Latest

ಲೆಕ್ಸಸ್ ಇಂಡಿಯಾದಿಂದ ಹೊಸ ಇ.ಎಸ್.359ಎಚ್ ಕಾರು ಮಾರುಕಟ್ಟೆಗೆ.. ಏನಿದರ ವಿಶೇಷ?

ಕಾರಿನ ಶೋರೂಂ ಬೆಲೆ ಎಕ್ಸ್ ಕ್ವಿಸಿಟ್  66,10,000, ಲಕ್ಷುರಿ 71,80,000

ಬೆಂಗಳೂರು: ಲೆಕ್ಸಸ್ ಇಂಡಿಯಾ ತನ್ನ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಲಾದ ಎಂಟನೇ ತಲೆಮಾರಿನ ಎಕ್ಸಿಕ್ಯೂಟಿವ್ ಸೆಡಾನ್ ಕಾರಿನ, ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಆವೃತ್ತಿ ಆಲ್-ನ್ಯೂ ಇ.ಎಸ್.350ಎಚ್ ಬುಕಿಂಗ್ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಇ.ಎಸ್.500ಇ ಜೊತೆಯಲ್ಲಿ ಇ.ಎಸ್.350ಎಚ್ ಬ್ರಾಂಡ್ ನ ವಿದ್ಯುದೀಕರಿಸಿದ ಪೋರ್ಟ್ ಫೋಲಿಯೊ ವಿಸ್ತರಿಸುತ್ತಿದ್ದು ಗ್ರಾಹಕರಿಗೆ ಅತ್ಯುತ್ತಮ ಆಯ್ಕೆ ನೀಡಿದೆ

1989ರಲ್ಲಿ ಸಂಸ್ಥೆಯ ಮುಂಚೂಣಿಯ ಮಾದರಿಯಾದ ಎಲ್.ಎಸ್. ಕಾರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದಲೂ, ಇ.ಎಸ್. ಸರಣಿಯು ಜಾಗತಿಕ ಮಟ್ಟದಲ್ಲಿ ಲೆಕ್ಸಸ್‌ ನ ಪ್ರಮುಖ ಮಾಡೆಲ್‌ಗಳಲ್ಲಿ ಒಂದಾಗಿದೆ. ತನ್ನ ಅಪ್ರತಿಮ ನಿಶ್ಯಬ್ದ, ಆರಾಮದಾಯಕ ಪ್ರಯಾಣ ಮತ್ತು ವಿಶಾಲವಾದ ಒಳಾಂಗಣ ವಿನ್ಯಾಸಕ್ಕೆ ಹೆಸರಾಗಿರುವ ಇ.ಎಸ್. ಕಾರು, ವಿಶ್ವಾದ್ಯಂತ 80ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ಯಗಳಲ್ಲಿ ಮಾರಾಟವಾಗಿದೆ.

ಭಾರತದಲ್ಲಿ ಲೆಕ್ಸಸ್ ಕಂಪನಿಯ ಉತ್ಪನ್ನಗಳ ಪೈಕಿ ಈ ಮಾಡೆಲ್ ಪ್ರಮುಖ ಆಧಾರಸ್ತಂಭವಾಗಿದ್ದು, ಮಾರುಕಟ್ಟೆಯಲ್ಲಿ ಬ್ರಾಂಡ್  ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಲ್-ನ್ಯೂ ಇ.ಎಸ್. 350ಎಚ್ ಕಾರನ್ನು ಭಾರತದಲ್ಲೇ ತಯಾರಿಸಲಾಗುತ್ತಿದ್ದು, ಇದು ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಮತ್ತಷ್ಟು ಮುಂದುವರಿಸಲಿದೆ. ಇದು ತನ್ನ ಸುಧಾರಿತ ಪ್ಲಾಟ್‌ ಫಾರ್ಮ್ ಮತ್ತು ವಿನ್ಯಾಸದ ಶೈಲಿಯನ್ನು ಇ.ಎಸ್. 500ಸಿಯೊಂದಿಗೆ ಹಂಚಿಕೊಳ್ಳುವುದಲ್ಲದೆ, ಭಾರತೀಯ ಮಾರುಕಟ್ಟೆಯ ಬಗ್ಗೆ ಲೆಕ್ಸಸ್ ಸಂಸ್ಥೆಗಿರುವ ಆಳವಾದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದೆ.

