ಕೇಂದ್ರದಲ್ಲಿ ಯಾರೇ ಇದ್ದರೂ ಹೈಕಮಾಂಡ್ ಗಳಿಗೆ ಸೆಡ್ಡು ಹೊಡೆದು ಗೆಲ್ಲುವ ಶಕ್ತಿ ಎಸ್.ಬಂಗಾರಪ್ಪ
ಬಡವರ ಬಂಗಾರಕ್ಕಿಂದು(ಅ.26) ಜನ್ಮದಿನ

ಬಂಗಾರಪ್ಪನ ಕಾಲಕ್ಕೆ ಮುಗಿತು. ಹಿಂದುಳಿದವರ್ಗಗಳ ಪ್ರಶ್ನಾತೀತ ನಾಯಕ ಸೋಲಿಲ್ಲದ ಸರದಾರ ರಾಜಕೀಯ ಚಾಣಾಕ್ಷ ಸಮಾಜವಾದಿ ಚಿಂತಕ ಎಂಬ ಹೆಗ್ಗಳಿಕೆಗೆ ಪಡೆದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಬಗ್ಗೆ ಮಾತನಾಡಲು ದಿನಗಳು ಸಾಲದು ಬರೆಯಲು ಪುಟಗಳು ಸಾಲದು ಕಲೆ ಸಾಹಿತ್ಯ ಸಂಗೀತ ಕ್ರೀಡೆಯಲ್ಲಿ ಆಸಕ್ತಿ ತಾಳಿದ್ದ ಬಂಗಾರಪ್ಪ ವರ್ಣರಂಜಿತ ರಾಜಕಾರಣಿ.
ಚುನಾವಣೆಯಲ್ಲಿ ಸೋಲುವುದು ಅವರು ಪಕ್ಷ ಅಧಿಕಾರಕ್ಕೆ ಬರುವುದು ರಾಜ್ಯ ರಾಜಕೀಯದ ಗಣಿತದ ಲೆಕ್ಕಾಚಾರವಾಗಿತ್ತು ಕುಗ್ರಾಮದಲ್ಲಿ ಹುಟ್ಟಿದ ಹಬ್ಬ ರಾಜ್ಯ ರಾಜಕೀಯವನ್ನು ತನ್ನ ಮೂಗಿನ ನೇರಕ್ಕೆ ಮಾಡಿಸುವಷ್ಟು ಮಟ್ಟಿಗೆ ಬೆಳೆದಿದ್ದು ಸಾಮಾನ್ಯ ಸಂಗತಿಯೇನಲ್ಲ ಬಂಗಾರಪ್ಪನವರಿಗೆ ಬಂಗಾರಪ್ಪನವರೇ ಸಾಟಿ.

ಸಾರೆಕೊಪ್ಪ ಬಂಗಾರಪ್ಪ ಅಂದರೆ ಪಕ್ಷಾಂತರ, ಹೊಸ ಪಕ್ಷಗಳ ಜನಕ ಶಾಸಕರು ಗಳನ್ನು ತಯಾರಿಸುವ ಕಾರ್ಖಾನೆ ಎಂಬೆಲ್ಲ ಹೆಗ್ಗಳಿಕೆ ಇದೆ ಕಾಂಗ್ರೆಸ್ ಪಕ್ಷದೊಂದಿಗೆ ಮನುಷ್ಯ ಕೊಂಡಾಗಲೆಲ್ಲ ಹೊಸದಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಆ ಮುಖಾಂತರ ನಾಡಿನ ಅಭಿವೃದ್ಧಿಯ ಸಾಧ್ಯ ಎಂಬುದನ್ನು ಸಾರಿದ ಖ್ಯಾತಿ ಬಂಗಾರಪ್ಪನವರಿಗೆ ಬಂಗಾರಪ್ಪ ಒಬ್ಬರು ರಾಜಕಾರಣಿ ಅದಕ್ಕಿಂತಲೂ ಅವರಲ್ಲಿ ಕಲೆಗಾರ ಸಂಗೀತಗಾರ ಕ್ರೀಡಾಪಟು ಎಲ್ಲರೂ ಮಾಡಿದ್ದಾರೆ.
ಬಂಗಾರಪ್ಪ ಹಾಡಿದರೆ ಕುಣಿದರೆ ಆಸೆ ಮಾಡಿದರಷ್ಟೇ ಅಭಿಮಾನಿಗಳು ಮೆಚ್ಚುತ್ತಿದ್ದರು ಬಂಗಾರಪ್ಪನವರನ್ನು ರಾಜಕಾರಣಿ ಈ ರೀತಿ ಜಿಲ್ಲೆಯ ಜನರು ಅವರನ್ನು ನೋಡಲು ಅವರ ಸಾಮಾನ್ಯರಂತೆ ಜನೋಪಕಾರಿ ಕೆಲಸ ಮಾಡಿದ್ದರಿಂದಲೇ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಕಾಲ ಬಂಗಾರಪ್ಪನ ಸೋಲಿಲ್ಲದ ಸರದಾರನಾಗಿ ಮಾಡಿದರು ರಾಜಕೀಯ ಆಕಾಶದಲ್ಲಿ ಬಂಗಾರಪ್ಪ ಧ್ರುವ ತಾರೆಯಾಗಿ ಮಿನುಗಿದರು ಶಾಂತವೇರಿ ಗೋಪಾಲಗೌಡರ ನಂತರದಲ್ಲಿ ಕರ್ನಾಟಕದ ರಾಜಕೀಯ ನೆಲದಲ್ಲಿ ಸಮಾಜವಾದಿ ಪಕ್ಷದ ಬೇರುಗಳಿಗೆ ನೀರು ಎರೆದು ಸಮಾಜವಾದಿ ರಾಜಕೀಯ ಚಿಂತನೆಗಳನ್ನು ಘೋಷಿಸಲು ಪೋಷಿಸಲು ಪ್ರಯತ್ನಿಸಿದ ಬಂಗಾರಪ್ಪ ಅತ್ಯಂತ ಕ್ರಿಯಾಶೀಲ ರಾಜಕಾರಣಿ.
ವಿಭಿನ್ನವಾದ ಅಭ್ಯಾಸ ಅಭಿವೃದ್ಧಿ ಅನುಭವಗಳನ್ನು ಒಂದಿರುವ ಬಂಗಾರಪ್ಪನವರು ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡರ ಸಹವಾಸದಿಂದ ಸ್ವಾಭಿಮಾನವನ್ನು ದೇವರಾಜು ಅರಸು ಅವರ ಒಡನಾಟದಿಂದ ಸಾಮಾಜಿಕ ನ್ಯಾಯದ ಬದ್ದತೆಯನ್ನು ತುಂಬಿಕೊಂಡವರು ಸಮಾಜವಾದಿ ಚಿಂತಕರು ರಾಜಕಾರಣಿಗಳು ಸಾಹಿತಿಗಳು ಮತ್ತು ಬುದ್ಧಿಜೀವಿಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದ ಬಂಗಾರಪ್ಪನವರು ಸಾಮಾಜಿಕ ಬದಲಾವಣೆಗಾಗಿ ಸಾಹಿತ್ಯದಿಂದ ಹೊಸದೊಂದು ಹುಡುಕುವ ಅನ್ವೇಷಣ ಸ್ವಭಾವ ಮತ್ತು ಅಧ್ಯಯನಶೀಲತೆ ಯನ್ನು ಮೈಗೂಡಿಸಿಕೊಂಡಿದ್ದರು.

