ ವೆಲ್ ಗಳು ಅಂತರ್ಜಲ ಕುಸಿದು ಬತ್ತಿಹೋಗಿದ್ದು ಗ್ರಾಮಸ್ಥರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿರುತ್ತದೆ, ಉಳಿಕೆ ಬೋರ್ವೆಲ್ ಗಳಲ್ಲಿ ಕಬ್ಬಿಣಾಂಶ ನೀರು ಬರುತ್ತಿದ್ದು ಇದು ಕುಡಿಯಲು ಯೋಗ್ಯವಲ್ಲದ್ದಾಗಿದ್ದು, ಈ ನೀರನ್ನೇ ಜನರು ಕುಡಿದು ಇಲ್ಲಿನ ಜನರಿಗೆ ದೇಹಸವೆತ, ಕಿಡ್ನಿ ಸ್ಟೋನ್ ಗಳಂತಹ ಇನ್ನಿತರ ಹಲವಾರು ಕಾಯಿಲೆಗಳನ್ನು ಅನುಭವಿಸುವಂತಾಗಿದೆ.

ಈ ಗಣಿಗಾರಿಕೆಗೆ ಬಳಸುವ ಕಲುಸಿತ ನೀರನ್ನು ಕಾಲುವೆಗಳಿಗೆ ಬಿಡುತ್ತಿದ್ದು ಇದರಿಂದಲು ಸಹ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಸಿಡಿಸುವ ಸಿಡಿ ಮದ್ದುಗಳಿಂದ ಮತ್ತು ಈ ಕೆಲಸ ನಿರ್ವಹಿಸುವ ವಾಹನಗಳಿಂದ ಶಬ್ದ ಮಾಲಿನ್ಯ ಮತ್ತು ನಾಯು ಮಾಲಿನ್ಯ ಉಂಟಾಗಿ ಜನ ಸಾಮಾನ್ಯರಿಗೆ ವೃದ್ಧರಿಗೆ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದೆ ಈ ಗಣಿಗಾರಿಕೆ ಉತ್ತರ ಭಾಗದಲ್ಲಿ ಸುಮಾರು 100 ಮೀಟರ್ ಅಂತರದಲ್ಲಿ ನಮ್ಮ ಮೌಢಶಾಲೆಯಿದ್ದು ಈ ಗಣಿಗಾರಿಕೆಯಲ್ಲಿ ದಿನವಿಡಿ ಕೆಲಸ ನಿರ್ವಹಿಸುತ್ತಿರುವುದರಿಂದ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ.

ಈ ಗಣಿಗಾರಿಕೆಯ ಸುತ್ತ ಫಲವತ್ತಾದ ಜಮೀನುಗಳಿದ್ದು ಈ ಗಣಿಗಾರಿಕೆಯಿಂದ ಕೊಳ್ಳದೆ ಬಾವಿಗಳು ಬತ್ತಿ ಹೋಗಿ ವ್ಯವಸಾಯಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಮತ್ತು ಈ ಗಣಿಗಾರಿಕೆಯಿಂದ 30 ರಿಂದ 40 ಟನ್ ಗಳು ಭಾರಿಗಾತ್ರದ ಕರಿಕಲ್ಲುಗಳನ್ನು ಬೇರೆ ಕಡೆಗೆ ಸಾಗಾಣಿಕೆ ಮಾಡುತ್ತಿದ್ದು ಇದರಿಂದ ಇಲ್ಲಿನ ರಸ್ತೆಗಳು ಹಾಳಾಗುತ್ತಿದೆ ಈ ಬಗ್ಗೆ ಗ್ರಾಮಸ್ಥರು ನೊಂದು ಹಲವಾರು ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದರು. ಸಹ ನಂಬಂಧಿಸಿದ ಹಲವಾರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಬದಲಿಗೆ ಗ್ರಾಮದ ಜನರನ್ನು ಹಿಬ್ಬಾಗ ಮಾಡಿ ಶಾಂತಿ ಭಂಗ ಮಾಡುತಿದ್ದು ಆರೋಪ ಪ್ರತ್ಯಾರೋಪಗಳು ಬರುತ್ತಿದ್ದು ಈ ಬಗ್ಗೆ ಸಂಬಂಧಿಸಿದ ತಾವು ಖುದ್ದಾಗಿ ಭೇಟಿ ನೀಡಿ ಗಾಣೆಗಾರಿಕೆಯನ್ನು ಪರಿಶೀಲಿಸಿ ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಮತ್ತು ಅಕ್ರಮ ಗಾಣಿಗಾರಿಕೆಗೆ ಪ್ರತ್ಯಕ್ಷವಾಗಿ ಪರೋಷವಾಗಿ ಕುಮ್ಮಕ್ಕು ನೀಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು  ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ  ಶಿವದೇವಪ್ಪ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಕಂದಳ್ಳಿ ಮಹೇಶ್, ಜಿಲ್ಲಾ ಉಪಾಧ್ಯಕ್ಷ ಸೈಯದ್ ಶಮಿ, ಜಿಲ್ಲಾ ಸಹ ಉಸ್ತುವಾರಿ  ನಾಗೇಂದ್ರ ಕೊಡಗು ಉಸ್ತುವಾರಿ ಶ್ರೀನಿವಾಸ್ ಶಾಸ್ತ್ರೀ ಇತರರು ಹಾಜರಿದ್ದರು.

admin
the authoradmin

Leave a Reply

Translate to any language you want