ಹೊಸೂರು(ಸಂಘಟನೆ ಮಂಜುನಾಥ್): ಹೊಸೂರು ಕೃಷಿ ಪತ್ತಿನ ಸಹಕಾರ ಸಂಘವು 2025-2026ನೇ ಸಾಲಿನಲ್ಲಿ 1.88 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಬಿ.ನವೀನ್ ಕುಮಾರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ 2025-26 ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಕೆ.ಸಿ.ಸಿ.ಸಾಲ 10.37 ಕೋಟಿ, ದುಡಿಯುವ ಸಾಲ 30.52 ಲಕ್ಷ , ಕೃಷಿಯೇತರ ಸಾಲ.17.70 ಲಕ್ಷ ರೂ ಸೇರಿದಂತೆ ಒಟ್ಟು 10.85 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು
ಸಾಲ ವಸೂಲಾತಿಯಲ್ಲಿ ಸದಸ್ಯರಿಂದ ಸಂಘಕ್ಕೆ ಬರಬೇಕಾದ ಸಾಲ ವಸೂಲಾತಿಯಲ್ಲಿ ಶೇ.96 ರಷ್ಟು ಪ್ರಗತಿ ಸಾಧಿಸಿದ್ದು ಮಧ್ಯಾಮಾವಧಿ ಸಾಲದಲ್ಲಿ ಐಪಿ ಸೆಟ್, ಬೋರವೆಲ್, ಟ್ಯಾಕ್ಟರ್, ದ್ವಿಚಕ್ರ ವಾಹನ ಸಾಲವನ್ನು ನೀಡಲಾಗುತ್ತಿದ್ದು ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದ ನವೀನ್ ಕುಮಾರ್ ಸಂಘದ ಷೇರುದಾರ ರೈತರು ಮೃತಪಟ್ಟರೆ ನೀಡಲಾಗುತ್ತಿದ್ದ 3 ಸಾವಿರ ಮರಣ ನಿಧಿಯನ್ನ 4 ಸಾವಿರಕ್ಕೆ ಹೆಚ್ಚಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಘದ ಸಿಇಓ ಚಂದ್ರಕಲಾ 2025-26ನೇ ಸಾಲಿಗೆ ಮಂಜೂರಾದ ಆಯವ್ಯಯ, ಲೆಕ್ಕಪರಿಶೋಧನೆ ಹಾಗೂ ವಾರ್ಷಿಕ ವರದಿಯನ್ನು ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿವೇಕನಂದ್, ನಿರ್ದೇಶಕರಾದ ಎಚ್.ಎಸ್.ಜಗದೀಶ್, ಹೆಚ್. ಆರ್. ಕೃಷ್ಣಮೂರ್ತಿ, ಹೆಚ್.ಆರ್.ಮಹೇಶ್ ಎಸ್.ಬಿ.ಹುಚ್ಚೇಗೌಡ, ಎಚ್.ಎನ್.ರಮೇಶ್, ಸಿ.ಎಂ. ರಾಜೇಗೌಡ, ಕಮಲಮ್ಮ, ಕೆಂಪನಾಯಕ, ಪಾರ್ಥಯ್ಯ, ಸಿಬ್ಬಂದಿ ಎಸ್.ಎಸ್ ಅರುಣ್ , ಪಿಗ್ಮಿ ರವಿ, ಹೆಚ್. ಎಸ್ ಮಹದೇವ್, ಹೆಚ್. ಟಿ ಲೋಕೇಶ್, ಈಶ್ವರ್ ಹಾಗೂ ಬ್ಯಾಂಕಿನ ಸದಸ್ಯರು ಇದ್ದರು.








