*3ನೇ ಸಂಕಲ್ಪ ದಿನದ ಯೋಗ ಪೂರ್ವಭ್ಯಾಸ
*ಮುಂದಿನ ವರ್ಷ ಎರಡು ಕೋಟಿ ಜನರಿಂದ ಯೋಗಾಭ್ಯಾಸ

ಮೈಸೂರು: ಇಂದಿನ ದಿನಗಳಲ್ಲಿ ಯೋಗಾಭ್ಯಾಸ ದತ್ತ ಎಲ್ಲರೂ ಮುಖ ಮಾಡಿದ್ದಾರೆ. ಇದು ವ್ಯಕ್ತಿಯ ಶಾರೀರಿಕ ಅಂಗಸಾಧನೆಯಾದರೂ, ಸಾರ್ವಜನಿಕವಾಗಿ ಇಡೀ ಸಮಾಜ ಪಾಲ್ಗೊಳ್ಳುವುದರಿಂದ ಎಲ್ಲರಲ್ಲೂ ಉತ್ತಮ ಮನಸ್ಸು, ಬಾಂಧವ್ಯ ಹಾಗೂ ಪ್ರಗತಿಪರ ಚಿಂತನೆಗಳಿಂದ ಸಂಪೂರ್ಣ ಸಮಾಜವೇ ಸದೃಢವಾಗಿ ರೂಪುಗೊಳ್ಳುತ್ತದೆ” ಎಂದು ಶ್ರೀ.ಶ್ರೀ. ದತ್ತ ವಿಜಯಾನಂದ ತೀರ್ಥ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ಮೈಸೂರಿನ ನಂಜನಗೂಡು- ಊಟಿ ರಸ್ತೆಯಲ್ಲಿರುವ ಅವಧೂತದತ್ತ ಪೀಠದ ಪ್ರಾರ್ಥನಾ ಸಭಾಂಗಣದಲ್ಲಿ ಮೈಸೂರು ಯೋಗ ಒಕ್ಕೂಟದ ವತಿಯಿಂದ ನಡೆಯಲಿರುವ 125ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 3ನೇ ಸಂಕಲ್ಪ ದಿವಸದ ಯೋಗ ಪೂರ್ವಭ್ಯಾಸದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜ್ಯೋತಿ ಬೆಳಗಿಸಿ ಅವರು ಮಾತನಾಡುತ್ತಿದ್ದರು.