ಹೋರಾಟದ ನೆಲದಲ್ಲಿ ಬಂಗಾರಪ್ಪನವರಿಗೆ ಪ್ರೇರಣೆಯಾದವರು ಹಲವರು ಶಿವಮೊಗ್ಗ ಜಿಲ್ಲೆಯ ಸಮಾಜವಾದದ ಕುದಿನೆಲದ ಸಮಾಜವಾದಿ ಶಿಶುವಾಗಿ ಬೆಳೆದು ಬಂದವರಲ್ಲಿ ಬಂಗಾರಪ್ಪ ಒಬ್ಬರು ರಾಜಕೀಯದ ಏಳುಬೀಳುಗಳನ್ನು ಕಳೆದ ನಾಲ್ಕು ದಶಕಗಳಿಂದ ಅವರು ಪಕ್ಷ ರಾಜಕಾರಣದ ದುರಂತಗಳು ದಿಗ್ವಿಜಯಗಳು ಕಾಳಜಿಗಳು ಸಾಕ್ಷಿಪ್ರಜ್ಞೆಯಾಗಿ ನಿಂತಿರುವ ಬಂಗಾರಪ್ಪ ಅಲ್ಪಸಂಖ್ಯಾತ ಸಮುದಾಯದ ಸಾಮಾನ್ಯ ಕುಟುಂಬದಿಂದ ಬಂದವರು ಎಂಬಂತೆ ಕರ್ನಾಟಕದ ಮಾಸ್ ಲೀಡರ್ ಆಗಿ ಬೆಳೆದ ಪರಿ ಅತ್ಯಂತ ರೋಚಕ.
1970ರ ದಶಕ ಜನಪದ ಚಳುವಳಿಗಳ ಮತ್ತು ಸೋಷಿಯಲಿಸ್ಟ್ ಸಂಪರ್ಕಕ್ಕೆ ಬಂದ ಬಂಗಾರಪ್ಪನವರು ಬುದ್ಧಿಜೀವಿಗಳ ಜೊತೆ ಒಡನಾಟವನ್ನು ಇಟ್ಟುಕೊಂಡಿದ್ದರು. ರಾಜ್ಯ ರಾಜಕಾರಣದಲ್ಲಿ ಒಂಟಿಸಲಗದಂತೆ ಸೆಣೆಸುತ್ತ ಉಳಿದಿದ್ದ ಒಂದೇಒಂದು ಶಕ್ತಿ ಅಂದರೆ ಅದು ಬಂಗಾರಪ್ಪನವರು ಅದು ಅವರ ವಿಶೇಷ ಹಾಗೆಯೇ ಒಕ್ಕಲಿಗರ ಲಿಂಗಾಯಿತರ ಜತೆಯಲ್ಲಿಯೇ ನಡೆಯುತ್ತಿದ್ದ ಶಕ್ತಿ ರಾಜಕಾರಣ ವಿಸ್ತಾರಗೊಂಡು ಅನಾಥವಾಗಿದ್ದ ಹಿಂದುಳಿದ ವರ್ಗಗಳು ದಲಿತರು ಮತ್ತು ಕೆಳಜಾತಿಗಳಿಗೆ ತಲುಪಿಸಿದ್ದು ಬಂಗಾರಪ್ಪನವರು.
ಅರಸು ಅವರಿಂದ #ದೇವರಾಜ ಅರಸು ಶಾಂತವೇರಿ ಗೋಪಾಲಗೌಡ ಪಟೇಲ್ ಮುಂತಾದ ಘಟಾನುಘಟಿ ರಾಜಕಾರಣಿಗಳ ಜೊತೆ ಹಾಗೂ ಪಿ ಲಂಕೇಶ್ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ ತೇಜಸ್ವಿ ಶಂಕರಪ್ಪ ಕಡಿದಾಳ್ ಶಾಮಣ್ಣ ಸಮಾಜವಾದಿ ಚಿಂತಕರು ಸಹವಾಸದಲ್ಲಿ ಬಂಗಾರಪ್ಪನವರು ಕಟ್ಟಿಕೊಳ್ಳದ ಪಕ್ಷ ಕರ್ನಾಟಕದಲ್ಲಿ ಇಲ್ಲ 1973 ಕ್ರಾಂತಿಕಾರಿ ರಂಗ ಪಕ್ಷ ಕಟ್ಟಿ ಪ್ರಥಮ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಹೊರತು ಪಡಿಸಿದ ಸರ್ಕಾರ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ ಬಂಗಾರಪ್ಪ ತಮ್ಮ ಪೊಲಿಟಿಕಲ್ ಜರ್ನಿಯ ಕೊನೆಯವರೆಗೂ ರಾಜಕಾರಣದ ನಿರ್ಣಾಯಕ ಶಕ್ತಿಯಿಂದ ಪರಿಗಣಿಸಲ್ಪಟ್ಟಿದ್ದರು.

ಇದಕ್ಕೆ ಬಹುಮುಖ್ಯವಾಗಿ ಅವರಿಗಿರುವ ಸಮಾಜವಾದಿ ಸಿದ್ಧಾಂತದ ಇನ್ನೆಲೆ ಸಾಮಾಜಿಕವಾಗಿ ಶೋಷಣೆಗೆ ತೀರಾ ಸಾಮಾನ್ಯ ಕುಟುಂಬದಿಂದ ಬಂದ ಜೀವನ ಅನುಭವ ಜನರನ್ನು ಸಂಘಟಿಸುವ ಚಾತುರ್ಯ ಜನಪರ ಆಂದೋಲನದಲ್ಲಿ ಗುರುತಿಸಿಕೊಂಡ ಬಗ್ಗೆ ಶಕ್ತಿ ರಾಜಕಾರಣದ ಚಾಣಕ್ಯ ಪಟ್ಟುಗಳು. ಮತದಾರರೊಂದಿಗೆ ಬೆಳೆಸಿಕೊಂಡ ಭಾವನಾತ್ಮಕ ಆತ್ಮೀಯತೆ ಆಡಳಿತದಲ್ಲಿ ತೋರಿದ ಬಿರುಸು ಮತ್ತು ಬಿಗಿಹಿಡಿತ ನಿರ್ಭೀತ ವ್ಯಕ್ತಿತ್ವ ಮತ್ತು ಛಲ ಅವರ ರಾಜಕೀಯ ಹಿರಿಮೆಯ ಮೂಲ ಬಂಡವಾಳವಾಗಿದೆ.
ಕಡುಬಡತನದಲ್ಲಿ ಹುಟ್ಟಿದ ಬಂಗಾರಪ್ಪ ಬಡತನದ ಬೇಗೆಯನ್ನು ಅನುಭವಿಸಿದ್ದರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ಮತ್ತು ಅವರ 1933 ರಲ್ಲಿ 26 ಅಕ್ಟೋಬರ್ ನಲ್ಲಿ ಜನಿಸಿದ ಸಾರೆಕೊಪ್ಪ ಬಂಗಾರಪ್ಪನವರು ಶಾಲೆಯೊಳಗೆ ಪಾಠಗಳೊಂದಿಗೆ ಊರೊಳಗೆ ಡೊಳ್ಳು ಕುಣಿತ ನಾಟಕ ಮುಂತಾದ ಕಲೆಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಲೇ ಬೆಳೆದರು.
