LatestLife style

ಸ್ಟೇಫ್ರೀ®️ ಎಕ್ಸ್ ಪರ್ಟ್ ಎಕ್ಸ್.ಎಲ್…. ಆ ದಿನಗಳಲ್ಲಿ ಹೆಣ್ಮಕ್ಕಳಿಗೆ ಆರಾಮದಾಯಕ!

ಮುಟ್ಟಿನ ನೈರ್ಮಲ್ಯದ ಮುಂಚೂಣಿಯ ಬ್ರಾಂಡ್ ಸ್ಟೇಫ್ರೀ®️ ಮಹಿಳೆಯರ ಮುಟ್ಟಿನ ಸಮಯದಲ್ಲಿ ಅತ್ಯುತ್ತಮ ರಕ್ಷಣೆ ಮತ್ತು ಆರಾಮವನ್ನು ನೀಡುವುದರ ಜೊತೆಗೆ, ಸುಲಭವಾಗಿ ಸಾಗಿಸಲು ಮತ್ತು ವಿಲೇವಾರಿ ಮಾಡಲು ವಿನ್ಯಾಸಗೊಳಿಸಲಾದ ಹೊಸ ಮುಟ್ಟಿನ ನೈರ್ಮಲ್ಯ ಉತ್ಪನ್ನ ಸ್ಟೇಫ್ರೀ®️ ಎಕ್ಸ್‌ಪರ್ಟ್ ಎಕ್ಸ್.ಎಲ್’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಹೊಸ ಉತ್ಪನ್ನದ ಬಿಡುಗಡೆಯೊಂದಿಗೆ, ಸ್ಟೇಫ್ರೀ®️ ಮಹಿಳಾ ನೈರ್ಮಲ್ಯ ವಿಭಾಗದಲ್ಲಿ ತನ್ನ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದ್ದು, ಮಹಿಳೆಯರ ಬದಲಾಗುತ್ತಿರುವ ಜೀವನಶೈಲಿ ಮತ್ತು ಅಗತ್ಯತೆಗಳಿಗೆ ಪೂರಕವಾದ ಅತ್ಯುತ್ತಮ ದರ್ಜೆಯ ಪರಿಹಾರವನ್ನು ಒದಗಿಸಿದೆ.  ಸ್ಟೇಫ್ರೀ®️ ಎಕ್ಸ್‌ಪರ್ಟ್ ಎಕ್ಸ್‌ಎಲ್ ಬಿಡುಗಡೆಯು ಮಹಿಳೆಯರ ಒಟ್ಟಾರೆ ಋತುಚಕ್ರದ ನಿರ್ವಹಣೆಯಲ್ಲಿ ಉದ್ಭವಿಸುತ್ತಿರುವ ಹೊಸ ಅಗತ್ಯತೆಗಳನ್ನು ಪೂರೈಸಲು ಬ್ರಾಂಡ್ ಅನ್ವೇಷಣೆಯ ಮೇಲೆ ಹೊಂದಿರುವ ನಿರಂತರ ಗಮನವನ್ನು ಪುನರುಚ್ಚರಿಸಿದೆ. ಸ್ಟೇಫ್ರೀ®️ ಎಕ್ಸ್‌ಪರ್ಟ್ ಎಕ್ಸ್‌.ಎಲ್. ಅನ್ನು 3-ಇನ್-1 ರಕ್ಷಣೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಉನ್ನತ ರಕ್ಷಣೆ: ಇದು ಆಳವಾದ ಮತ್ತು ತಕ್ಷಣದ ಹೀರಿಕೊಳ್ಳುವಿಕೆಗಾಗಿ ಜೆಲ್ ಲಾಕ್ ಪಾಕೆಟ್ಸ್  ಅನ್ನು ಹೊಂದಿದೆ. ಇದು ದ್ರವವನ್ನು ತ್ವರಿತವಾಗಿ ಹಿಡಿದಿಡುವ ಮೂಲಕ ದಿನವಿಡೀ ಶುಷ್ಕತೆಯ ಅನುಭವ ಮತ್ತು ರಕ್ಷಣೆಯನ್ನು ನೀಡುತ್ತದೆ.

