LatestNews

ಮಗು ಗಂಟಲಲ್ಲಿತ್ತು ಚಿಕ್ಕ ಬಲ್ಬ್…  ಯಶಸ್ವಿಯಾಗಿ ಹೊರ ತೆಗೆದ ಮಡಿಕೇರಿ ವೈವಾಸ್ ಆಸ್ಪತ್ರೆ ವೈದ್ಯರ ತಂಡ

 ಮಡಿಕೇರಿ: ಮಕ್ಕಳನ್ನು ನೋಡಿಕೊಳ್ಳುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಮಡಿಕೇರಿಯಲ್ಲಿ ಎಂಟು ತಿಂಗಳ ಮಗು ಚಿಕ್ಕದಾದ ಎಲ್ ಇಡಿ ಬಲ್ಬ್ ನುಂಗಿರುವ ಘಟನೆಯೇ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ವೈದ್ಯರು ಮಗುವಿನ  ಗಂಟಲಲ್ಲಿ ಸಿಲುಕಿದ್ದ ಬಲ್ಬ್ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಪಾರು ಮಾಡಿದ್ದು ಅವರ ಕಾರ್ಯಕ್ಕೆ ಶಹಬ್ಬಾಸ್ ಎನ್ನಬೇಕಾಗುತ್ತದೆ.

ಎಂಟು ತಿಂಗಳ ಮಗು ನಿರಂತರವಾಗಿ ಅಳುತ್ತಿತ್ತು ಅಲ್ಲದೆ ಉಸಿರಾಡಲು ಕಷ್ಟಪಡುತ್ತಿತ್ತು. ಹೀಗಾಗಿ ಹೆತ್ತವರು ಮಗುವನ್ನು ಕರೆದುಕೊಂಡು ಮಡಿಕೇರಿಯ ವೈವಾಸ್ ಆಸ್ಪತ್ರೆಗೆ ತೆರಳಿದ್ದರು. ಈ ಸಂಬಂಧ ಪರೀಕ್ಷೆ ಮಾಡಿದ ವೈದ್ಯರಿಗೆ ಮಗುವಿನ ಗಂಟಲಲ್ಲಿ ಚಿಕ್ಕದಾದ ಬಲ್ಬ್ ಇರುವುದು ಕಂಡು ಬಂದಿದೆ. ಕೂಡಲೇ  ಆಸ್ಪತ್ರೆಯ ವೈದ್ಯರಾದ ವೈದ್ಯರಾದ ಡಾ. ರಾಜಶ್ರೀ ಮತ್ತು ಡಾ. ಕುಶ್ವಂತ್ ಕೋಳಿಬೈಲು  ಅವರನ್ನೊಳಗೊಂಡ ತಂಡ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡು ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೆ, ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಚಿಕ್ಕದಾದ ಎಲ್ ಇಡಿ ಬಲ್ಬ್ ನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಆರೋಗ್ಯವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಹೆತ್ತವರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆತಂದಿದ್ದರಿಂದ ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಅಪಾಯದಿಂದ ಪಾರು ಮಾಡಲು ಸಾಧ್ಯವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಪೋಷಕರೇ ಎಚ್ಚರ… ಚಿಕ್ಕ ಮಕ್ಕಳನ್ನು ಆರೈಕೆ ಮಾಡುವುದು ಸಲಭದ ಕೆಲಸವಲ್ಲ. ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತೆ ವಹಿಸಿ. ಮಕ್ಕಳ ಕೈಗೆ ಸಿಗುವಂತೆ ಯಾವ ವಸ್ತುವನ್ನಿಡ ಬೇಡಿ ತುಂಬಾ ಎಚ್ಚರಿಕೆ ವಹಿಸಿ…

admin
the authoradmin

Leave a Reply

Translate to any language you want