ಜೊತೆಗೆ ಕಾನೂನು ಪದವಿ ಡಿಪ್ಲೊಮಾ ಇನ್ ಸೋಶಿಯಲ್ ಸೈನ್ಸ್ ಸಾವಿರ 939 ರಲ್ಲಿ ಆನವಟ್ಟಿಯಲ್ಲಿ ಶಾಲೆ ಮೆಟ್ಟಿಲು ಏರಿದರು ಕೊಪ್ಪಳದಲ್ಲಿ ಪ್ರೌಢಶಾಲೆ ದಾವಣಗೆರೆಯಲ್ಲಿ ಇಂಟರ್ಮೀಡಿಯೇಟ್ ಮುಗಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು 958 ಜನವರಿ ತಿಂಗಳಲ್ಲಿ ತಮ್ಮ ತಮ್ಮ ವಿವಾಹ ಜೀವನಕ್ಕೆ ಕಾಲಿಟ್ಟರು.

ಕಡುಬಡತನದ ಅರಿವಿದ್ದ ಬಂಗಾರಪ್ಪನವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಶೋಷಿತರು ದಮನಿತರು ಹಾಗೂ ಅತಿ ಹಿಂದುಳಿದ ವರ್ಗಗಳ ಪರವಾದ ಧ್ವನಿ ಮತ್ತು ಅವರ ಬಗ್ಗೆ ಹೋರಾಡುವ ಮನಸ್ಥಿತಿಯನ್ನು ಹೊಂದಿದ್ದರು ಹೀಗಾಗಿ ಅವರು ಅಧಿಕಾರದಲ್ಲಿದ್ದಾಗ ಸಿಕ್ಕ ಅವಕಾಶದಲ್ಲಿ ಬಡಜನರಿಗೆ ಹಲವು ಯೋಜನೆಗಳನ್ನು ರೂಪಿಸಿದರು ಶಾಂತವೇರಿ ಗೋಪಾಲಗೌಡರ ಒಡನಾಟ ಹೋರಾಟಕ್ಕೆ ಪ್ರೇರಣೆಯನ್ನು ನೀಡಿತು
.ಅದು 60ರ ದಶಕ ಶಿವಮೊಗ್ಗ ಜಿಲ್ಲೆಯ ಒಂದು ಚರಿತ್ರಾರ್ಹ ಕಾಗೋಡು ಸತ್ಯಾಗ್ರಹ ಕಳೆದುಕೊಂಡಂತಹ ಕಾಲ ಶಾಂತವೇರಿ ಗೋಪಾಲಗೌಡರ ಸೈದ್ಧಾಂತಿಕ ನಿಲುವು ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ವಲವು ಮಲೆನಾಡಿನ ಆ ನೆಲದಲ್ಲಿ ಅರಳು ಗುಟ್ಟುವ ಮೂಲಕ ಇಡೀ ನಾಡನ್ನು ಹೊಸ ವಿಚಾರಕ್ರಾಂತಿಯ ತಿಳಿಯಿತು ಶಿವಮೊಗ್ಗ ಜಿಲ್ಲೆಯ ಗೇಣಿದಾರರ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು ರೈತರನ್ನು ಸೂಚಿಸಲಾಗುತ್ತಿತ್ತು ಇಂತಹ ಸಂದರ್ಭದಲ್ಲಿ ಸಾವಿರ 1951 ಏಪ್ರಿಲ್ 8ರಂದು ಸತ್ಯಗ್ರಹ ನಡೆಯಿತು ಮೇಲ್ಜಾತಿಯ ಭೂಮಾಲೀಕರ ಜಮೀನಿನಲ್ಲಿ ಕೆಳಜಾತಿಯ ರೈತರಿಗೆ ನಿರತರಾಗಿ ದುಡಿಯುತ್ತಿದ್ದರು ಭೂಒಡೆತನ ಇವರಿಗಿರಲಿಲ್ಲ ಭೂಮಾಲೀಕರು ರೈತರನ್ನು ಮನುಷ್ಯರಂತೆ ಭಾವಿಸಿರಲಿಲ್ಲ ನೀಡುವಾಗ ಅಳತೆಯಲ್ಲಿ ಮೋಸ ಮಾಡುತ್ತಿದ್ದರು ಬಂಗಾರಪ್ಪನವರು.
ಅಸಂಖ್ಯಾತರ ಜನಾಂಗವನ್ನು ಅವಮಾನಗಳಿಂದ ತತ್ತರಿಸಿದ್ದರು ಅವಮಾನಕರ ಮುಟ್ಟಿದಾಗ ಕ್ರಾಂತಿಕಾರಿ ಆಲೋಚನೆಯಲ್ಲಿ ಸ್ಪೋಟಗೊಂಡಿತ್ತು ರಾಷ್ಟ್ರೀಯ ನಾಯಕರಾದ ಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮುಂತಾದವರು ಸಾಗರಕ್ಕೆ ಭೇಟಿಕೊಟ್ಟು ಕಾಗೋಡು ಹೋರಾಟವನ್ನು ಹುರಿದುಂಬಿಸಿದರು ಹೋರಾಟ ಬಂಗಾರಪ್ಪನವರಿಗೆ ಸಮಾಜವಾದಿ ಚಿಂತನೆಗೆ ಕಿಚ್ಚು ಹೊತ್ತಿಸಿತು.ವಕೀಲರಾಗಿದ್ದ ಬಂಗಾರಪ್ಪ ಬಡವರಪರ ವಾದ ಮಾಡಿದರು.

ಕಾನೂನು ಹೋರಾಟ ಗೇಣಿದಾರರ ಪರ ವಾದ ಮಂಡಿಸಿ ಶೋಷಿತರಿಗೆ ಧ್ವನಿಯಾಗಿದ್ದರು ಕಾನೂನು ಪದವೀಧರರಾದ ನಂತರ ಶಿವಮೊಗ್ಗದಲ್ಲಿ ಆರಂಭಿಸಿ ಪರವಾಗಿ ಕಾನೂನು ಹೋರಾಟಗಳನ್ನು ಮಾಡಿದ್ದರು ರೈತರ ವಿರುದ್ಧ ಅನೇಕ ಕೇಸುಗಳು ದಾಖಲಾದಾಗ ಸಾವಿರಾರು ಜನ ರೈತರ ಪರವಾಗಿ ವಾದ ಮಂಡಿಸಿ ಗೆಲುವನ್ನು ತಂದು ಕೊಡುತ್ತಿದ್ದರು ಇದು ಬಂಗಾರಪ್ಪನವರ ಜನಪ್ರಿಯತೆಯನ್ನು ಮುಗಿಲೆತ್ತರಕ್ಕೆ ಏರಿಸುತ್ತದೆ ಸಾಗರ ತಾಲೂಕಿನ ಮುಳುಗಡೆ ಪ್ರದೇಶಗಳಿಗೆ ಸೇರಿದ ಜಮೀನು ಕಳೆದುಕೊಂಡ ರೈತರು ಸಂತ್ರಸ್ತರ ಪರವಾಗಿ ವಕೀಲ ಬಂಗಾರಪ್ಪ ಪರವಾಗಿ ನಿಲ್ಲುತ್ತಾರೆ.
