LatestMysore

ಕೆ.ಆರ್.ನಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಇ.ಉಮೇಶ್ ಅವಿರೋಧ ಆಯ್ಕೆ

 ಕೆ.ಆರ್‌.ನಗರ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಇ.ಉಮೇಶ್ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಡಾ.ನಟರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿ.ಇ.ಉಮೇಶ್ ಅವರನ್ನು ಹೊರತು ಪಡಿಸಿ ‌ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾಗಿದ್ದ ಶಿವಕುಮಾರ್, ಸಹಾಯಕ ಚುನಾವಣಾಧಿಕಾರಿ ಕೆ.ಸಿ.ಮಧು ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸಿ.ಇ.ಉಮೇಶ್ ನನ್ನ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ‌ ತಿಳಿಸಿದರಲ್ಲದೆ ಸರ್ಕಾರಿ ನೌಕರರ ಭವನದ ದುರಸ್ತಿ ಕಾಮಗಾರಿಗೆ  ಅನುದಾನ ನೀಡುವಂತೆ  ಶಾಸಕ ಡಿ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರಲ್ಲದೆ,  ನನ್ನ ಅಧಿಕಾರವಧಿಯಲ್ಲಿ ಶಕ್ತಿ ಮೀರಿ ಸದಸ್ಯರ ಹಿತಕ್ಕೆ ದುಡಿಯುವುದರ ಜತೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ್, ರಾಜ್ಯ ಪರಿಷತ್ ಸದಸ್ಯ ಯಶವಂತ್, ವಸಂತ್ ಕುಮಾರ್, ತಾಲೂಕು ಗೌರವಾಧ್ಯಕ್ಷ ಶಂಕರೇಗೌಡ,  ತಾಲೂಕು ಸಂಘದ ಕಾರ್ಯದರ್ಶಿ ಜಿ.ಜೆ.ಮಹೇಶ್,  ಪದಾಧಿಕಾರಿಗಳಾದ ಜಿ.ಟಿ..ಸಂತೋಷ್, ಕೆ.ವಿ.ರಮೇಶ್, ಗಂಗಾಧರ್, ಆರ್.ಮಂಜುನಾಥ್, ಎಂ.ಎಸ್.ಲೋಕೇಶ್, ಡಾ.ಹರೀಶ್, ಬಿ.ಎಲ್.ಮಹದೇವ್, ಎನ್.ವಿ.ಶ್ರೀತುಳಸಿ, ರಘು, ಪೂರ್ಣಿಮಾ, ಜಯಲಕ್ಷ್ಮಿ, ಪಾರ್ವತಿ  ಹಾಜರಿದ್ದರು.

ಕೆಎಸ್ ಜಿ ಮೇವಾ ತಾಲೂಕು ಗೌರವಾಧ್ಯಕ್ಷ ಸೈಯದ್ ರಿಜ್ವಾನ್, ಜಿಲ್ಲಾ ಕಾಂಗ್ರೆಸ್ ಮುಖಂಡ ಸಿ.ಟಿ.ಶಿವರಾಜು ಮತ್ತು ಉಮೇಶ್ ಅವರ ಸ್ನೇಹಿತರು ಹಿತೈಷಿಗಳು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭಾಶಯ ಕೋರಿದರು.

admin
the authoradmin

Leave a Reply