ಉತ್ತಮ ಆರೋಗ್ಯ: ಗಾಳಿಯಾಡುವ ಮತ್ತು ಚರ್ಮಕ್ಕೆ ಮೃದುವಾದ ಅನುಭವವನ್ನು ನೀಡಲು ಏರ್ ಸಾಫ್ಟ್^ ಕವರ್   ಅನ್ನು ಹೊಂದಿದೆ, ಇದು ಬಳಸುವ ಉದ್ದಕ್ಕೂ ಸೌಖ್ಯವನ್ನು ಖಾತ್ರಿಪಡಿಸುತ್ತದೆ. ಕಿರಿದಾಗಿದೆ ಮತ್ತು ಜೇಬಿನಲ್ಲಿ ಹಿಡಿಸುತ್ತದೆ: ಪ್ರತಿಯೊಂದು ನ್ಯಾಪ್‌ಕಿನ್ ಅನ್ನು ಪ್ರತ್ಯೇಕವಾಗಿ ಸುತ್ತಿಡಲಾಗಿದ್ದು ಮಹಿಳೆಯರು ಇದನ್ನು ಸುಲಭವಾಗಿ ಸಾಗಿಸಲು ಮತ್ತು ಬಳಸಿದ ನಂತರ ಸುಲಭವಾಗಿ ವಿಲೇವಾರಿ ಮಾಡಲು ನೆರವಾಗುತ್ತದೆ.

ಸ್ಟೇಫ್ರೀ ಉತ್ಪನ್ನಗಳ ಶ್ರೇಣಿಯ ವಿಸ್ತರಣೆಯ ಕುರಿತು ಸ್ಟೇಫ್ರೀ ಸಂಸ್ಥೆಯ ಮಾರ್ಕೆಟಿಂಗ್ ಡೈರೆಕ್ಟರ್ ಸುಪ್ರಿಯಾ ಶ್ರೀನಿವಾಸ್, “ಪ್ರತಿಯೊಬ್ಬ ಮಹಿಳೆಯ ಮುಟ್ಟಿನ ಅನುಭವವು ವಿಭಿನ್ನವಾಗಿರುತ್ತದೆ ಎಂಬುದನ್ನು ಸ್ಟೇಫ್ರೀನಲ್ಲಿ ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವರಿಗಾಗಿ ಋತುಚಕ್ರದ ಅನುಭವವನ್ನು ಉತ್ತಮಗೊಳಿಸಲು ನಿರಂತರವಾಗಿ ಪರಿಹಾರಗಳನ್ನು ರೂಪಿಸುತ್ತಿದ್ದೇವೆ. ಸ್ಟೇಫ್ರೀ®️ ಎಕ್ಸ್‌ಪರ್ಟ್ ಎಕ್ಸ್‌ಎಲ್ ಅಂತಹ ಒಂದು ಕ್ರಾಂತಿಕಾರಿ ಆವಿಷ್ಕಾರವಾಗಿದ್ದು ಇದು ತನ್ನ ವಿಶಿಷ್ಟ ಗುಣಗಳೊಂದಿಗೆ ಅತ್ಯುತ್ತಮವಾದ 3-ಇನ್-1 ರಕ್ಷಣೆಯನ್ನು ನೀಡುತ್ತದೆ.

ಆಳವಾದ ಮತ್ತು ತಕ್ಷಣದ ಹೀರಿಕೊಳ್ಳುವಿಕೆಗಾಗಿ ಜೆಲ್ ಲಾಕ್ ಪಾಕೆಟ್ಸ್, ಚರ್ಮಕ್ಕೆ ಮೃದುವಾದ ಅನುಭವ ನೀಡಲು ಏರ್ ಸಾಫ್ಟ್ ಕವರ್ ಮತ್ತು ಸುಲಭವಾಗಿ ಸಾಗಿಸಲು ಹಾಗೂ ವಿಲೇವಾರಿ ಮಾಡಲು ಪ್ರತ್ಯೇಕವಾಗಿ ಸುತ್ತಿಡಲಾದ ಜೇಬಿನಲ್ಲಿ ಹಿಡಿಸುವ ವಿನ್ಯಾಸ. ನಮ್ಮ ಗ್ರಾಹಕರು ತಮ್ಮ ಮುಟ್ಟಿನ ದಿನಗಳನ್ನು ನಿರ್ವಹಿಸಲು ತಮಗೆ ಯಾವುದು ಉತ್ತಮವೋ ಅದನ್ನು ಆರಿಸಿಕೊಳ್ಳಲು ಅನುಕೂಲವಾಗುವಂತೆ ವೈವಿಧ್ಯಮಯ ಪರಿಹಾರಗಳನ್ನು ನೀಡಲು ಸ್ಟೇಫ್ರೀ ಸದಾ ಬದ್ಧವಾಗಿದೆ” ಎಂದಿದ್ದಾರೆ.