ಪೊಲೀಸ್ ಕಚೇರಿ ಎಂದರೆ ಕಾಲದಲ್ಲಿ ರೈತರನ್ನು ಸಂಘಟಿಸಿ ಅವರಲ್ಲಿ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುತ್ತಾರೆ ಅವರ ಯಶಸ್ವಿ ಕಾನೂನು ಹೋರಾಟಗಳಿಂದಾಗಿ ಶಿವಮೊಗ್ಗ ಜನ ಭವಿಷ್ಯದಲ್ಲಿ ತಮಗೊಬ್ಬ ನಿರ್ಭೀತ ನಾಯಕ ಸಿಕ್ಕ ಎಂಬ ಸಂತೋಷ ಪಡುತ್ತಾರೆ.
ಸಾವಿರದ ಒಂಬೈನೂರ 1967 ರಲ್ಲಿ ಬಂಗಾರಪ್ಪನವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅನಿವಾರ್ಯತೆ ಎದುರಾಗುತ್ತದೆ ಕ್ಷೇತ್ರ ವಿಭಜನೆಯಾಗಿ ಸೊರಬ ಸಾಗರದಿಂದ ಪ್ರತ್ಯೇಕಗೊಳ್ಳುತ್ತದೆ ಹೊಸ ಕ್ಷೇತ್ರದ ಪಕ್ಷದ ನಾಯಕರಿಗೆ ಕಂಡವರೇ ಬಂಗಾರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಿದ ಬಂಗಾರಪ್ಪ ಗೆಲ್ಲುತ್ತೇನೆಂಬ ವಿಶ್ವಾಸವಿರಲಿಲ್ಲ ನಾಯಕನಿಗಾಗಿ ಪರಿತಪಿಸುತ್ತಿದ್ದ ಬಂಗಾರಪ್ಪನವರನ್ನು ಕಾಂಗ್ರೆಸ್ ಪಕ್ಷದ ಎದುರಾಳಿ ಅವರಪ್ಪ 12500 ಮತಗಳ ಅಂತರದಿಂದ ಗೆಲ್ಲಿಸಿದರು.

ಬಂಗಾರಪ್ಪ ನಾಲ್ಕು ದಶಕಗಳ ಕಾಲ ಸೋಲು ಕಾಣಲಿಲ್ಲ. ಕಡು ಬಡತನದಲ್ಲಿ ಹುಟ್ಟಿ ಬೆಳೆದ ಮೈಕ್ರೋಸ್ಕೋಪಿಕ್ ಕಮ್ಯುನಿಟಿ ಇಂದ ಬಂದಂತಹ ಯುವಕ ಮುಂದೆ ರಾಜ್ಯ ರಾಜಕಾರಣವನ್ನು ತನ್ನ ಅಂಗೈಯಲ್ಲಿ ನಿಯಂತ್ರಿಸುವ ಮಟ್ಟಿಗೆ ಬೆಳೆದದ್ದು ಮಾತ್ರ ರಾಜ್ಯದ ಇತಿಹಾಸ ಬಂಗಾರಪ್ಪನವರಿಗೆ ಸಮಾಜವಾದಿ ಇಂದ ಕಾಂಗ್ರೆಸ್ಗೆ ಆಕರ್ಷಿತರಾಗಲು ಬಂಗಾರಪ್ಪನವರಿಗೆ ಅರಸು ಅವರ ಪ್ರೇರಣೆಯಾಯಿತು ಏಳು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆಯುತ್ತಾರೆ.
1996 ರಿಂದ ಸತತವಾಗಿ ಪಾರ್ಲಿಮೆಂಟ್ ಸದಸ್ಯರಾಗುತ್ತಾರೆ 1999ರಲ್ಲಿ ಮಾತ್ರ ಒಮ್ಮೆ ಸೋಲನ್ನು ಅನುಭವಿಸುತ್ತಾರೆ . ಸಂಯುಕ್ತ ಸೋಶಿಯಲಿಸ್ಟ್ ಪಕ್ಷದಿಂದ ಎರಡನೇ ಬಾರಿ ಆಯ್ಕೆ ಆಗುತ್ತಾರೆ ಬಡವರ ಪರವಾದ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುವ ಹೊತ್ತಿಗೆ ಶಾಂತವೇರಿ ಗೋಪಾಲಗೌಡರು ಇಹಲೋಕ ತ್ಯಜಿಸಿದ್ದಾರೆ ಗೋಪಾಲಗೌಡರ ಇಲ್ಲದ ಸೋಷಲಿಸ್ಟ್ ಪಕ್ಷದಲ್ಲಿ ಉಂಟಾದ ರಾಜಕೀಯ ಹಾಗೂ ಸೈದ್ಧಾಂತಿಕ ತಾರತಮ್ಯ ಹಾಗೂ ಪಲ್ಲಟಗಳ ಬಗ್ಗೆ ಬಂಗಾರಪ್ಪನವರಿಗೆ.
ಅಸಹನೆ ಉಂಟಾಗಿ ಹಾಗೂ ಅಲ್ಲಿರುವ ಗುಂಪುಗಾರಿಕೆಯ ಬಗ್ಗೆ ಅಸಮಾನತೆಗಳ ಬಗ್ಗೆ ಬಂಡೆದ್ದು ಹೊರಬರಲು ಪ್ರಾರಂಭಿಸುತ್ತಾರೆ ಆಗಿನ ಕಾಲಘಟ್ಟದಲ್ಲಿ ಗೋಪಾಲಗೌಡರನ್ನು ಸಮಾಜವಾದಿ ಕನಸುಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ನನಸು ಮಾಡುವ ಚಟುವಟಿಕೆಗಳಲ್ಲಿ ದೇವರಾಜಅರಸು ತೊಡಗಿದ್ದರು ಕಾಂಗ್ರೆಸ್ ನ ಸಾಂಪ್ರದಾಯಿಕ ರಾಜಕಾರಣಕ್ಕಿಂತ ಭಿನ್ನವಾದ ಜನಪರ ಆಡಳಿತಕ್ಕೆ ಅರಸು ಹಿಂದುಳಿದ ವರ್ಗಗಳ ಆತ್ಮಸ್ಥೈರ್ಯಕ್ಕೆ ವೇದಿಕೆ ರೂಪಿಸಿದ್ದರು ಅದನ್ನು ಕಾರ್ಯಗತಗೊಳಿಸುವ ಯೋಜನೆ ರೂಪಿಸಿದ್ದರು.

