LatestMysore

ಪೊಲೀಸ್ -ಸಾರ್ವಜನಿಕರ ಸಭೆಯಲ್ಲಿ ದೂರುಗಳ ಸುರಿಮಳೆ… ಕ್ರಮದ ಭರವಸೆ ನೀಡಿದ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ

ಕೆ.ಆರ್.ನಗರ( ಸಂಘಟನೆ ಮಂಜುನಾಥ್): ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ವಾರದಲ್ಲಿ ಒಂದು ಬಾರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೊಲೀಸರು-ಸಾರ್ವಜನಿಕರ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿ, ಅವಳಿ ತಾಲ್ಲೂಕುಗಳಲ್ಲಿ ಮದ್ಯ ಮಾರಾಟ ದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ಹೆಚ್ಚಿನ ದೂರುಗಳನ್ನು ನೀಡಿದ್ದಾರೆ. ಈ ಸಂಬಂಧ ಅಬಕಾರಿ ಡಿಸಿ ಅವರ ಗಮನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗು ವುದು ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್‌ನವರು ಮನೆಗಳ ಬಳಿ ಹೋಗಿ ಸಾಲಗಾರರಿಗೆ ಅವಮಾನ ಮಾಡಿ ಹಣ ಕೇಳಿದರೆ ಅಂತಹ ಮೈಕ್ರೋ ಫೈನಾನ್ಸ್ ವಿರುದ್ಧ ಕೇಸು ದಾಖಲಿಸಲಾಗುವುದು. ಬೈಕ್ ಮತ್ತು ವಾಹನಗಳನ್ನು ಸೀಜ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾ ಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ, ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿ ಯೊಂದು ಪೊಲೀಸ್ ಠಾಣೆಗೂ ಭೇಟಿ ನೀಡಿ ಸಾರ್ವಜನಿಕರ ಕಂದು ಕೊರತೆ, ಅಹ ವಾಲು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿ ಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸಾರ್ವಜನಿಕರು, ವಿವಿಧ ರೈತ ಸಂಘಟನೆಯವರು, ದಲಿತ ಮುಖಂಡರು ಮಾತನಾಡಿ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಮದ್ಯದ ಹಾವಳಿ ಹೆಚ್ಚಾಗಿದೆ. ರೈತರು ಜಮೀ ನಿನಲ್ಲಿ ಉಳುಮೆ ಮಾಡಲುಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ಜಮೀನುಗಳ ಪಕ್ಕದಲ್ಲಿ ವೈನ್ಸ್ ಸ್ಟೋರ್, ಬಾರ್ ತೆರೆದಿರುವುದರಿಂದ ಕುಡಿದ ಬಾಟಲಿಗಳನ್ನು ರೈತರ ಗದ್ದೆ, ಜಮೀನಿನಲ್ಲಿ ಹಾಕುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಅಧಿಕಾರಿ ಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಹೊಸ ಠಾಣೆ ಸ್ಥಾಪನೆ, ಸಂಚಾರ ಠಾಣೆ ಸ್ಥಾಪನೆ, ವಿ.ವಿ.ರಸ್ತೆ, ಸಿ.ಎಂ.ರಸ್ತೆ, ಬಜಾರ್ ರಸ್ತೆ, 7ನೇ ಕ್ರಾಸ್ ರಸ್ತೆ ಸಂಚಾರ ವ್ಯವಸ್ಥೆ ಸುಧಾರಣೆ, ಪಟ್ಟಣದ ಗರುಡಗಂಭವೃತ್ತದಿಂದ ಪುರಸಭೆ ವೃತ್ತದವರೆಗೂ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ನಿರ್ಬಂಧ ಮುಂತಾದ ವಿಚಾರಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಮನೆಯನ್ನು ಬಾಡಿಗೆಗೆ ಕೊಡುವ ವೇಳೆ ಆಧಾರ್ ಕಾರ್ಡ್, ಇತರೆ ದಾಖಲಾತಿಗಳನ್ನು ಪಡೆದುಕೊಂಡು ನೀಡುವಂತೆ ಸೂಚಿಸಬೇಕು. ಪಟ್ಟಣದ ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು. ಪಟ್ಟಣದಲ್ಲಿ ಬೀಟ್ ಪೊಲೀಸ್ ಬರುತ್ತಿಲ್ಲ. ಇದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೀಟ್ ಪೊಲೀಸ್ ನಿಯೋಜಿಸಬೇಕು ಎಂದು ಕೆಲವು ಸಾರ್ವಜನಿಕರು ಒತ್ತಾಯಿಸಿದರು.

