LatestMysore

ಯೋಗಪಟು ಶಿವನಗೌಡ ಜಿ ಪಾಟೀಲ್ ರವರಿಗೆ “ದೀಪ್ತಿ ಯೋಗ ಸಾಧಕರು” ಪ್ರಶಸ್ತಿಯ ಗೌರವ

ಮೈಸೂರು: ಬೆಂಗಳೂರಿನ ಶಿವನಗೌಡ ಜಿ ಪಾಟೀಲ್ ರವರು ಎಲೆಮರೆಕಾಯಿಯಾಗಿದ್ದುಕೊಂಡು ಅನೇಕ ಸಮಾಜಮುಖಿ ಚಿಂತನೆಗಳೊಂದಿಗೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ  ಸಮಾಜ ಸೇವೆ, ಯೋಗ ಶಿಕ್ಷಕ, ಮತ್ತು ಆಧ್ಯಾತ್ಮ ಚಿಂತನೆಗಳ ಸೇವಾ ಕಾರ್ಯಕ್ಕೆ ಮೈಸೂರಿನ ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ತಮ್ಮ ದೀಪ್ತಿ ಸಾಂಸ್ಕೃತಿಕ ವೇದಿಕೆ ಮೂಲಕ ಕೊಡ ಮಾಡುವ 12ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ದೀಪ್ತಿ ಯೋಗ ಸಾಧಕರು” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಕಾರ್ಯಕ್ರಮ ಬೆಂಗಳೂರಿನ ನಾಗರಬಾವಿಯಲ್ಲಿ ಭಾನುವಾರ ಅಂದರೆ 28.06.2026 ರಂದು ನಡೆಯಲಿದ್ದು, ಅಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವನಗೌಡ ಜಿ ಪಾಟೀಲರವರು ಮೂಲ ಹುಬ್ಬಳ್ಳಿಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿ 8000 ಸತ್ಸಂಗ ಆಯೋಜಿಸಿದ್ದಾರೆ, ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಹನ್ನೆರಡಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕದಾದ್ಯಂತ ಅನೇಕ ಶಾಲಾ ಕಾಲೇಜುಗಳಲ್ಲಿ ಹಾಗೂ ಮಠಗಳಲ್ಲಿ, ಸಂಘ ಸಂಸ್ಥೆಗಳಲ್ಲಿ  ಯೋಗಾಸನವನ್ನು, ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡುತ್ತಿದ್ದಾರೆ, ಲಕ್ಷಾಂತರ ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಬಸವ ಟಿವಿಯಲ್ಲಿ 18 ಎಪಿಸೋಡ್ ಅರೋಗ್ಯ ಆಧ್ಯಾತ್ಮ ಪ್ರವಚನ ನೀಡಿದ್ದಾರೆ.

ಅಲ್ಲದೆ ಕೇಂದ್ರ ವಿತ್ತೀಯ ಕಾರ್ಯ ನೀತಿ ಸಂಸ್ಥೆ (FPI), ಕೆಂಗೇರಿ, ಬೆಂಗಳೂರು. ಇಲ್ಲಿ ರಾಜ್ಯಾದ್ಯಂತ ನಡೆಯುವ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ತರಬೇತಿಯ ದಿನಗಳಲ್ಲೂ ಕೂಡ ಬೆಳಗಿನ ಜಾವ, ಸಂಜೆ ಹಲವು ವರ್ಷಗಳಿಂದ ಯೋಗ, ಪ್ರವಚನ ಮತ್ತು ಆಧ್ಯಾತ್ಮ ವಿಷಯಕ್ಕೆ ಸಂಬಂಧಪಟ್ಟಂತೆ ಹಲವರಿಗೆ ಮಾರ್ಗದರ್ಶನ ನೀಡಿದ್ದಾರೆ.

admin
the authoradmin

Leave a Reply

Translate to any language you want