ಶೋಷಿತ ಸಮುದಾಯದ ಉತ್ಸಾಹಿ ಯುವ ರಾಜಕಾರಣಿಗಳನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಒತ್ತಡಕ್ಕೆ ಮಣಿದ ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಸೇರಿದರು ಬಂಗಾರಪ್ಪನವರ ಸಮಾಜವಾದಿ ಸಿದ್ಧಾಂತ ಹಾಗೂ ಧೋರಣೆಗೆ ಬಂಗಾರಪ್ಪನವರನ್ನು19972 ರಲ್ಲಿ ಗೃಹಮಂತ್ರಿಯಾಗಿ ನೇಮಿಸುತ್ತಾರೆ ಸಾವಿರದ 1975 ರಲ್ಲಿ ಅವರು ಅರಸು ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಸಣ್ಣ ಮತ್ತು ದೊಡ್ಡ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡರು ಕಾರ್ಯಗತಗೊಳಿಸುತ್ತ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಬುನಾದಿ ಹಾಕುತ್ತಾರೆ.
ಆದರೆ ಬಂಗಾರಪ್ಪ ಎಂಬ ನಾಯಕನಿಗೆ ಪಕ್ಷ ಬಿಡುವುದು ಮತ್ತು ಪಕ್ಷ ಸೇರಿಕೊಳ್ಳುವ ಕೆಲಸ ರಾಷ್ಟ್ರನಾಯಕರಿಗೆ ಸವಾಲು ಆಗುತ್ತದೆ. 1969 ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ನೇತೃತ್ವದ ಆಡಳಿತ ಕಾಂಗ್ರೆಸ್ ಹಾಗೂ ನಿಜಲಿಂಗಪ್ಪ ನೇತೃತ್ವದ ಸಂಯುಕ್ತ ಕಾಂಗ್ರೆಸ್ ಪಕ್ಷಗಳು ಅಸ್ತಿತ್ವಕ್ಕೆ ಬಂದು ಕರ್ನಾಟಕದಲ್ಲಿ ಅರಸು ಶ್ರೀಮತಿ ಇಂದಿರಾ ಗಾಂಧಿ ಅವರ ಪಕ್ಷದ ಬೆಂಬಲಿಗರಾಗಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುತ್ತಾರೆ. 1972-1979 ಜನಪ್ರಿಯ ಮುಖ್ಯಮಂತ್ರಿಯಾಗಿ ಹಲವು ಬಡವರಪರ ಯೋಜನೆಗಳನ್ನು ನೀಡುವ ಮೂಲಕ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಾರೆ.
1975 ರಾಯಲ್ ಬರೆಯಲ್ಲಿ ಸೋತಿದ್ದ ಇಂದಿರಾಗಾಂಧಿಯವರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿ ದೇಶದ ಪ್ರಧಾನಿ ಮಾಡುವ ಮೂಲಕ ರಾಜಕೀಯ ಭವಿಷ್ಯ ನೀಡಿದವರು. ಅರಸು ಮತ್ತು ಬಂಗಾರಪ್ಪನವರನ್ನು ಕಿಂಗ್ ಮೇಕರ್ ಮಾಡುತ್ತದೆ ಆದರೆ ರಾಜಕಾರಣದಲ್ಲಿ ಆಗಿರಬೇಕು ಎಂದು ಬಯಸಿದ್ದರು ರಾಜಕಾರಣಿಗಳನ್ನು ಅವರಿಂದ ದೂರ ಮಾಡುವಲ್ಲಿ ಯಶಸ್ವಿಯಾದರು. ಅರಸು ಪಾಳೆಯದಿಂದ ಬಂಗಾರಪ್ಪನವರನ್ನು ಹೊರಬರುವಂತೆ ಮಾಡಿ ಅರಸು ಅವರನ್ನು ಏಕಾಂಗಿಯಾಗಿ ಮಾಡಲಾಯಿತು. ಕಾಂಗ್ರೆಸ್ ತೊರೆದ ಅರಸುರವರು ಕರ್ನಾಟಕ ಕ್ರಾಂತಿರಂಗ ಪಕ್ಷ ಕಟ್ಟುತ್ತಾರೆ.

ಅರಸು ನಂತರ ಬಂಗಾರಪ್ಪನವರು ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರಾಗಿ ಬೆಳೆಯುತ್ತಾರೆ ಇಂದಿರಾಗಾಂಧಿಯವರು ಬಂಗಾರಪ್ಪನವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ ಈ ಸಂದರ್ಭದಲ್ಲಿ ಬಂಗಾರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುತ್ತಾರೆ ಆದರೆ ಅರಸು ಅವರನ್ನು ಕೈಬಿಟ್ಟು ಬಂಡಾಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಂಗಾರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗುತ್ತಾರೆ ಆದರೆ ಸಾವಿರ 1980 ಮುಖ್ಯಮಂತ್ರಿ ಗುಂಡೂರಾವ್ ಅವರ ಮಂತ್ರಿಮಂಡಲದಲ್ಲಿ ಬಂಗಾರಪ್ಪನವರು ಸಚಿವರಾಗುತ್ತಾರೆ ಈ ಸಂದರ್ಭದಲ್ಲಿ ಗೇಣಿದಾರರಿಗೆ ಕಾರ್ಮಿಕರಿಗೆ ಸಣ್ಣ ರೈತರಿಗೆ ನೆರವಾಗುತ್ತಾರೆ.
ಗುಂಡೂರಾವ್ ಅವರ ಸರ್ಕಾರದಲ್ಲಿ ದುರ್ಬಲರಿಗೆ ದೀನರಿಗೆ ಸರ್ಕಾರ ಅಡ್ಡಿ ಮಾಡುತ್ತಿದೆ ಎಂದು ಭಾವಿಸಿ ಭಿನ್ನಮತೀಯ ರಾಗಿ ಹೊರಬಂದು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸುತ್ತಾರೆ ರಾಜಕೀಯದಲ್ಲಿ ಯಾರು ಮೋಸ ಮಾಡಿದರು ಅವರನ್ನು ಧ್ವಂಸಮಾಡುವ ಶಕ್ತಿಯನ್ನು ಇಟ್ಟುಕೊಳ್ಳಬೇಕೆಂದು ತಂತ್ರಗಾರಿಕೆ ಬಂಗಾರಪ್ಪ ಹಿಂದುಳಿದ ವರ್ಗದ ನಾಯಕನಿಗೆ ಕಲೆ ಗೊತ್ತಿತ್ತು.
ನಂತರ ಬಂಗಾರಪ್ಪ ಅರಸು ಸ್ಥಾಪಿಸಿದ ಕರ್ನಾಟಕ ಕ್ರಾಂತಿರಂಗ ಪಕ್ಷದ ಉತ್ತರಾಧಿಕಾರಿಯಾಗಿ ನಿಂತು ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ಪಕ್ಷದ ಬಲವರ್ಧನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ಸೇತರ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ಗೊಳ್ಳುವಂತೆ ಮಾಡುತ್ತಾರೆ ಜನತಾ ಪಕ್ಷ ರೂಪಿಸಿಕೊಂಡ ಒಕ್ಕೂಟವನ್ನು ಕ್ರಾಂತಿರಂಗ ಪಕ್ಷ ಬೆಂಬಲಿಸುತ್ತಾರೆ ಬಂಗಾರಪ್ಪನವರು ಜನತಾಪಕ್ಷ ವಿಜಯಕ್ಕೆ ಗಣನೀಯ ಪ್ರಮಾಣದಲ್ಲಿ ಶ್ರಮಿಸಿದ್ದರು ಸಹ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬರಲಿಲ್ಲ ದೆಹಲಿಯಿಂದ ನೇಮಿಸಲ್ಪಟ್ಟ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುತ್ತಾರೆ.

