LatestMysore

ಬಸವಮಾರ್ಗ ವಸತಿ ನಿಲಯದ ವಿದ್ಯಾರ್ಥಿಗಳಿಗೆ  ಉದ್ಯಮಿ ಎಸ್.ಎನ್. ಹರೀಶ್ ರಿಂದ ಸೈಕಲ್ ವಿತರಣೆ

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ನಗರದ ಸರಸ್ವತಿಪುರಂ ನಲ್ಲಿ ಇರುವ ಬಸವಮಾರ್ಗ ಫೌಂಡೇಶನ್ ನ ಉಚಿತ ವಸತಿ ನಿಲಯದ ಮಕ್ಕಳಿಗೆ ಉದ್ಯಮಿ ಎಸ್.ಎನ್. ಹರೀಶ್ ಮತ್ತು ಸ್ನೇಹಿತರು ಸೈಕಲ್ ಗಳನ್ನು ಕೊಡುಗೆಯಾಗಿ ನೀಡಿದರು.

ಈ ವೇಳೆ ಮಾತನಾಡಿದ ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವರಾಜು, ನಮ್ಮ ವಸತಿ ನಿಲಯದ  ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುತ್ತಿರುವುದು ಕೇವಲ ಒಂದು ವಸ್ತುವಿನ ದಾನವಲ್ಲ. ಇದು ಅವರ ಭವಿಷ್ಯದ ಪ್ರಗತಿಗೆ ನೀಡುತ್ತಿರುವ ವೇಗವರ್ಧಕ. ಈ ಸೈಕಲ್ ಕೇವಲ ಮಕ್ಕಳ ಪ್ರಯಾಣದ ಸಮಯವನ್ನು ಉಳಿಸುವುದಿಲ್ಲ.  ಬದಲಿಗೆ ಮಕ್ಕಳಲ್ಲಿ ಸ್ವಾವಲಂಬನೆ, ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಉದ್ಯಮಿ ಸುಪ್ರೀತ್ ಮಾತನಾಡಿ, ತಮಗೆ ಸಿಕ್ಕಿರುವ ಈ ಅವಕಾಶವನ್ನು ಅ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಶಾಲೆಗೆ ಸಮಯಕ್ಕೆ ಸರಿಯಾಗಿ ತೆರಳಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಆ ಮೂಲಕ ನಿಮ್ಮ ಪಾಲಕರು, ತಂದೆ, ತಾಯಿ ಹಾಗೂ  ಶಾಲೆಗೂ ಕೀರ್ತಿ  ತರಬೇಕು ಎಂದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಎಸ್.ಎನ್.ಹರೀಶ್,  ಸ್ಕಂದನ್, ಶ್ರವಣ್, ಕಿರಣ್, ಮಹೇಂದ್ರ, ಮಂಜುನಾಥ್ ಇತರರು ಇದ್ದರು.

admin
the authoradmin

Leave a Reply