ಎಲ್ಲ ಧರ್ಮಗಳಲ್ಲೂ ಒಳ್ಳೆಯ ಬೋಧನೆಗಳು ಇರುತ್ತವೆ ಪ್ರಾರ್ಥನೆ ಹಾಗೂ ಧ್ಯಾನದ ಸಂಗಮವೇ ಯೋಗ ಅಭ್ಯಾಸವಾಗಿದೆ. ಮಾಧ್ಯಮಗಳಲ್ಲಿ ನಗರಗಳ ಯುವಜನತೆ ವ್ಯಸನಿಗಳಾದ ಸುದ್ದಿಗಳನ್ನು ಓದುವಾಗ ಬೇಸರವಾಗುತ್ತದೆ. ಎಲ್ಲ ದುಷ್ಟಗಳನ್ನು ದೂರವಾಗಿಸಿಕೊಳ್ಳಲು ವಯಸ್ಸಿನ ಇತಿಮಿತಿ ಇಲ್ಲದೆ ಸರ್ವ ಜನರ ಆರೋಗ್ಯ ಹಾಗೂ ದೈಹಿಕ ಚಲನಶೀಲತೆ ಹೆಚ್ಚಿಸುವ ಯೋಗವನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು. ಈಗಾಗಲೇ ರಾಜ್ಯದಲ್ಲಿ ಜೂನ್ 21ರಂದು ಒಂದು ಕೋಟಿಗೂ ಅಧಿಕ ಜನ ಯೋಗಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದು , ಮುಂದಿನ ವರ್ಷ ಎರಡು ಕೋಟಿಗೂ ಹೆಚ್ಚು ಜನತೆ ಯೋಗ ದಿನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಅವರು ಮಾತನಾಡಿ ” ಮೈಸೂರು ಎಂದರೆ ಯೋಗವೇ ಆಗಿದೆ, ಪ್ರಧಾನಿ ಮೋದಿ ಅವರು ಮೈಸೂರಿನಲ್ಲಿ ಯೋಗ ದಿನ ಆಚರಣೆಯಲ್ಲಿ ಪಾಲ್ಗೊಂಡ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಪ್ರಾಮುಖ್ಯತೆ ದೊರಕಿದೆ. ಪ್ರತಿ ವರ್ಷ ಮೈಸೂರಿನ ಯೋಗ ಕಾರ್ಯಕ್ರಮವನ್ನು ಇತರೆ ರಾಜ್ಯಗಳು ಮಾದರಿಯನ್ನಾಗಿ ಅಳವಡಿಸಿಕೊಳ್ಳುತ್ತಿವೆ. ನಾನು ಪ್ರತಿದಿನವೂ ಯೋಗದ ಕೆಲವು ಆಸನಗಳನ್ನು ಅಭ್ಯಾಸಿ ಸುತ್ತಿದ್ದೇನೆ. ಇಂತಹ ಮೈಸೂರು ನಗರದ ಶಾಸಕನಾಗಿ ನಾನು ಇರುವುದು ನನ್ನ ಯೋಗ ಯೋಗ ಅದೃಷ್ಟವೇ ಸರಿ ಎಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತ್ತು ಅವರ ಅತಿಥಿ ಜಿಲ್ಲಾ ಆಯುಷ್ ಅಧಿಕಾರಿ, ಶ್ರೀಮತಿ ರೇಣುಕಾದೇವಿ ಅವರು ಮಾತನಾಡಿ ರಾಜ್ಯದ ಆರೋಗ್ಯ ಯೋಗ ಯೋಜನೆಯಲ್ಲಿ ಪ್ರಮುಖ ನಗರವಾಗಿ ಮೈಸೂರು ಜಿಲ್ಲೆಯನ್ನು ಹಾಗೂ ಪೈಲೆಟ್ ಯೋಜನೆಗೆ ನಂಜನಗೂಡನ್ನು ಆಯ್ಕೆ ಮಾಡಲಾಗಿದೆ ಎಂದರು.
ಮೈಸೂರು ಯೋಗ ಒಕ್ಕೂಟದ ಕಾರ್ಯದರ್ಶಿ ಹಾಗೂ ಜಿಎಸ್ಎಸ್ ಯೋಗ ಸಂಸ್ಥೆಯ ಮುಖ್ಯಸ್ಥರಾದ ಶ್ರೀಹರಿ ಅವರು ಮಾತನಾಡಿ ಪ್ರತಿವರ್ಷ ಯೋಗ ದಿನವನ್ನು ವಿಶಿಷ್ಟವಾಗಿ ಮೈಸೂರಿನಲ್ಲಿ ಎಲ್ಲ ಯೋಗ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ. ಈ ಬಾರಿ ಒಂದೆಡೆ ಲಕ್ಷಾಂತರ ಜನರು ಸೇರುವುದರ ಬದಲು , ನಗರದ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಸಂಘ ಸಂಸ್ಥೆಗಳು ದೇವಸ್ಥಾನ ಸಾರ್ವಜನಿಕ ಮೈದಾನ ಇಲಾಖೆ ಕಚೇರಿಗಳು ಹಾಗೂ ಅಪಾರ್ಟ್ಮೆಂಟ್ ಗಳಲ್ಲಿ ಸಾಮೂಹಿಕವಾಗಿ ಯೋಗ ಆಚರಣೆ ಮಾಡಲಾಗುವುದು. ಎಲ್ಲೆಡೆ ನಡೆದ ಯೋಗಅಭ್ಯಾಸವನ್ನು ದಾಖಲೆಯನ್ನಾಗಿಸಿ ಪ್ರಧಾನಿಯವರಿಗೆ ಸಲ್ಲಿಸಲಾಗುವುದು ಎಂದರು.

ದತ್ತ ಪೀಠದ ಸಭಾಂಗಣದಲ್ಲಿ ಒಂದು ಗಂಟೆಗಳ ಕಾಲ ನಡೆದ ಯೋಗ ಪೂರ್ವಭ್ಯಸದಲ್ಲಿ ಮೈಸೂರಿನ 6 ಯೋಗ ಸಂಸ್ಥೆಗಳ 500ಕ್ಕೂ ಹೆಚ್ಚು ಯೋಗಪಟುಗಳು, ಸಾಧಕರು ಹಾಗೂ ಬೋಧಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೈಸೂರಿನ ಅವಧೂತ ದತ್ತಪೀಠದ ಶ್ರೀಧತ್ತ ಅಂತರಾಷ್ಟ್ರೀಯ ಯೋಗ ಕೇಂದ್ರ ಮುಖ್ಯಸ್ಥರಾದ ರಾಮೇಶ್ವರರಾಜು, ಭಾರತ್ ಸ್ವಾಭಿಮಾನ ಟ್ರಸ್ಟ್ ನ ಮಧು, ಯೋಗ ಸ್ಪೋರ್ಟ್ಸ್ ಫೆಡರೇಷನ್ ನ ಗಣೇಶ್ ಕುಮಾರ್, ಮೈಸೂರು ಯೋಗ ಒಕ್ಕೂಟದ ದೇವರಾಜ್, ಶಿವಪ್ರಕಾಶ್, ಪಶುಪತಿ, ಮೈಸೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ನಂಜುಂಡಸ್ವಾಮಿ, ಮೃತ್ಯುಂಜಯ , ಜಿಎಸ್ಎಸ್ ಯೋಗ ಸಂಸ್ಥೆಯ ಸರಳ ಹಾಗೂ ರೂಪಶ್ರೀ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.








