CinemaLatest

ಭರ್ಜರಿ ಸದ್ದು ಮಾಡುತ್ತಿರುವ ನವಲಗುಂದದ ಯುವಕನ  “ಫಸ್ಟ್ ಸೈಟ್ ” ಆಲ್ಬಮ್ ಸಾಂಗ್

ಬೆಂಗಳೂರು: ಮೂಲತಃ ನವಲಗುಂದದ ಗ್ರಾಮೀಣ ಭಾಗದ ಯುವಕ ರಘುವೀರ ಹೆಬ್ಬಾರ್ ಬೆಂಗಳೂರಿನಲ್ಲಿ  ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ “ಫಸ್ಟ್ ಸೈಟ್” ಎಂಬ ಆಲ್ಬಮ್ ಸಾಂಗ್ ಮೂಲಕ ಎಲ್ಲಡೆ ಮನೆಮಾತಾಗಿದ್ದಾರೆ.

ತಮ್ಮ ಬಿಡುವಿನ ದಿನಗಳಲ್ಲಿ ಹಾಡುಗಳ ರಚನೆ ಹಾಗೂ ತಮ್ಮ ಹಾಡಿಗೆ ತಾವೇ ಮ್ಯೂಸಿಕ್ ಕಂಪೋಸ್ ಮಾಡುವ ಆಸಕ್ತಿಯುಳ್ಳ ಇವರು ತಮ್ಮದೇ ಒಂದು ಆಲ್ಬಮ್ ಸಾಂಗ್ ಮಾಡಬೇಕೆಂದು ಕನಸು ಕಂಡರು. ಇವರ ಕನಸಿಗೆ  ಜೊತೆಗಿರುವ ಸ್ನೇಹಿತರು ಕೈಜೋಡಿಸಿದರು. ಯೋಗೇಶ್ ರಾವ್ ನಿರ್ದೇಶನಕ್ಕೆ ಇಳಿದರು. ರಾಹುಲ್ ಠಾಕೂರ್ ತಮ್ಮ ಕ್ಯಾಮೆರಾ ಕೈಚಳಕ ತೋರಿದರು. ತಾಂತ್ರಿಕ ವರ್ಗದಲ್ಲಿ ಅಮಿತ್,ಶಂಕರ್, ದೀಪಕ್ ಒಳಗೊಂಡ ತಂಡ ಕಟ್ಟಿಕೊಂಡು ನಿರ್ಮಿಸಿದ್ದೇ “ಫಸ್ಟ್ ಸೈಟ್ ” ಎಂಬ ಆಲ್ಬಮ್ ಸಾಂಗ್.

ಈ ಹಾಡಿನಲ್ಲಿ ಇದೀಗ ಚಿತ್ರರಂಗಕ್ಕೆ ಕಾಲಿಟ್ಟ ವಿದ್ಯಾಶ್ರೀ ಹಾಗೂ ಕಾರ್ತಿಕ ಗೌಡ ಉತ್ತಮವಾಗಿ ಅಭಿನಯಿಸಿದರು. ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತವರು ಚಿತ್ರರಂಗದ ಚಲನಚಿತ್ರ ಪತ್ರಕರ್ತರು, ಪಿ.ಆರ್.ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಅವರು. ಈಗಾಗಲೇ ಬಿಡುಗಡೆಗೊಂಡ ಈ ಹಾಡು ‘ರಾಗ ರಶ್’ ಎಂಬ ಯುಟ್ಯೂಬ್‌ನಲ್ಲಿ ಭರ್ಜರಿ ಸದ್ದು ಮಾಡಿ ಎಲ್ಲರ ಗಮನ ಸೆಳೆದಿದೆ. ಹೊಸಬರ ಮೊದಲ ಪ್ರಯತ್ನಕ್ಕೆ ಇಷ್ಟು ಪ್ರೋತ್ಸಾಹ ಸಿಕ್ಕಿದ್ದಕ್ಕೆ ತಂಡ ಬಹಳಷ್ಟು ಖುಷಿ ಆಗಿದ್ದು ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಜೋಡಿಸಲು ಕಾರಣವಾಗಿದೆ.

ಈ ಹಾಡುಗಳಿಗೆ ಹಿರಿಯ ಚಿತ್ರ ಸಾಹಿತಿ, ನಿರ್ದೇಶಕರು, ಸಿನಿ ಪತ್ರಕರ್ತರಾದ ಹಿರಿಯೂರು ರಾಘವೇಂದ್ರ, ಚಿತ್ರ ನಿರ್ದೇಶಕ ಬಿ.ಎ. ಪುರುಷೋತ್ತಮ ಓಂಕಾರ ಸ್ವಾಮಿ, ಹಿಟ್ ಧಾರಾವಾಹಿಗಳ ನಿರ್ದೇಶಕ ಪೃಥ್ವಿರಾಜ್ ಕುಲಕರ್ಣಿ ಹಾಗೂ ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ ಸುನಂದಾ ಕಲ್ಬುರ್ಗಿ ಅಲ್ಲದೆ ಹಲವರು ಹಾಡು ಮೆಚ್ಚಿ ವಿಡಿಯೋಗಳ ಮೂಲಕ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಾಡಿನ ಚಿತ್ರೀಕರಣ ಬೆಂಗಳೂರಿನ ನಂದಿ ಸಿಟಾ ಡಲ್ ಹಾಗೂ ಸುತ್ತಮುತ್ತ ನಡೆದಿದೆ.

ನಿತ್ಯದ ಕೆಲಸದಲ್ಲಿ ಒಂದಷ್ಟು ಬಿಡುವಿದ್ದಾಗ ಹಾಡು ಕೇಳುವ ಹವ್ಯಾಸ ಇತ್ತು. ಹಾಗೆಯೇ ಬರೆಯಲು ಶುರು ಮಾಡಿ ಮ್ಯೂಸಿಕ್ ಮಾಡುವುದನ್ನು ಕಲಿತೆ. ಆದರೆ ನನ್ನ ಹಾಡಿನಲ್ಲಿ ಎಂತಹ  ಶಕ್ತಿ ಇದೆ ಎಂದು  ಆತ್ಮೀಯರು ಹಾಗೂ ಕುಟುಂಬದವರು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದಾಗಲೆ ಗೊತ್ತಾಯಿತು. ಹೀಗಾಗಿ  ಹಾಡಿನ ಆಲ್ಬಮ್‌ಗಳನ್ನು ಇನ್ನಷ್ಟು  ಮಾಡಬೇಕು ಎಂಬ ಉತ್ಸಾಹ ನನಗೂ, ನಮ್ಮ ತಂಡಕ್ಕೂ ಬಂದಿದೆ ಎಂದು ರಘುವೀರ್   ಹೇಳುತ್ತಾರೆ. ಒಟ್ಟಿನಲ್ಲಿ ಸಾಪ್ಟವೇರ ಉದ್ಯೋಗಿ ಮುಂದಿನ ದಿನಗಳಲ್ಲಿ ಹೊಸಪ್ರಯೋಗಗಳ ಮೂಲಕ ಸಂಗೀತಕ್ಷೇತ್ರದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸೋಣ.

admin
the authoradmin

Leave a Reply

Translate to any language you want