“ಈ ಉತ್ಪನ್ನದ ಬಿಡುಗಡೆಗೆ ವೇಗ ತುಂಬಲು ಸ್ಟೇಫ್ರೀ ಸಂಸ್ಥೆಯು ಅದಿತಿ ಭಾಟಿಯಾ, ಅಶ್ನೂರ್ ಕೌರ್ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಒಂದು ಬೃಹತ್ ಇನ್‌ಫ್ಲುಯೆನ್ಸರ್ ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಮೂಲಕ ಇಂದಿನ ಸಕ್ರಿಯ ಹಾಗೂ ಡಿಜಿಟಲ್ ಮಾಧ್ಯಮಗಳನ್ನು ಹೆಚ್ಚಾಗಿ ಬಳಸುವ ಯುವ ಗ್ರಾಹಕರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ನಟಿ ಅದಿತಿ ಭಾಟಿಯಾ ಅವರೊಂದಿಗಿನ ಸ್ಟೇಫ್ರೀಯ ಈ ಡಿಜಿಟಲ್ ಅಭಿಯಾನದ ಚಿತ್ರವು ಮುಟ್ಟಿನ ದಿನಗಳಲ್ಲಿ ಮಹಿಳೆಯೊಬ್ಬರ ಸಾಮಾನ್ಯ ದಿನ ಹೇಗಿರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ—ಸದಾ ಕಾಡುವ ರಕ್ತಸ್ರಾವದ ಆತಂಕ, ಪ್ಯಾಡ್ ಬಳಕೆಯಿಂದಾಗುವ ಚರ್ಮದ ಕಿರಿಕಿರಿ ಮತ್ತು ಹೊರಗಡೆ ಹೋದಾಗ ಪ್ಯಾಡ್‌ಗಳನ್ನು ಜೊತೆಯಲ್ಲೇ ಸಾಗಿಸುವ ಹೆಚ್ಚುವರಿ ಮಾನಸಿಕ ಹಾಗೂ ದೈಹಿಕ ಹೊರೆ. ಆ ಮಹಿಳೆಯು ತನ್ನ ಆಂತರಿಕ ಆಲೋಚನೆಗಳು ಮತ್ತು ಆತಂಕಗಳನ್ನು ಎದುರಿಸುತ್ತಿರುವಾಗ, ಸ್ಟೇಫ್ರೀ®️ ಎಕ್ಸ್‌ಪರ್ಟ್ ಎಕ್ಸ್‌.ಎಲ್.  ಅವಳ ಮುಟ್ಟಿನ ಸವಾಲುಗಳನ್ನು ಹೆಚ್ಚು ಸರಾಗವಾಗಿ ನಿಭಾಯಿಸಲು ಹೇಗೆ ಸಕ್ರಿಯ ಪಾತ್ರ ವಹಿಸುತ್ತದೆ ಎಂಬುದನ್ನು ಈ ಚಿತ್ರವು ಎತ್ತಿ ತೋರಿಸುತ್ತದೆ!

ಡಿಜಿಟಲ್ ವೇದಿಕೆಗಳಾದ್ಯಂತ ಇಂತಹ ನೈಜ ಮತ್ತು ಜನಸಾಮಾನ್ಯರಿಗೆ ಮುಟ್ಟುವ ವಿಷಯಗಳ ಮೂಲಕ, ಸ್ಟೇಫ್ರೀ ಸಂಸ್ಥೆಯು ವಿಶ್ವಾಸಾರ್ಹ ಮುಟ್ಟಿನ ನೈರ್ಮಲ್ಯ ಪರಿಹಾರಗಳನ್ನು ನೀಡುವ ಮೂಲಕ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

3-ಇನ್-1 ರಕ್ಷಣೆಯೊಂದಿಗೆ ಹೊಸ ಸ್ಟೇಫ್ರೀ®️ ಎಕ್ಸ್ ಪರ್ಟ್ ಎಕ್ಸ್.ಎಲ್. ದೇಶಾದ್ಯಂತ ರೀಟೇಲ್ ಚಾನೆಲ್ ಗಳು, ಆಧುನಿಕ ವ್ಯಾಪಾರ, ಸಾಮಾನ್ಯ ವ್ಯಾಪಾರ ಮಳಿಗೆಗಳು, ಔಷಧ ಮಳಿಗೆಗಳು, ಇಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಲಭ್ಯ. ಆರು ಯೂನಿಟ್ ಗಳಿಗೆ ರೂ. ₹48/- (ಎಲ್ಲ ತೆರಿಗೆಗಳು ಒಳಗೊಂಡು) ಬೆಲೆ ಹೊಂದಿರುವ ಸ್ಟೇಫ್ರೀ®️ ಎಕ್ಸ್ ಪರ್ಟ್ ಎಕ್ಸ್.ಎಲ್. 6, 18 ಮತ್ತು 40 ಯೂನಿಟ್ ಗಳ ಪ್ಯಾಕ್ ಗಳಲ್ಲಿ ಲಭ್ಯ ಇವೆ.

admin
the authoradmin

Leave a Reply

Translate to any language you want