ಅಸಂಖ್ಯಾತ ನಾಯಕರಿಂದ ಬಂಗಾರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವುದು ಸರಳ ಮತ್ತು ಸತ್ಯವಾದದ್ದು.ಬಂಗಾರಪ್ಪ ನಾಯಕತ್ವದ ಗುಣ ಹಾಗೂ ಸಂಘಟನಾ ಸಾಮರ್ಥ್ಯ ಮನಗಂಡಿದ್ದ ರಾಮಕೃಷ್ಣ ಹೆಗಡೆ ಸರ್ಕಾರ ಬಂಗಾರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿದರೂ ಕೂಡ ಅದಕ್ಕೆ ಸೊಪ್ಪುಹಾಕದ ಬಂಗಾರಪ್ಪ ಕ್ರಾಂತಿರಂಗ ಪಕ್ಷದಿಂದ ಹೊರಬಂದು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಾರೆ
1983 ರಲ್ಲಿ ಕಾಂಗ್ರೆಸ್ ಗೆ ಮರಳುವ ಬಂಗಾರಪ್ಪ ಮುಂದೆ ಎಂಟು ವರ್ಷಗಳ ಕಾಲ ವಿರೋಧಪಕ್ಷ ಸ್ಥಾನದಲ್ಲಿದ್ದು ದುರ್ಬಲ ವರ್ಗದವರ ಹಿತರಕ್ಷಣೆಗೆ ಆಡಳಿತ ಪಕ್ಷದವರಿಗೆ ಎಲ್ಲಾ ರಾಜ್ಯದ ದುರ್ಬಲವರ್ಗದ ಧ್ವನಿಯಾಗಿ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ ಸಾವಿರದ ಒಂಬೈನೂರ ಎಂಬತ್ತ 9ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 177 ಸ್ಥಾನ ಪಡೆದು ಜಯ ಗಳಿಸುತ್ತದೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಬಂಗಾರಪ್ಪನವರು ನಡೆಸಿದ ಪ್ರಚಾರವೇ ಕಾರಣವಾಗಿದ್ದರೂ ಕೂಡ ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗುತ್ತಾರೆ ತೀರ್ಮಾನದಂತೆ ವೀರೇಂದ್ರ ಪಾಟೀಲ್ ಅವರ ಸರ್ಕಾರದಲ್ಲಿ ಕೃಷಿ ಮತ್ತು ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.
1989ರಲ್ಲಿ ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಭಿನ್ನಮತೀಯರ ವಿರೋಧ ಆರಂಭವಾಗುತ್ತದೆ ಹಾಗೆ ಬಂಗಾರಪ್ಪ ಹಾಗೂ ಪಾಟೀಲರ ನಡುವೆ ಸಹಜವಾದ ಭಿನ್ನಾಭಿಪ್ರಾಯ ಉಂಟಾಗುತ್ತದೆ ಆಡಳಿತದ ಬಗ್ಗೆ ಬಂಗಾರಪ್ಪ ಅವರು ವಿರೋಧವನ್ನು ದಾಖಲಿಸಲು ಮುಂದಾಗುತ್ತಾರೆ ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ರಾಜುಗಾಂಧಿ ಅವರು ಆಡಳಿತದ ಮತ್ತು ರಾಜ್ಯದ ವಿದ್ಯಾಮಾನವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಪಕ್ಷದ ಶಾಸಕರು ಹಾಗೂ ಆಡಳಿತ ವೈಫಲ್ಯತೆಗೆ ಕಾರಣದಿಂದಾಗಿ ಕಾಯಿಲೆಗೆ ತುತ್ತಾಗಿರುವ ವೀರೇಂದ್ರ ಪಾಟೀಲರಿಗೆ ರಾಮನಗರದಲ್ಲಿ ಉಂಟಾದ ಕೋಮುಗಲಭೆ ಹಾಗೂ ರೈತ ಚಳುವಳಿಯ ಪರಿಣಾಮಗಳು ಪಾಟೀಲ್ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ.

1990.ಅಕ್ಟೋಬರ್ 17ರಂದು ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಸಿಕ್ಕ ಅವಕಾಶವನ್ನು ಒಬ್ಬ ವ್ಯಕ್ತಿ ಸಮರ್ಥವಾಗಿ ಏಕೆ ಆಡಳಿತವನ್ನು ನಡೆಸಬಹುದು ಮಾದರಿ ಆಗಬಹುದು ಎಂಬುದನ್ನು ಬಂಗಾರಪ್ಪನವರ ಕಾಲದ ಆಡಳಿತ ಸಾಕ್ಷಿಯಾಗಿದೆ. ಹಳ್ಳಿಗಾಡಿನ ಬಡ ಮಕ್ಕಳನ್ನು ಶಾಲೆಗೆ ದಾಖಲಿಸಲು ಮೂಲಕ ಸಾಕ್ಷರತೆ ಸಾಧಿಸುವಲ್ಲಿ ಕೈಗೊಂಡ ಅರ್ಥಪೂರ್ಣವಾಗಿತ್ತು.
ವಸತಿಹೀನರಿಗೆ ಲಕ್ಷಾಂತರ ಮನೆ ನಿವೇಶನ ನೀಡುವ ಯೋಜನೆ ದೇಶದಲ್ಲಿ ಜನಮನ್ನಣೆ ಗಳಿಸಿತು ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿತ್ತು ಮೂಲಕ ಆರ್ಥಿಕ ಸ್ಥಿತಿ ಸುಧಾರಿಸಲು ಕೈಗೊಂಡ ಕೆಲಸ ದುರ್ಬಲ ವರ್ಗದವರಿಗೆ ಸಹಾಯ ಆಗುತ್ತದೆ.
* ಗ್ರಾಮೀಣ ಕೃಪಾಂಕ ಮಾದರಿ ಹಳ್ಳಿ ಗಾಡಿನ ಯುವಕರ ಭವಿಷ್ಯ ಬದಲಿಸುತ್ತದೆ. * ಕನ್ನಡ ಪ್ರಾಧಿಕಾರ ರಚನೆ * ಪುಸ್ತಕ ಪ್ರಾಧಿಕಾರ ರಚನೆ.
ಇವುಗಳು ಪ್ರಮುಖವಾಗಿ ಅವರ ಆಡಳಿತದ ಭಾಗವಾದವು ಕಾವೇರಿ ವಿವಾದ ಭುಗಿಲೆದ್ದಾಗ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಮ್ಮದೇ ಸರ್ಕಾರ ಇದ್ದರೂ ಕೂಡ ಕೇಂದ್ರಕ್ಕೆ ಕ್ಯಾರೆ ಎನ್ನದೆ ನಾಡಿನ ಜಲ ನೆಲಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು.
