LatestMysore

ಓದಿದ ಶಾಲೆಯನ್ನು ಮರೆಯದ ಕುಟುಂಬ… ಹಿರೀಕ್ಯಾತನಹಳ್ಳಿ ಶಾಲೆಗೆ ಭರಪೂರ ಕೊಡುಗೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಮನೋಭಾವ ಹೊಂದಿದ ಒಂದೇ ಕುಟುಂಬವು ಸುಮಾರು 80 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 80 ಸಾವಿರ ಬೆಲೆಬಾಳುವ ಶಾಲೆಗೆ ಎಲ್ಇಡಿ ಟಿವಿ ಜೊತೆಗೆ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ನೀಡಿ ಉದಾರತೆ ಮೆರೆದಿದ್ದಾರೆ.

ಈ ವೇಳೆ ದಾನಿಗಳಾದ ಜವಳಿ ಕರಿಗೌಡ ಮಾತನಾಡಿ ನಾನು ಕೂಡ ಈ ಶಾಲೆಯಲ್ಲಿ ಓದಿ ನಂತರ ನನ್ನ ಮೂವರು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ ನನ್ನ ಮೂವರು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಉದ್ಯೋಗವನ್ನು ಪಡೆದು ವಿದೇಶದಲ್ಲಿ ನೆಲೆಸಿ ಉದ್ಯೋಗಿಗಳಾಗಿದ್ದಾರೆ. ಇದಕ್ಕೆ ಕಾರಣ ಬಡತನ ಕಿತ್ತು ತಿನ್ನುವಂತಿತ್ತು, ಬಡತನಕ್ಕೆ ಹೆದರದೆ  ಹಣಕ್ಕೆ ಹೆಚ್ಚು ಮಹತ್ವ ನೀಡದೆ ಮಕ್ಕಳ ವಿದ್ಯಾಭ್ಯಾಸಕ್ಕೆ ದುಡಿದು ವಿದ್ಯಾಭ್ಯಾಸ ಮಾಡಿಸಿದ್ದಕ್ಕೆ ಇಂದು ನಾವು ಸಂತೋಷದಿಂದ ಬದುಕುತ್ತಿದ್ದೇವೆ.

ಇದಕ್ಕೆ ಕಾರಣ ಮಕ್ಕಳು ತಂದೆ ತಾಯಿಯಂದಿರು ಕಷ್ಟಪಟ್ಟು ದುಡಿದು ಓದಿಸುವ ಹಂಬಲ ಇದ್ದದಾಗಿದೆ. ಮಕ್ಕಳು ತಮ್ಮ ಕಷ್ಟವನ್ನು ಅರಿತು ಮುಂದೊಂದು ದಿನ ಅವರನ್ನು ಚೆನ್ನಾಗಿ ನೋಡಿಕೊಳ್ಳುತಾರೆ ಎನ್ನುವ ಆಸೆಯನ್ನು ನನ್ನ ಮಕ್ಕಳು ಅದನ್ನ ಈಡೇರಿಸುವುದರ ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡಬೇಕು ಎನ್ನುವ ಹಂಬಲವಿದೆ ಇದಕ್ಕೆ ನನಗೆ ಸಂತೋಷವಾಗಿದೆ ಎಂದರು.

ತನ್ನ ಮಕ್ಕಳೊಂದಿಗೆ ಯುಎಸ್ಎಯಲ್ಲಿ ನೆಲೆಸಿರುವ  ಮಕ್ಕಳಾದ ಪ್ರದೀಪ, ಅಶ್ವಿನಿ, ದೀಪು, ಇವರ ಸ್ನೇಹಿತ ಮಿಲೋನಿ ಸೇಟ್, ಕೂಡ  ಕೈಜೋಡಿಸಿ ಶಾಲೆಗೆ ಕೊಡುಗೆ ನೀಡಿ ಮುಂದೆಯೂ ಕೂಡ ಇನ್ನಷ್ಟು ಶಾಲೆಗಳಿಗೆ ಕೊಡುಗೆಗಳನ್ನು ನೀಡುವ ವಿಷಯವನ್ನು ನನ್ನ ಬಳಿ ವ್ಯಕ್ತಪಡಿಸಿದಾರೆ ಎಂದರು.

ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತ ಮಾತನಾಡಿ ದಾನಿಗಳು  ಸರ್ಕಾರಿ ಸವಲತ್ತುಗಳನ್ನು ನೀಡಿ ಗ್ರಾಮದ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಇದೇ ಶಾಲೆಯಲ್ಲಿ ಓದಿದ  ವಿದ್ಯಾರ್ಥಿಗಳು ಉದ್ಯೋಗಿಗಳಾಗಿದ್ದಾರೆ. ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಿ ಶಾಲೆ ಅಭಿವೃದ್ಧಿಯ ಜೊತೆಗೆ ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಿಸಿದರೆ ಅವರು ಕೂಡ ಮುಂದೊಂದು ದಿನ ಉದ್ಯೋಗ ಪಡೆದುಕೊಂಡು ಗ್ರಾಮದ ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ  ಲೆಕ್ಕ ಸಹಾಯಕ  ಸಿ. ಎಸ್. ಲಕ್ಷ್ಮೇ ಗೌಡ , ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ, ಮುಖ್ಯ ಶಿಕ್ಷಕ ಮಹೇಶ್, ದಾನಿಗಳಾದ ಕುಟುಂಬಸ್ಥರ  ಅಳಿಯ ಬಾಲ ಚಂದರ್ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಇದ್ದರು.

admin
the authoradmin

ನಿಮ್ಮದೊಂದು ಉತ್ತರ