ಮಳಲಿ ಗ್ರಾಮದಲ್ಲಿ ಹತ್ತು ಕುಟುಂಬಗಳಿಗೆ ಜಮೀನು ವಾಪಸ್ ಕೊಡಿಸಬೇಕು. ಪಟ್ಟಣದ ಪಶು ಆಸ್ಪತ್ರೆ ಹಿಂಭಾಗದಲ್ಲಿ ಅಲೆಮಾರಿ ಜನಾಂಗಕ್ಕೆ ತಗಡು ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಜಿ ಪ್ಲಸ್ ಮನೆಗಳನ್ನು ನಿರ್ಮಿಸಿಕೊಡಬೇಕೆಂಬ ಕೇಳಿಬಂದಿತು.

ಅಹವಾಲು ಸ್ವೀಕರಿಸಿ ಮಾತನಾಡಿದ ಎಸ್ಪಿ -ಮಲ್ಲಿಕಾರ್ಜುನ ಬಾಲದಂಡಿ ಅವರು, ಕೆ.ಆ‌ರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಠಾಣೆಗಳಿದ್ದು ಗ್ರಾಮಾಂತರ ಠಾಣೆ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಪರಾಧಗಳನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಡಿವೈಎಸ್‌ಪಿ ಟಿ.ಬಿ.ರಾಜಣ್ಣ, ತಹಸಿಲ್ದಾ‌ರ್ ಜಿ.ಸುರೇಂದ್ರಮೂರ್ತಿ, ತಾ.ಪಂ. ಇಒ ಕುಲದೀಪ್, ಪಟ್ಟಣ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಎಸ್‌ಐ ಸ್ವಾಮಿ ಗೌಡ, ಸಾಲಿಗ್ರಾಮ ಠಾಣೆ ಎಸ್‌ಐ ವಿಜಯ ರಾಜ್, ಎಎಸ್‌ಐ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಡಿಇಒ ರವಿ, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಹಿರಿಯ ಆರೋಗ್ಯ ಸಹಾಯಕ ರಾಜೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಪ್ರಕಾಶ್

ತಾ.ಕುರುಬರ ಸಂಘದ ಅಧ್ಯಕ್ಷ ಚೀರಹಳ್ಳಿ ಶಿವಣ್ಣ, ರಾಜ್ಯ ರೈತ ಪರ್ವದ ಗೌರವಾಧ್ಯಕ್ಷ ಜೆ.ಎಂ.ಕುಮಾ‌ರ್, ಪುರಸಭೆ ಮಾಜಿ ಸದಸ್ಯ ಅಸ್ಲಂಪಾಷ, ದಲಿತ ಸಂಘರ್ಷ ಸಮಿತಿ ಸಂಚಾಲಕ ದಿವಾಕರ್, ಸಾಮಾಜಿಕ ಕಾರ್ಯಕರ್ತ ಬಿ.ಡಿ.ಕೃಷ್ಣ, ಹಿಂದೂ ಜಾಗೃತಿ ವೇದಿಕೆ ಮುಖಂಡ ಕೃಷ್ಣ ಭಟ್, ಭಜರಂಗದಳ ಮುಖಂಡ ನಂಜುಂಡ, ಪಾರುಪತ್ತೆಗಾರ್ ಆರತಿ, ಮೂಲೆಪೆಟ್ಲು ಸಿದ್ದಪ್ಪ ನೂರಾರು ಮಂದಿ ಸಾರ್ವಜನಿಕರು  ಸಭೆಯಲ್ಲಿ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want