ಬಹುಪಾಲು ಜನಪದ ಆಡಳಿತವನ್ನು ನೀಡುತ್ತಿದ್ದ ಬಂಗಾರಪ್ಪನವರನ್ನು ರಾಜೀವ್ ಗಾಂಧಿ ಹತ್ಯೆಯ ನಂತರ ಪಿ ವಿ ನರಸಿಂಹರಾವ್ ದೇಶದ ಪ್ರಧಾನಿಯಾದ ಸಂದರ್ಭದಲ್ಲಿ ಇಂದಿರಾ ಕುಟುಂಬದವರನ್ನು ಮಾಡುವ ನರಸಿಂಹರಾವ್ ಬಂಗಾರಪ್ಪನವರ ರಾಜೀನಾಮೆಯನ್ನು ಕೇಳುತ್ತಾರೆ ರಾಜ್ಯದ ಅಧಿಕಾರವನ್ನು ಮುಷ್ಟಿಯಲ್ಲಿ ಹಿಡಿದು ಕೊಂಡಿದ್ದ ಬಂಗಾರಪ್ಪ ಅವರು ಅಧಿಕಾರಕ್ಕೆ ಬೀಳದೆ ರಾಜೀನಾಮೆಯನ್ನು ನೀಡುತ್ತಾರೆ.ನಂತರ ಕರ್ನಾಟಕ ಕಾಂಗ್ರೆಸ್ ಪಕ್ಷ (kcp). ಸ್ಥಾಪನೆ ಮಾಡುವ ಬಂಗಾರಪ್ಪ ಆಮೂಲಕ ಕಾಂಗ್ರೆಸ್ಗೆ ದೊಡ್ಡ ಎದುರಾಳಿಯಾಗಿ ಪರಿಣಮಿಸುತ್ತಾರೆ.
ಹೊಸ ಪಕ್ಷಗಳನ್ನು ಕಟ್ಟುವುದು ಅದರ ಮೂಲಕ ರಾಜಕೀಯ ಚದುರಂಗದಾಟದಲ್ಲಿ ತಾವು ವಿರಾಜಮಾನರಾಗಿ ಆಡಳಿತ ನಡೆಸುವುದು ಬಂಗಾರಪ್ಪನವರಿಗೆ ಕರಗತವಾಗಿತ್ತು.ಹೊಸ ಪಕ್ಷ ಸ್ಥಾಪನೆ ಮುಖಾಂತರ ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಹತ್ತು ಶಾಸಕ ಸ್ಥಾನಗಳನ್ನು ಗೆಲ್ಲುವ ಮುಖಾಂತರ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾಗುತ್ತಾರೆ ಈ ಚುನಾವಣೆಯಲ್ಲಿ ಜನತಾ ದಳ ಅಧಿಕಾರ ಗದ್ದಿಗೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಹುಟ್ಟುಹಾಕಿದ್ದ ಪಕ್ಷದ ಶಾಸಕರನ್ನು ಆಪರೇಷನ್ ಮುಖಾಂತರ ಸೆಳೆಯುತ್ತಾರೆ.

ರಾಜಕೀಯದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಬಂಗಾರಪ್ಪನವರಿಗೆ ಇದನ್ನು ಸಹಿಸಲಾಗದೆ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನಲ್ಲಿ ವಿಲೀನ ಮಾಡುವ ಮುಖಾಂತರ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮುವಂತೆ ಮಾಡುತ್ತಾರೆ.ತದನಂತರವೂ ಕೂಡ ಬಂಗಾರಪ್ಪನವರಿಗೆ ಕಾಂಗ್ರೆಸ್ ನನ್ನೊಂದಿಗೆ ಅಸಮಾಧಾನ ಇದ್ದೇ ಇರುತ್ತದೆ ನಂತರದಲ್ಲಿ ಕರ್ನಾಟಕ ವಿಕಾಸ ಪಕ್ಷ ಕಟ್ಟುತ್ತಾರೆ ಮಧ್ಯಂತರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಪ್ರತಿನಿಧಿಸುವ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ ಎದುರು ಪರಾಭವಗೊಂಡಿದ್ದಾರೆ ರಾಜಕೀಯದಲ್ಲಿ ಸೋಲನ್ನು ಕಾಣದ ಬಂಗಾರಪ್ಪ ಕಾಣಬೇಕಾಗುತ್ತದೆ
ಐದು ಬಾರಿ ಬಂಗಾರಪ್ಪನವರಿಗೆ ಎದುರಾಳಿಯಾಗಿದ್ದವರು ಬಂಗಾರಪ್ಪನವರ ಚುನಾವಣೆ ಪಟುಗಳನ್ನು ಹತ್ತಿರದಿಂದ ಕಂಡ ವ್ಯಕ್ತಿಗಳಲ್ಲಿ ಅವರೂ ಕೂಡ ಒಬ್ಬರು.ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಎಸ್ಸೆಂ ಕೃಷ್ಣ ಅವರು ಬಂಗಾರಪ್ಪನವರನ್ನು ಕಾಂಗ್ರೆಸ್ಸಿಗೆ ಯಲ್ಲಿ ಕರೆದು ಕರೆದು ತಂದು ಮತ್ತೆ ಲೋಕಸಭೆಗೆ ಆಯ್ಕೆಯಾಗುವಂತೆ ಮಾಡುತ್ತಾರೆ ಭಿನ್ನಾಭಿಪ್ರಾಯ ಒಂದು ಬಂಗಾರಪ್ಪ ಅನಿರೀಕ್ಷಿತ ಬೆಳವಣಿಗೆ ಎಂಬಂತೆ ಬಿಜೆಪಿ ಸೇರುತ್ತಾರೆ ಅಲ್ಲಿಯವರೆಗೆ ಬಂಗಾರಪ್ಪನವರ ನಿರ್ಧಾರಗಳ ಬಗ್ಗೆ ಚಕಾರವೆತ್ತದ ಮತದಾರರು ಸ್ವಲ್ಪಮಟ್ಟಿಗೆ ವಿಚಲಿತನಾಗುತ್ತಾನೆ.
ರಾಜ್ಯದಲ್ಲಿ ಬಿಜೆಪಿ ತನ್ನ ಹೆಬ್ಬಾಗಿಲನ್ನು ತೆರೆಯಲು ಬಂಗಾರಪ್ಪ ಎಂಬ ವ್ಯಕ್ತಿ ಬೇಕಾಗಿತ್ತು ಬಿಜೆಪಿ ಪಾಲಿಗೆ ಅದೃಷ್ಟದ ಬಾಗಿಲು ತೆರೆದು ಬಿಡುತ್ತದೆ ಅಲ್ಲಿಯವರೆಗೆ ಜಿಲ್ಲೆಯಲ್ಲಿ ರಾಜ್ಯದಲ್ಲಿ ಕಾಣಲು ಪರಿತಪಿಸುತ್ತಿದ್ದ ಬಿಜೆಪಿ ಈಶ್ವರಪ್ಪ ಮತ್ತು ಯಡಿಯೂರಪ್ಪನವರಿಗೆ ಶಕ್ತಿ ತುಂಬುವ ಮುಖಾಂತರ ಬಂಗಾರಪ್ಪನವರ ಸಂಘಟನಾ ಶಕ್ತಿ ಅವರ ಪ್ರವೇಶದಿಂದ 2004ರಲ್ಲಿ ಚುನಾವಣೆಯಲ್ಲಿ 79 ಶಾಸಕ ಸ್ಥಾನಗಳನ್ನು 16 ಸಂಸದ ಸ್ಥಾನಗಳನ್ನು ಗಳಿಸಿತ್ತು.

