LatestMysore

ಜೂ.27, ಕೆ.ಆರ್.ನಗರದಲ್ಲಿ ಅರ್ಥಪೂರ್ಣ ಕೆಂಪೇಗೌಡ ಜಯಂತಿ ಆಚರಣೆ:ಶಾಸಕ ಡಿ ರವಿಶಂಕರ್

ಕೆ.ಆರ್.ನಗರ (ಸಂಘಟನೆ ಮಂಜುನಾಥ್): ಕೆ ಆರ್ ನಗರ ಹಾಗೂ ಸಾಲಿಗ್ರಾಮ ಅವಳಿ ತಾಲೂಕಿನ ತಾಲೂಕುಗಳ ಆಡಳಿತ ಮತ್ತು ಎಲ್ಲ ಸಮುದಾಯದವರ ಒಗ್ಗೂಡುವಿಕೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಇದೇ ತಿಂಗಳ 27ರ ಶನಿವಾರದಂದು ಕೆ ಆರ್ ನಗರ ತಾಲೂಕು ಕಚೇರಿ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಡಿ ರವಿಶಂಕರ್ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸರ್ವ ಜನಾಂಗದ ಉದ್ದಾರಕ್ಕೆ ಶ್ರಮಿಸಿದವರು ನಾಡಪ್ರಭು ಕೆಂಪೇಗೌಡ ಅವರು ಅವರ ಜಯಂತಿಯನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ಯಾವುದೇ ಗೊಂದಲಕ್ಕೆ ಆಸ್ಪದ ಕೊಡದ ಹಾಗೆ ಮಹಾತ್ಮರ ಜಯಂತಿಯನ್ನು ಆಚರಿಸೋಣ ಎಂದು ಕರೆ ನೀಡಿದರು.

ಜೂನ್ 27ರ ಶನಿವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಾಲೇಜು ಮೈದಾನದಿಂದ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇಟ್ಟು ಮೆರವಣಿಗೆಯ ಮೂಲಕ ತರಲಾಗುವುದು. ಈ ಸಂದರ್ಭದಲ್ಲಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ, ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮಾಲಾರ್ಪಣೆ ಮಾಡಿ ನೂರು ಕಳಶಗಳ ಪೂರ್ಣ ಕುಂಬದ ಜೊತೆಗೆ ತಾಲೂಕು ಕಚೇರಿ ಆವರಣಕ್ಕೆ ತರಲಾಗುವುದು.  ಮೆರವಣಿಗೆ ಸಾಗುವ ದಾರಿಯಲ್ಲಿ ಹಸಿರ ತೋರಣ ಶೃಂಗಾರವನ್ನು ಮಾಡಲಾಗುವುದಲ್ಲದೆ ವಿವಿಧ ಕಲಾತಂಡಗಳನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ನಾಡಪ್ರಭು ಕೆಂಪೇಗೌಡ ಅವರ ಜೀವನ ಚರಿತ್ರೆಯನ್ನು ಹಾಗೂ ಅವರ ಜೀವನದ ಸಾಧನೆಯನ್ನು ಎಳೆಯಾಗಿ ಬಿಚ್ಚಿಟ್ಟು ನಮಗೆ ಅರ್ಥ ಮಾಡಿಸುವಂತಹ ವಾಗ್ಮಿಗಳನ್ನು ಪ್ರಧಾನ ಭಾಷಣಕಾರರನ್ನಾಗಿ ಕರೆಸಲು ತಹಶೀಲ್ದಾರ್ ರವರಿಗೆ ಈ ಸಂದರ್ಭದಲ್ಲಿ ಸೂಚಿಸಿದರು. ಅಲ್ಲದೆ ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಜೊತೆಗೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕೂಡ ಗೌರವಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ನಗರ ತಹಶೀಲ್ದಾರ್ ಸುರೇಂದ್ರ ಮೂರ್ತಿ ಅವರು ಹಿಂದಿನ ವರ್ಷದ ಆಚರಣೆಯಲ್ಲಿ ಆದಂತಹ ಗೊಂದಲವನ್ನು ಹೋಗಲಾಡಿಸುವ ಹಾಗೆ ಎಲ್ಲಾ ಸಮುದಾಯದವರ ಒಮ್ಮತದೊಂದಿಗೆ ಈ ಬಾರಿ ಜಯಂತಿಯನ್ನು ಯಶಸ್ವಿಗೊಳಿಸೋಣ  ಎಂದು ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ತಹಶೀಲ್ದಾರ್ ರುಖಿಯ ಬೇಗಂ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡುವ ಕೆಲಸ ಎಲ್ಲ ಸಾರ್ವಜನಿಕರಿಂದ ಆಗಬೇಕಿದೆ ಎಂದರು.

ಸಭೆಯಲ್ಲಿ ಕೆ.ಆರ್.ನಗರ  ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಲದೀಪ್, ಸಾಲಿಗ್ರಾಮ ತಾಲೂಕು ಕಾರ್ಯನಿರ್ವಹಣಾಧಿಕಾರಿ ಎ ಎನ್ ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಕೃಷ್ಣಪ್ಪ, ವೃತ್ತ ನಿರೀಕ್ಷಕ ಶಿವಪ್ರಕಾಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಪುರಸಭೆ ಮುಖ್ಯ ಅಧಿಕಾರಿ ಜಿ ಎಸ್ ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ಸಾಲಿಗ್ರಾಮ  ತಾಲೂಕು ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿಯ ಅಧ್ಯಕ್ಷ ಉದಯಶಂಕರ್, ಕೆ ಆರ್ ನಗರ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನಗಳ ಅಧ್ಯಕ್ಷ  ಮಾದೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಕಾಂಗ್ರೆಸ್ ವಕ್ತಾರ ಜಾಬೀರ್ ರೆಹಮಾನ್, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಕುಮಾರ್, ಅರ್ಜುನ ಹಳ್ಳಿ ಸಂಪತ್, ಜೊತೆಗೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want