LatestMysore

ಸಾಲಿಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಜನವರಿಯಲ್ಲಿ ಭೂಮಿಪೂಜೆ: ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್): ಸಾಲಿಗ್ರಾಮ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಇನ್ನು 3 ತಿಂಗಳೊಳಗೆ ನಿವೇಶನ ಮಂಜೂರು ಮಾಡಿಸಿ ಜನವರಿ ತಿಂಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಮತ್ತು ಸಾಲಿಗ್ರಾಮ ಹಾಗೂ ಕೆ.ಆರ್.ನಗರ ತಾಲೂಕು ನಾಯಕರ ಸಂಘದ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮುದಾಯ ಭವನಕ್ಕೆ ಈಗಾಗಲೇ ನಿವೇಶನ ಗುರುತಿಸುವುದಾಗಿ ತಹಶೀಲ್ದಾರ್‌ರವರಿಗೆ ಸೂಚಿಸಲಾಗಿದೆ ಎಂದರು.

ಕ್ಷೇತ್ರದಾದ್ಯಂತ ಪರಿಶಿಷ್ಟ ಪಂಗಡ ಸಮಾಜದವರು ವಾಸಿಸುವ ಗ್ರಾಮಗಳ ಮೂಲಭೂತ ಸೌಕರ್ಯದ ಸಮಸ್ಯೆ ಇರುವುದನ್ನು ಪಟ್ಟಿ ಮಾಡುವುದರ ಜತೆಗೆ ಅರ್ಧಕ್ಕೆ ನಿಂತ ವಾಲ್ಮೀಕಿ ಸಮುದಾಯ ಭವನಗಳನ್ನು ತಮ್ಮ ಗಮನಕ್ಕೆ ತರಬೇಕು ಎಂದು ಎರಡು ತಾಲೂಕುಗಳ ಸಮಾಜದ ಅಧ್ಯಕ್ಷರುಗಳಿಗೆ ತಿಳಿಸಿದ ಶಾಸಕರು ನಗರದಲ್ಲಿರುವ ನಾಯಕರ ಸಮುದಾಯ ಭವನದ ಅಭಿವೃದ್ದಿಗೆ 1.5 ಕೋಟಿ ರೂಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಅರ್ಜುನಹಳ್ಳಿಯ ವಾಲ್ಮೀಕಿ ಸಮುದಾಯ ಭವನಕ್ಕೆ 25 ಲಕ್ಷ, ತಿಪ್ಪೂರು ಗ್ರಾಮದ ಭವನಕ್ಕೆ 50 ಲಕ್ಷ, ಹಂಪಾಪುರ ಸಮುದಾಯ ಭವನದ ಕಾಮಗಾರಿಗೆ 25 ಲಕ್ಷ, ಹೊಸೂರು ಕಲ್ಲಹಳ್ಳಿ ಗ್ರಾಮದ ಸಮುದಾಯ ಭವನದ ಅಭಿವೃದ್ದಿಗೆ 50 ಲಕ್ಷ ಸೇರಿದಂತೆ ಎಸ್‌ಟಿಪಿ ಯೋಜನೆಯಡಿ ಚಾಮಲಾಪುರ ಗ್ರಾಮದ ಸಿಸಿ ರಸ್ತೆ ಅಭಿವೃದ್ದಿಗೆ, ನಾರಾಯಣಪುರ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭವನದ ಅಭಿವೃದ್ದಿಗೆ 1 ಕೋಟಿ ರೂಗಳಿಗೂ ಹೆಚ್ಚು ಅನುದಾನವನ್ನು ನೀಡಿ ಸಮಾಜದವರ ಹಿತ ಕಾಯುತ್ತಿರುವುದಾಗಿ ತಿಳಿಸಿದರು.

ಹೆಬ್ಬಾಳು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು 2 ಗುಂಟೆ ಸರ್ಕಾರಿ ಜಮೀನು ನೀಡುವುದಾಗಿ ಈಗಾಗಲೇ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರಿಗೆ ಸೂಚಿಸಲಾಗಿದೆ ಎಂದ ಶಾಸಕ ಡಿ.ರವಿಶಂಕರ್ ತಿಪ್ಪೂರು ಗ್ರಾಮದಲ್ಲೂ ಸಮುದಾಯ ಭವನಕ್ಕೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿದ್ದು ಹೊಸಅಗ್ರಹಾರದಲ್ಲಿ ವಾಲ್ಮೀಕಿ ಭವನಕ್ಕೆ ಅನುದಾನ ನೀಡಲಾಗಿದೆ ಎಂದು ನುಡಿದರು.

ಮಹರ್ಷಿಗಳ ಜಯಂತಿ ಮಾಡಿದರೆ ಸಾಲದ್ದು ಅದರ ಜತೆಗೆ ಆವರ ತತ್ವ ಮತ್ತು ಆರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಆರ್ಥ ಬರುತ್ತದೆ ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್ ಸಮಾಜದ ಪ್ರತಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತ ಮಟ್ಟದ ಅಧಿಕಾರಿಗಳನ್ನಾಗಿ ಮಾಡಿದಾಗ ಮಾತ್ರ ಸಮಾಜದ ಉದ್ದಾರವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರಲ್ಲದೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದಾರೂ ಸಮಸ್ಯೆಗಳು ಇದ್ದರೆ ನಾನು ಸದಾ ತಮ್ಮ ಸೇವೆ ಮಾಡಲು ಸಿದ್ದನಿದ್ದು ಯಾವುದೇ ಮುಜುಗರವಿಲ್ಲದೆ ತನ್ನ ಬಳಿ ಹೇಳುವಂತೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮೊದಲು ಹಾಸನ-ಮೈಸೂರು ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊAದಿಗೆ ಮೆರವಣಿಗೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಹಶೀಲ್ದಾರ್ ಗಳಾದ ಜಿ.ಸುರೇಂದ್ರಮೂರ್ತಿ, ರುಕೀಯಾಬೇಗಂ, ಸಾಲಿಗ್ರಾಮ ತಾ.ಪಂ.ಇಒ ರವಿ, ಕೆ.ಆರ್.ನಗರ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಸುಬ್ಬುಕೃಷ್ಣ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ಉಪಾಧ್ಯಕ್ಷ ತಿಪ್ಪೂರುಮಹದೇವನಾಯಕ,  ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಶಿವುನಾಯಕ್, ನಾಗರಾಜು, ಜಿಲ್ಲಾ ಕಾಂಗ್ರೆಸ್ ಮುಖಂಡ ಕಾಂತರಾಜು.

ಸಮಾಜದ ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ಚಿಕ್ಕಕೊಪ್ಪಲು ಮಂಜುನಾಥ್, ಚಿಕ್ಕರಾಮನಾಯಕ, ಶಿವಣ್ಣ, ಗಣೇಶ್, ಚಂದ್ರು, ಶಂಕರನಾಯಕ, ಗಂಗಾಧರ್, ಮಹದೇವನಾಯಕ, ದೇವರಾಜನಾಯಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಬಿಇಒ ಆರ್.ಕೃಷ್ಣಪ್ಪ, ಇಸಿಒ ದಾಸಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

 

admin
the authoradmin

ನಿಮ್ಮದೊಂದು ಉತ್ತರ