ಶಿವಮೊಗ್ಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಖಾಂತರ ಬಿಜೆಪಿಯಿಂದಲೂ ದೂರವುಳಿಯಲು ಪ್ರಾರಂಭಿಸುತ್ತಾರೆ. ಜಿಲ್ಲೆಯಲ್ಲಿ ತಮ್ಮ ತಮ್ಮ ರಾಜಕಾರಣ ಶಕ್ತಿಯಿಂದ ಜಿಲ್ಲೆಯನ್ನು ಕೈ ಬೆರಳಿನಲ್ಲಿ ಆಡಳಿತವನ್ನು ನಡೆಸುತ್ತಿದ್ದ ಬಂಗಾರಪ್ಪನವರಿಗೆ ತಮ್ಮ ರಾಜಕೀಯ ಪಲ್ಲಟಗಳು ಇಂದ ಸ್ವಲ್ಪಮಟ್ಟಿಗೆ ಹಿನ್ನಡೆಯಾಯಿತು.
ಕರ್ನಾಟಕದ ಸಮಕಾಲೀನ ರಾಜಕೀಯ ರಂಗಭೂಮಿಯಲ್ಲಿ ದಶಾವತಾರಗಳನ್ನು ಎತ್ತಿ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕನಾಗಿ ಸಮಾಜವಾದಿ ನಾಯಕನಾಗಿ ಚಳುವಳಿ ಮತ್ತು ದೀನದಲಿತರ ಸಮುದಾಯಗಳ ಪರವಾಗಿ ಧ್ವನಿಯನ್ನು ನಿರಂತರವಾಗಿ ರಾಜ್ಯದಲ್ಲಿ ಮೇಲೇಳುವಂತೆ ಮಾಡಿಕೊಂಡಂತಹ ಸಮಾಜವಾದಿ ಚಿಂತಕ ಬಂಗಾರಪ್ಪನವರ ರಾಜಕೀಯ ಕೆಲವೊಮ್ಮೆ ಕಂಡರೂ ಕೂಡ ಶಾಶ್ವತವಾಗಿ ಜನಮಾನಸದಲ್ಲಿರಲು ಅವರಲ್ಲಿದ್ದ ಸಿದ್ಧಾಂತದ ಕಾರಣವಾಗಿತ್ತು.

ಬಂಗಾರಪ್ಪನವರ ಶಕ್ತಿ ಎಷ್ಟರಮಟ್ಟಿಗೆ ಇತ್ತು ಎಂದರೆ ರಾಜ್ಯದ ವಿಧಾನಸಭಾ ಪಡಸಾಲೆಯಲ್ಲಿ ಕೆಲವು ಮಾತುಗಳು ಕೇಳಿಬರುತ್ತಿದ್ದವು ಬಂಗಾರಪ್ಪನವರು ತೊರೆಯುವ ಪಕ್ಷ ಸೋಲುವುದು ಸರ್ವಪಕ್ಷ ಗೆಲ್ಲುವುದು ಎಂಬ ಗಾದೆಮಾತು ನಾನ್ನುಡಿಗಳು ಸಹಜವಾಗಿ ಕೇಳಿಬರುತ್ತಿದ್ದವು. ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳದೆ ತಮ್ಮ ಛಾಪುವಿನಿಂದ ಹೆಸರಿನ ಮುಖಾಂತರ ಗೆದ್ದು ಬರುವ ಏಕೈಕ ವರ್ಗದ ರಾಜಕಾರಣಿ ಎಂದರೆ ಅದು ಬಂಗಾರಪ್ಪ ಎಂಬ ಮಾತು ಜನಜನಿತವಾಗಿತ್ತು.
ಬಂಗಾರಪ್ಪ ಕೇವಲ ರಾಜಕಾರಣಿ ಆಗಿರಲಿ ಕಲೆ-ಸಾಹಿತ್ಯ ಕಾವ್ಯ ಇತಿಹಾಸ ಭಾಷಾಶಾಸ್ತ್ರದಲ್ಲಿ ಸೃಜನಾತ್ಮಕ ಅಭಿವೃದ್ಧಿ ಹೊಂದಿದ್ದರು. ಶೇಕ್ಸ್ಪಿಯರ್, ಥಾಮಸ್ ಗ್ರೇ . ಅಂಥವರ ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿದ್ದರು ಕುಮಾರವ್ಯಾಸ, ಬೇಂದ್ರೆ, ಕುವೆಂಪು, ಡಿವಿಜಿ ಮಂಕುತಿಮ್ಮನ ಕಗ್ಗ ವಚನಗಳು ಸಾಹಿತ್ಯ ಬಂಗಾರಪ್ಪನವರ ನಾಲಿಗೆಯಲ್ಲಿ ನಿರರ್ಗಳವಾಗಿ ಹರಿದಾಡುತ್ತಿದ್ದವು. ಹಿಂದೂಸ್ತಾನಿ ಸಂಗೀತ.
ಜಾನಪದ ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಬಂಗಾರಪ್ಪನವರು ಡೊಳ್ಳು ಬಾರಿಸುವ ಮುಖಾಂತರ ಅಭ್ಯಾಸವನ್ನು ಕೂಡ ಕೊನೆವರೆಗೂ ಮುಂದುವರಿಸಿದರು. ಒಬ್ಬ ಶಟಲ್ ಬ್ಯಾಡ್ಮಿಟನ್ ಪ್ರತಿನಿತ್ಯ ಅವರಲ್ಲಿ ಕಾಣುತ್ತಿದ್ದ. ಬಂಗಾರಪ್ಪನವರ ಭಾಷಣ ಅಂತರಾಷ್ಟ್ರೀಯ ವಿಚಾರದಿಂದ ಪ್ರಾರಂಭವಾಗಿ ಜಿಲ್ಲೆ ಹೋಬಳಿ ಅಲ್ಲಿಯವರೆಗೆ ಬಂದು ನಿಲ್ಲುತ್ತಿದ್ದು ಜನಗಳನ್ನು ಮಗ್ನ ಮಾಡುತ್ತಿತ್ತು ವ್ಯಕ್ತಿಯ ವೇಷ-ಭೂಷಣಗಳು
ಬಣ್ಣ ಬಣ್ಣದ ಬಟ್ಟೆಗಳು ಕೂಲಿಂಗ್ ಗ್ಲಾಸ್ ಬಂಗಾರಪ್ಪನವರನ್ನು ಕೊನೆವರೆಗೂ ಚಿರಯುವಕನಂತೆ ಕಾಣುವಂತೆ ಮಾಡುತ್ತಿತ್ತು. ಏನೇ ಆಗಲಿ ಪಕ್ಷ ಬದಲಾವಣೆಗಳು ಮತ್ತು ರಾಜಕೀಯ ಏರಿಳಿತಗಳ ನಡುವೆ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕನಾಗಿ ಬೆಳೆದು ಬಂದಂತಹ ಬಂಗಾರಪ್ಪನವರು ಇಂದಿಗೂ ಜನಮಾನಸದಲ್ಲಿ ಹೃದಯದಲ್ಲಿ ವಿರಾಜಮಾನರಾಗಿ ಇರುವುದು ಸತ್ಯ.