ಎಂಟನೇ ತಲೆಮಾರಿನ ಇ.ಎಸ್. ಮಾದರಿಯಾದ ಈ ಆಲ್-ನ್ಯೂ ಕಾರನ್ನು, ಲೆಕ್ಸಸ್ ಸಂಸ್ಥೆಯ ಮುಂದಿನ ತಲೆಮಾರಿನ ಎಲೆಕ್ಟ್ರಿಫೈಡ್ ವಾಹನಗಳ ಸರಣಿಯ ಮುಂಚೂಣಿಯ ಮಾಡೆಲ್ ಆಗಿ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಕಾರ್ಬನ್-ಮುಕ್ತ ಭವಿಷ್ಯದತ್ತ ಲೆಕ್ಸಸ್‌ ನ ಬಹು-ಮಾರ್ಗದ ಬದ್ಧತೆಯನ್ನು ಬೆಂಬಲಿಸುವ ಈ ಹೊಸ ಇ.ಎಸ್. ಕಾರು, ಹೈಬ್ರಿಡ್ ಎಲೆಕ್ಟ್ರಿಕ್ ವಾಹನ(ಎಚ್.ಇ,ವಿ,) ಮತ್ತು ಬ್ಯಾಟರಿ ಎಲೆಕ್ಟ್ರಿಕ್ ವಾಹನ(ಬಿ.ಇ.ವಿ.) ಹೀಗೆ ಎರಡೂ ರೀತಿಯ ಪವರ್‌ ಟ್ರೇನ್‌ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ವಿನ್ಯಾಸ ಪರಿಕಲ್ಪನೆ: ಹೊಸ ಇ.ಎಸ್. ಮಾದರಿಯು ಒಂದು ಹೊಸ ಮೌಲ್ಯವನ್ನು ಸೃಷ್ಟಿಸಲು ಕ್ಲೀನ್ ಟೆಕ್ x ಎಲಿಗನ್ಸ್ ಎಂಬ ವಿನ್ಯಾಸದ ಪರಿಕಲ್ಪನೆಯನ್ನು ಪರಿಚಯಿಸುತ್ತದೆ. ಇದರ ವಿಶಿಷ್ಟವಾದ ಸೊಗಸನ್ನು ಮತ್ತಷ್ಟು ಪರಿಷ್ಕರಿಸಲಾಗಿದ್ದು, ಸರಳ ಹಾಗೂ ಸ್ವಚ್ಛವಾದ ಸೌಂದರ್ಯವನ್ನು ಸಾಧಿಸಲು ಕ್ರಿಯಾತ್ಮಕ ಮತ್ತು ಭಾವನಾತ್ಮಕ ಮೌಲ್ಯಗಳನ್ನು ಸಮ್ಮಿಳಿತಗೊಳಿಸಲಾಗಿದೆ. “ಎಲ್ಲಾ ಸೀಟುಗಳಿಗೂ ಆಹ್ಲಾದಕರ ಸಮಯ” ಎಂಬ ಪರಿಕಲ್ಪನೆಯ ಮಾರ್ಗದರ್ಶನದಲ್ಲಿ, ಪ್ರತಿ ಪ್ರಯಾಣಿಕರಿಗೂ ಆರಾಮದಾಯಕ ಮತ್ತು ಅತ್ಯಾಧುನಿಕ ಅನುಭವವನ್ನು ನೀಡುವಂತೆ ಈ ಇ.ಎಸ್. ಅನ್ನು ವಿನ್ಯಾಸಗೊಳಿಸಲಾಗಿದೆ

ಹೊರಾಂಗಣ ವಿಶೇಷತೆಗಳು: ಆಲ್-ನ್ಯೂ ಇ.ಎಸ್.350ಎಚ್ ತನ್ನ ಹಿಂದಿನ ಆವೃತ್ತಿಗಿಂತ ಆಯಾಮದಲ್ಲಿ ದೊಡ್ಡದಾಗಿದೆ. ದೊಡ್ಡ ವ್ಹೀಲ್ ಬೇಸ್, ಹೆಚ್ಚಿನ ಅಗಲ ಮತ್ತು ಎತ್ತರದ ಪ್ರೊಫೈಲ್ ಹೆಚ್ಚು ಪ್ರಭಾವಶಾಲಿ ರಸ್ತೆಯ ಉಪಸ್ಥಿತಿಗೆ ಕೊಡುಗೆ ನೀಡುತ್ತವೆ. ಈ ಪರಿಷ್ಕರಿಸಿದ ಪ್ರಮಾಣಗಳು ಹೆಚ್ಚಿನ ಒಳಾಂಗಣ ಸ್ಥಳ ಮತ್ತು ಚಾಲಕರು ಹಾಗೂ ಪ್ರಯಾಣಿಕರಿಗೆ ಉನ್ನತೀಕರಿಸಿದ ಸೌಖ್ಯಕ್ಕೆ ಕೊಡುಗೆ ನೀಡುತ್ತವೆ.

