CinemaLatest

‘ನಾನು’ ಪ್ರಸ್ತುತ ಘಟನೆಗಳ ಆಧಾರಿತ ಕನ್ನಡ ವೆಬ್ ಸರಣಿ…  ಮುಹೂರ್ತ ಆಯ್ತು.. ಚಿತ್ರೀಕರಣ..

ಮೈಸೂರು: ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟಿಕೊಳ್ಳುವ ಪ್ರೀತಿ, ಪ್ರೇಮಗಳು ಮತ್ತು ಅದು ತಂದೊಡ್ಡುವ ಸಮಸ್ಯೆಗಳು, ದುರಂತ ಅಂತ್ಯಗಳು ಹೀಗೆ ಪ್ರಸ್ತುತ ಘಟನಾವಳನ್ನಿಟ್ಟುಕೊಂಡು ‘ನಾನು’ಎಂಬ ವೆಬ್ ಸರಣಿಯನ್ನು ಆರಂಭಿಸುತ್ತಿದ್ದಾರೆ ನಿರ್ದೇಶಕ ಕಲಿ.

ಜೆ.ಕೆ.ಪ್ರೊಡಕ್ಷನ್ ಮೈಸೂರ್ ನಿಂದ ತಯಾರಾಗುತ್ತಿರುವ   ‘ನಾನು’ ಎಂಬ ನೂತನ ವೆಬ್ ಸರಣಿಯ ಚಿತ್ರೀಕರಣ ಮುಹೂರ್ತ ಸಮಾರಂಭ ಮೈಸೂರಿನ  ಬಂಬೂಬಜಾರ್  ರೋಡ್ ನಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ  ಸರಳವಾಗಿ ನೆರವೇರಿದೆ.

ಮುಖ್ಯ ಅತಿಥಿಗಳಾಗಿ ಚಲನಚಿತ್ರ  ಛಾಯಾಗ್ರಾಹಕ  ಸದಾಶಿವ ಹಿರೇಮಠ ಆಗಮಿಸಿ ಯಶಸ್ವಿ ವೆಬ್ ಸರಣಿಯನ್ನು ತಂಡ ನೀಡಿ ಮನೆಮಾತಾಗಲಿ ಎಂದು ಚಿತ್ರ ತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಕಲಿ ಮಾತನಾಡಿ ಈ ಹಿಂದೆಯೇ ಪ್ರೀತಿ-ಪ್ರೇಮ ಪುಸ್ತಕದ ಬದನೇಕಾಯಿ ಎಂದು ಉಪೇಂದ್ರ  ಹೇಳಿದ್ದರು. ಇವತ್ತಿನ ಘಟನೆಗಳೆಲ್ಲ ಅದು ಸತ್ಯ ಅನ್ನೋ ರೀತಿ ನಡಿತಾ ಇವೆ. ಪ್ರಸ್ತುತ ಸನ್ನಿವೇಶಗಳನ್ನಿಟ್ಟುಕೊಂಡು ಯುವ ಪೀಳಿಗೆಯ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಅದರಿಂದ ಏನಾಗುತ್ತಿದೆ, ಯುವ ಜನತೆ ಎತ್ತ ಸಾಗುತ್ತಿದೆ ಎಂಬುದನ್ನು ಈ ಸರಣಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಮ್ಮ ತಂಡ ಮಾಡುತ್ತೇವೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಆರಂಭಿಸಲಾಗುತ್ತಿದೆ ಎಂದರು.

ಪಾತ್ರವರ್ಗದಲ್ಲಿ ಕಲಿ, ದಿಶಾ, ಪ್ರಿಯಾಂಕಾ, ಮಹೇಶ್, ರೋಹಿತ್, ಸಿದ್ದು, ರವಿ ಮೊದಲಾದ ಕಲಾವಿದರು ಅಭಿನಯಿಸುತ್ತಿದ್ದು  ಛಾಯಾಗ್ರಹಣ ನಿರೀಕ್ಷಿತ್ ಟೀಮ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಕಥೆ-ಚಿತ್ರಕಥೆ -ಸಂಭಾಷಣೆ ನಿರ್ದೇಶನ ಜವಾಬ್ದಾರಿ ಕಲಿ ಹೊತ್ತಿದ್ದು ನಿರ್ಮಾಪಕರು ಜಯಮ್ಮ ಕಾಂತರಾಜ್ ಆಗಿದ್ದಾರೆ.

admin
the authoradmin

Leave a Reply