LatestMysore

ಚೆನ್ನಮ್ಮ ಅವರ ನಿಧನಕ್ಕೆ ಹೊಸೂರು ಗ್ರಾಮಸ್ಥರಿಂದ ಸಂತಾಪ.. ಶ್ರದ್ಧಾಂಜಲಿ ಸಲ್ಲಿಕೆ.. ಸೇವೆ ಸ್ಮರಣೆ

ಹೊಸೂರು(ಸಂಘಟನೆ ಮಂಜುನಾಥ್); ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನಕ್ಕೆ  ಸಾಲಿಗ್ರಾಮ ತಾಲೂಕು ಹೊಸೂರು ಗ್ರಾಮದಲ್ಲಿ  ಗ್ರಾಮಸ್ಥರು ಸಂತಾಪ ಸೂಚಿಸಿದರು. ಈ ವೇಳೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ  ಎಚ್ ಆರ್ ಕೃಷ್ಣಮೂರ್ತಿ ಮಾತನಾಡಿ ಚೆನ್ನಮ್ಮ ಅವರ ನಿಧನ ಒಕ್ಕಲಿಗ ಸಮುದಾಯಕ್ಕೆ ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದ  ನಷ್ಟವಾಗಿದೆ. ಚೆನ್ನಮ್ಮ ಅವರಿಗೆ ಮಾಧ್ಯಮದ ಮುಂದೆ ವೇದಿಕೆ ಕಾರ್ಯಕ್ರಮದಲ್ಲೆಲ್ಲೂ ಕಾಣಿಸಿ ಕೊಳ್ಳುವುದು, ಹೆಸರು ಮಾಡುವುದು ಇಷ್ಟ ಇರಲಿಲ್ಲ ದೇವೇಗೌಡರಿಗೂ ಕುಟುಂಬಕ್ಕೂ  ರಾಜಕೀಯ ಬೆನ್ನೆಲುಭಾಗಿ  ನಿಂತಿದ್ದರು  ಎಂದು ಹೇಳಿದರು.

ತಾಲೂಕು  ಒಕ್ಕಲಿಗ ಸಂಘದ ಉಪಾಧ್ಯಕ್ಷ  ಕುಚೇಲ್, ಮಾಜಿ ಅಧ್ಯಕ್ಷರಾದ  ಹೆಚ್ ಎಸ್ ಜಗದೀಶ್, ಹೆಚ್ ಎಸ್ ಶ್ರೀನಿವಾಸ್, ಹೆಚ್ ಆರ್ ದಿನೇಶ್, ಡೈರಿ ಮಾಜಿ ಅಧ್ಯಕ್ಷ ಹೆಚ್ ಜೆ ರಮೇಶ್, ಮಾಜಿ ಗ್ರಾಪಂ  ಸದಸ್ಯ ಡೈರಿ ಮಾಧು, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಚುಂಚನಕಟ್ಟೆ ಮಧು, ಸಂಘದ ಮಾಜಿ ಸದಸ್ಯ ಎಚ್ ಆರ್ ಯಶವಂತ್, ಮುಖಂಡರಾದ ಎಚ್ ಟಿ ಲೋಕೇಶ್, ಹೆಚ್ ಆರ್ ರಾಮೇಗೌಡ, ಹೆಚ್ ಆರ್ ರಾಘವೇಂದ್ರ, ದೊಡ್ಡಕೊಪ್ಪಲು ಶಂಕರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

admin
the authoradmin

Leave a Reply