ಹೊಸ ತಂತ್ರಜ್ಞಾನಗಳು: ವಾಹನದ ಹೊರಭಾಗವು ಲೆಕ್ಸಸ್‌ ನ ವಿಶಿಷ್ಟ ವಿನ್ಯಾಸದ ಶೈಲಿಯನ್ನು ಹೊಂದಿದ್ದು, ಇದರಲ್ಲಿ ಸಿಗ್ನೇಚರ್ ಎಲ್-ಆಕಾರದ ಲೈಟಿಂಗ್ ಎಲಿಮೆಂಟ್‌ಗಳು ಮತ್ತು ಅತ್ಯಾಧುನಿಕ ಹಿಂಭಾಗದ ವಿನ್ಯಾಸ ಸೇರಿವೆ. ಸೇಫ್ ಎಕ್ಸಿಟ್ ಅಸಿಸ್ಟ್ ತಂತ್ರಜ್ಞಾನದೊಂದಿಗಿನ ಎಲೆಕ್ಟ್ರಾನಿಕ್ ಡೋರ್ ಲ್ಯಾಚ್ ರಿಲೀಸ್‌ ಗಳಂತಹ ಸಮಗ್ರ ತಂತ್ರಜ್ಞಾನಗಳು, ಅನುಕೂಲತೆ ಮತ್ತು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ವೈವಿಧ್ಯಮಯ ಜೀವನಶೈಲಿಗಳಿಗೆ ಹೊಂದುವಂತಹ ಆಯ್ದ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಬಣ್ಣಗಳ ಪಟ್ಟಿಯಲ್ಲಿ ವೈಟ್ ನೋವಾ, ಸೋನಿಕ್ ಟೈಟಾನಿಯಂ, ಸೋನಿಕ್ ಕ್ರೋಮ್  ಮತ್ತು ಗ್ರ್ಯಾಫೈಟ್ ಬ್ಲ್ಯಾಕ್ ನಂತಹ ಈಗಾಗಲೇ ಜನಪ್ರಿಯವಾಗಿರುವ ಆಯ್ಕೆಗಳೊಂದಿಗೆ, ಹೊಸದಾಗಿ ಪರಿಚಯಿಸಲಾದ ಸೌ ಮತ್ತು ಸೋನಿಕ್ ಕಾಪರ್ ಬಣ್ಣಗಳೂ ಸೇರಿವೆ.

