ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಐಟಿಸಿ ಸಂಸ್ಥೆಯು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಂತ್ ಕುಮಾರ್ ಹೇಳಿದರು.
ಹುಣಸೂರು ತಾಲೂಕಿನ ಗಾಾವಡಗೆರೆ ಹೋಬಳಿಯ ಮಾರಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಐಟಿಸಿ ಸಂಸ್ಥೆಯು ಮಕ್ಕಳು ಕೂರವ ಡೆಸ್ಕ್ ಗಳನ್ನು ಸ್ವೀಕರಿಸಿ ಮಾತನಾಡಿ, ಸಂಸ್ಥೆಯು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐಟಿಸಿ ಸಂಸ್ಥೆ ಕೈಗೊಂಡಿರುವ ಜನಪರ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಐ ಟಿ ಸಿ ಸಂಸ್ಥೆಯ ಮ್ಯಾನೇಜರ್ ಪುಣ್ಯ ಮಾತನಾಡಿ ಪ್ರಸ್ತುತ ಈ ಶಾಲೆಗೆ 10 ಡೇಸ್ ಗಳನ್ನು ನೀಡಲಾಗಿದೆ ಇದರಿಂದ ಶಾಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದಿರುವುದನ್ನು ನೋಡಿದೆ ಇದರಿಂದ ವಿದ್ಯಾರ್ಥಿಗಳು ಸಂತೋಷದಿಂದ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಹಾಯವಾಗಲಿದೆ. ಜೊತೆಗೆ ಈಗಾಗಲೇ ಶಾಲೆಗಳಿಗೆ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ

ಪ್ರಸಕ್ತ 25-2026ನೇ ಸಾಲಿನಲ್ಲಿ ಐ ಟಿ ಸಿ ಸಂಸ್ಥೆಯು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹುಣಸೂರು ಕೆ ಆರ್ ನಗರ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಲವು ಗ್ರಾಮಗಳ 20 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಐಟಿಸಿ ಸಂಸ್ಥೆ ಪ್ರಾಯೋಗಿಕ ರೂಪದಲ್ಲಿ ಡೆಸ್ಕ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜರ್ ಶ್ರೀಧರ್ ಕ್ಷೇತ್ರ ಸಹಾಯಕ ಚಿಕ್ಕ ಮಾಲೆಗೌಡ,ಮುಖ್ಯ ಶಿಕ್ಷಕ ಆಶಿಫ್ ಇಕ್ಬಾಲ್, ಗ್ರಾಮದ ಯಜಮಾನರುಗಳಾದ ಮುಕುಂದ ರಾವ್, ಲೋಕೇಶ್ ಗೌಡ, ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಗೌಡ, ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಕಂಪನಿಯ ಉದ್ಯೋಗಿಗಳು, ಶಿಕ್ಷಕರು, ಗ್ರಾಮದ ಮುಖಂಡರು ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.








