LatestMysore

ಸಿ.ಆ‌ರ್.ಶರತ್ ಕುಮಾರ್ ರವರ ಮಹಾಪ್ರಬಂಧಕ್ಕೆ ಮೈವಿವಿಯಿಂದ ಪಿಹೆಚ್ ಡಿ ಪದವಿ

ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಚಂದಗಾಲು ಗ್ರಾಮದ ಸಿ.ಆ‌ರ್.ಶರತ್ ಕುಮಾರ್ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ಪದವಿ ನೀಡಿದೆ.

ವಿಶ್ವವಿದ್ಯಾನಿಲಯದ ಶಿಕ್ಷಣ ಶಾಸ್ತ್ರ ವಿಭಾಗದ ಪ್ರೊ.ಡಾ. ಕೆ.ಬಿ.ಪ್ರವೀಣ್‌ ಅವರ ಮಾರ್ಗದರ್ಶನದಲ್ಲಿ “SWOT Analysis of Online Curriculum Transaction by Teacher Educators of Colleges of Education” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ತಯಾರಿಸಿದ ಮಹಾಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ.

ಶರತ್ ಕುಮಾ‌ರ್ ಚಂದಗಾಲು ಗ್ರಾಮದ ತೋಟಗಾರಿಕೆ  ಇಲಾಖೆಯ ನಿವೃತ ಅಧಿಕಾರಿ ಸಿ.ವಿ.ರಾಜಣ್ಣ ಮತ್ತು ಆ‌ರ್.ಟಿ.ಮಹ ದೇವಮ್ಮ ದಂಪತಿ ಪುತ್ರರಾಗಿದ್ದು, ಬೆಂಗಳೂರು ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ  ಪ್ರಸ್ತುತ  ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