ಒಳಾಂಗಣದ ವಿಶೇಷತೆಗಳು:  ಕಾರಿನ ಒಳಾಂಗಣವನ್ನು ಆರಾಮದಾಯಕ ಮತ್ತು ಅಂತರ್ಬೋಧೆಯ ಚಾಲನಾ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ತಝುನಾ ಕಾಕ್ ಪಿಟ್ ಪರಿಕಲ್ಪನೆಯು ಮುಖ್ಯ ನಿಯಂತ್ರಣಗಳು ಮತ್ತು ಮಾಹಿತಿಯನ್ನು ಚಾಲಕನಿಗೆ ಸುಲಭವಾಗಿ ಕೈಗೆಟುಕುವ ಹಾಗೆ ಹಾಗೂ ಕಣ್ಣಿಗೆ ಕಾಣಿಸುವ ಹಾಗೆ ಇರಿಸುತ್ತದೆ; ಇದು ವಾಹನದೊಂದಿಗೆ ಮತ್ತಷ್ಟು ಸಂಪರ್ಕಿತ ಚಾಲನಾ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. 14.0-ಇಂಚು ಹೈ-ಡೆಫಿನಿಷನ್ ಟಚ್‌ ಸ್ಕ್ರೀನ್ ಇತ್ತೀಚಿನ ಲೆಕ್ಸಸ್ ಇಂಟರ್‌ಫೇಸ್ ಅನ್ನು ಹೊಂದಿದ್ದರೆ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೆಚ್ಚಿನ ಅನುಕೂಲತೆ ಮತ್ತು ಸುಲಭ ಬಳಕೆಗಾಗಿ ವಾಹನದ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಹೈಬ್ರಿಡ್ ಕಾರ್ಯಕ್ಷಮತೆ: ಹೊಸದಾಗಿ ಅಭಿವೃದ್ಧಿಪಡಿಸಲಾದ ಹೈಬ್ರಿಡ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದು ಅತ್ಯಂತ ದಕ್ಷತೆಯುಳ್ಳ 2.5 ಲೀಟರ್ ಇನ್-ಲೈನ್ 4-ಸಿಲಿಂಡರ್ ಎಂಜಿನ್, ಟ್ರಾನ್ಸ್ ಆಕ್ಸಲ್‌ನೊಂದಿಗೆ ಸಂಯೋಜಿಸಲ್ಪಟ್ಟ ಪಿಸಿಯು (ಪವರ್ ಕಂಟ್ರೋಲ್ ಯೂನಿಟ್) ಹೊಂದಿರುವ ಹೊಸ ಇ-ಆಕ್ಸಲ್  ಮತ್ತು ಲೀಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ. ಈ ಹೈಬ್ರಿಡ್ ವ್ಯವಸ್ಥೆಯು ಅತ್ಯುತ್ತಮ ಶಕ್ತಿಯ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ಮತ್ತು ನಿಶ್ಯಬ್ದತೆಯ ನಡುವೆ ಉನ್ನತ ಮಟ್ಟದ ಸಮತೋಲನವನ್ನು ಒದಗಿಸುತ್ತದೆ. ಇದರ ಜೊತೆಗೆ, ಹೊಸದಾಗಿ ಅಭಿವೃದ್ಧಿಪಡಿಸಲಾದ ಲಿಥಿಯಂ-ಐಯಾನ್ ಬ್ಯಾಟರಿ ಸೆಲ್, ಹೆಚ್ಚಿನ ಫಲಿತಾಂಶ ನೀಡುವ ಜೊತೆಗೆ ಬ್ಯಾಟರಿಯ ವಿನ್ಯಾಸವು ಕಿರಿದು ಹಾಗೂ ಹಗುರವಾಗಿರಲು ಸಹಾಯ ಮಾಡಿದೆ.

ಕಡಿಮೆ ಇಎಂಐ ಮತ್ತು ನಿಶ್ಚಿತ ಭವಿಷ್ಯದ ಮರುಖರೀದಿ ಮೌಲ್ಯವನ್ನು ಹೊಂದಿರುವ ಅಶ್ಯೂರ್ಡ್ ಬೈ ಬ್ಯಾಕ್ ಪ್ರೋಗ್ರಾಂ  ಪ್ರೀಮಿಯಂ ಮಾಲೀಕತ್ವದ ಅನುಭವದೊಂದಿಗೆ ಆರ್ಥಿಕ ಅನುಕೂಲ ಬಯಸುವ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಶಿಷ್ಟವಾದ ಲೆಕ್ಸಸ್ ಲಕ್ಸುರಿ ಕೇರ್ ಸೇವಾ ಪ್ಯಾಕೇಜ್‌ ಗಳು ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್ ಆಯ್ಕೆಗಳಲ್ಲಿ ಲಭ್ಯವಿದ್ದು, ಇವು 3 ವರ್ಷಗಳು / 40,000 ಕಿಮೀ ನಿಂದ ಪ್ರಾರಂಭಿಸಿ 8 ವರ್ಷಗಳು / 1,60,000 ಕಿಮೀ ವರೆಗಿನ ಅವಧಿಗೆ ಲಭ್ಯವಿವೆ.

ಆಲ್-ನ್ಯೂ ಇ.ಎಸ್.350ಎಚ್ ಬುಕಿಂಗ್ ಗಳು ಈಗ ಪ್ರಾರಂಭವಾಗಿವೆ. ಅತಿಥಿಗಳು ತಮ್ಮ ಹತ್ತಿರದ ಲೆಕ್ಸಸ್ ಗೆಸ್ಟ್ ಎಕ್ಸ್ ಪೀರಿಯೆನ್ಸ್ ಸೆಂಟರ್ ಗೆ ಭೇಟಿ ನೀಡಿ ತಮ್ಮ ಬುಕಿಂಗ್ ಗಳನ್ನು ಮಾಡಿಕೊಳ್ಳಬಹುದು.

admin
the authoradmin

Leave a Reply