ಗುರು ಪೌರ್ಣಿಮೆ, ಹಿಂದೂ ಧರ್ಮದಲ್ಲಿ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಹಾಗೂ ಮಹತ್ವ ಪೂರ್ಣ ದಿನ. ಈ ದಿನವನ್ನು ವಿದ್ಯಾರ್ಥಿಗಳು, ಭಕ್ತರು, ಸಾಧು–ಸಂತರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವನ್ನಾಗಿ ಆಚರಿಸುತ್ತಾರೆ. ಗುರು ಪೌರ್ಣಿಮೆ ಎಂದರೇನು? ಗುರು ಪೌರ್ಣಿಮೆ ಆಷಾಢ ಮಾಸದ ಹುಣ್ಣಿಮೆಯಂದು ಬರುತ್ತದೆ. ಇದು “ಗುರುವಿನ ಪೂಜಾ ದಿನ” ಎಂಬ ಅರ್ಥ ಹೊಂದಿದೆ.
ಈ ದಿನ ವೇದವ್ಯಾಸರು ಜನಿಸಿದ ದಿನ
ಗುರುಗಳ ಮಹಿಮೆ ನೆನಪಿಸುವ ದಿನ
ಜ್ಞಾನ ಮತ್ತು ಶ್ರದ್ಧೆಗೆ ಕೃತಜ್ಞತೆಯ ದಿನ.
ಇತಿಹಾಸ ಹಾಗೂ ಮಹತ್ವದ ಬಗ್ಗೆ ಹೇಳುವುದಾದರೆ, ವೇದವ್ಯಾಸರು ಈ ದಿನವೇ ಜನಿಸಿದರು. ಅವರು ವೇದಗಳನ್ನು ವರ್ಗೀಕರಿಸಿದರು. ಮಹಾಭಾರತ ರಚಿಸಿದರು.ಭಗವದ್ಗೀತೆಯ ಸಾರವನ್ನು ತಂದರು. ಮತ್ತು ಅದಕ್ಕಾಗಿಯೇ ಈ ಪೌರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದು ಕೂಡ ಕರೆಯುತ್ತಾರೆ. ಬೌದ್ಧ ಧರ್ಮದಲ್ಲೂ, ಈ ದಿನ ಗೌತಮ ಬುದ್ಧನು ತನ್ನ ಮೊದಲ ಉಪದೇಶವನ್ನು ಸಾರಿದ ದಿನವೆಂದು ಆಚರಿಸಲಾಗುತ್ತದೆ.
ಗುರುವಿನ ಮಹತ್ವವನ್ನು ನೋಡುವುದಾದರೆ “ಗುರು” ಎಂಬ ಪದದ ಅರ್ಥ: ಗು = ಅಂಧಕಾರ ರು = ನಿವಾರಣೆ ಅಂದರೆ, ಗುರು ಎನ್ನುವುದು ಅಜ್ಞಾನದಿಂದ ಜ್ಞಾನಕ್ಕೆ ಕರೆದೊಯ್ಯುವ ಪ್ರಕಾಶ.
ಶ್ಲೋಕ ಹೇಳುತ್ತದೆ…
ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ॥
ಇದರ ಅರ್ಥ .. ಗುರು ಬ್ರಹ್ಮ, ವಿಷ್ಣು, ಮಹೇಶ್ವರನಂತೆ ಆಗಿರುವ ಪರಬ್ರಹ್ಮನ ರೂಪ
ವಿಶ್ಲೇಷಣೆ : ಕುಮಾರಕವಿ ನಟರಾಜ
ಹಿರಿಯ ಸಾಹಿತಿ ಕುಮಾರಕವಿ ನಟರಾಜ ಅವರಿಗೆ ಸನ್ಮಾನ

ಗುರುಪೂರ್ಣಿಮೆ ಗುರುವಂದನಾ ಕಾರ್ಯಕ್ರಮದ ನಿಮಿತ್ತ ಬೆಂಗಳೂರು ನಾಗರಬಾವಿ ಕೆನರಾ ಬ್ಯಾಂಕ್ ಕಾಲೊನಿ ಉದ್ಯಾನವನದ ಚಪ್ಪಾಳೆ ಗುಂಪಿನ ಗೆಳೆಯರ ಬಳಗದಿಂದ ಖ್ಯಾತ ಹಿರಿಯ ಸಾಹಿತಿ ಕುಮಾರಕವಿ ನಟರಾಜ ಅವರಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಲಾಯಿತು









