LatestMysore

ಗ್ರಾಮೀಣ ಭಾಗದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಸಿದ್ದರಾಮಯ್ಯ

ಮೈಸೂರು: ಗ್ರಾಮೀಣ ಭಾಗದ ಮಕ್ಕಳು ಕೆ.ಎ.ಎಸ್. ಮತ್ತು ಐ.ಎ.ಎಸ್. ತರಬೇತಿ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಜಯನಗರ 2ನೇ ಹಂತದಲ್ಲಿ ಶ್ರೀಕಾಗಿನೆಲೆ ಮಹಾಸಂಸ್ಥಾನದ ವತಿಯಿಂದ ನಿರ್ಮಿಸುತ್ತಿರುವ ಕೆ.ಎ.ಎಸ್., ಐ.ಎ.ಎಸ್. ತರಬೇತಿ ಕೇಂದ್ರದ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಹಣವಿರುವ ವಿದ್ಯಾರ್ಥಿಗಳು ಕೆ.ಎ.ಎಸ್, ಐ.ಎ.ಎಸ್. ತರಬೇತಿ ಪಡೆಯಲು ಬೆಂಗಳೂರು ಹೈದರಾಬಾದ್, ದೆಹಲಿಗಳಿಗೆ ಹೋಗುತ್ತಿದ್ದಾರೆ. ಆದರೆ ಬಡವರ, ರೈತರ ಮಕ್ಕಳಿಗೆ ಅಲ್ಲಿಗೆ ಹೋಗಿ ತರಬೇತಿ ಪಡೆಯಲು ಆಗುವುದಿಲ್ಲ. ಆದ್ದರಿಂದ ಮೈಸೂರಿನಲ್ಲಿ ಗುಣಮಟ್ಟದ ತರಬೇತಿ ಕೊಡುವ ಕೇಂದ್ರವನ್ನಾಗಿ ಮಾಡಿರಿ ಎಂದು ಎಂ. ರಾಮಯ್ಯರವರಿಗೆ ಸೂಚಿಸಿದರು.

ಸಿದ್ದರಾಮಯ್ಯರವರ ನಿಕಟಪೂರ್ವ ಜಂಟಿಕಾರ್ಯದರ್ಶಿ ಎಂ. ರಾಮಯ್ಯ ಮಾತನಾಡಿ ಈ ಕಟ್ಟಡದ ಕಾಮಗಾರಿ 3 ತಿಂಗಳಲ್ಲಿ ಮುಗಿಯಲಿದ್ದು, ಈ ಕಟ್ಟಡದಲ್ಲಿ ಸುಸಜ್ಜಿತ ಲೈಬ್ರರಿ, ಪಾಠಮಾಡಲು ವಿಶಾಲವಾದ ಕೊಠಡಿ ರೂಂಗಳು ಹೀಗೆ ಒಂದು ತರಬೇತಿ ಕೇಂದ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.  ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪುಟ್ಟಬಸವೇಗೌಡ, ದಿನೇಶ್ ಕುಮಾರ್, ಮಂಜುನಾಥ್ ಹಾಜರಿದ್ದರು.

admin
the authoradmin

Leave a Reply