ಮೈಸೂರು: ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಹಾಗೂ ಸುರಕ್ಷತಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ ಮಧ್ಯಭಾಗದಿಂದ ಆಗಸ್ಟ್ ಮೊದಲ ವಾರದವರೆಗೆ ಒಟ್ಟು 58 ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ರದ್ದುಗೊಳಿಸಿದೆ.
ಮೈಸೂರು, ಚೆನ್ನೈ, ಹುಬ್ಬಳ್ಳಿ, ಕಲಬುರಗಿ, ತುಮಕೂರು ಸೇರಿದಂತೆ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಎಕ್ಸ್ಪ್ರೆಸ್, ಪ್ಯಾಸೆಂಜರ್ ಹಾಗೂ ಮೆಮು ರೈಲುಗಳು ಇದರಲ್ಲಿ ಸೇರಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರದ್ದಾಗಲಿರುವ ರೈಲುಗಳು: ಮೈಸೂರು-ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್, ಎಸ್‌ಎಂವಿಟಿ ಬೆಂಗಳೂರು-ಮೈಸೂರು ಪ್ಯಾಸೆಂಜರ್, ಅರಸಿಕೆರೆ- ಮೈಸೂರು ಪ್ಯಾಸೆಂಜರ್ ರದ್ದಾಗಲಿವೆ. ಹಾಗೆಯೇ ಜೂನ್ 17ರಿಂದ ಆ.4ರವರೆಗೆ ಮೈಸೂರು-ಅರಸಿಕೆರೆ ಪ್ಯಾಸೆಂಜರ್ ರೈಲು ರದ್ದಾಗಲಿದೆ. ಜುಲೈ 16ರಿಂದ 19ರವರೆಗೆ ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮೇಮು ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ಮೇಮು ರದ್ದಾಗಲಿದೆ. ಆ.1ರಿಂದ 3ರವರೆಗೆ ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಎಕ್ಸ್ ಪ್ರೆಸ್ , ಕೆಎಸ್‌ಆರ್ ಬೆಂಗಳೂರು-ಅಶೋಕಪುರ ಎಕ್ಸ್ ಪ್ರೆಸ್ , ರೈಲು, ಜುಲೈ 31ರಂದು ಕಾಕಿನಾಡ ಟೌನ್-ಮೈಸೂರು ಎಕ್ಸ್ ಪ್ರೆಸ್ , ಹಾಗೂ ಆ.1ರಂದು ಮೈಸೂರು-ಕಾಕಿನಾಡ ಟೌನ್ ಎಕ್ಸ್ ಪ್ರೆಸ್ , ರಾಣಿಗುಂಟ-ಮೈಸೂರು ಎಕ್ಸ್ ಪ್ರೆಸ್ ರದ್ದಾಗಲಿದೆ.
ಜುಲೈ 31ರಿಂದ ಆಗಸ್ಟ್ 2ರವರಗೆ ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ವೀಕ್ಲಿ, ಅಶೋಕಪುರ -ಕೆಎಸ್‌ಆರ್ ಬೆಂಗಳೂರು ವೀಕ್ಲಿ ರೈಲು ರದ್ದಾಗಲಿದೆ.








