LatestMysore

ಶ್ರೀ ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘದ 22ನೇ  ವಾರ್ಷಿಕೋತ್ಸವ.. ಸಮ್ಮಿಲನ

ಮೈಸೂರು: ನಗರದ ಹೂಟಗಳ್ಳಿ ಬಡಾವಣೆಯ ಶ್ರೀ. ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘದ 22ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕೊಡವ ಬಾಂಧವರ ಸಮ್ಮಿಲನ ಕಾರ್ಯಕ್ರಮವನ್ನು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು.

ಮೈಸೂರಿನ ವಿಜಯನಗರ 1ನೇ ಹಂತದ ಜನರಲ್ ತಿಮ್ಮಯ್ಯ ರಸ್ತೆಯಲ್ಲಿರುವ ಕೊಡವ ಸಮಾಜದ  ಗುರುಮನೆ ಸಭಾಂಗಣದಲ್ಲಿ  ತಲಕಾವೇರಿ ಸಂಘದ ಅಧ್ಯಕ್ಷ ಮುಕ್ಕಾಟೀರ.ಎನ್. ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಕೊಡಗಿನ ಕೊಡವ ಸಂಸ್ಕೃತಿಯ ಶೈಲಿಯಲ್ಲಿ ದುಡಿಕೊಟ್ಟು ಜಾನಪದ ಹಾಡಿನೊಂದಿಗೆ ಸಮ್ಮಿಲನ ವಾರ್ಷಿಕೋತ್ಸವಕ್ಕೆ ವಿದ್ಯುತ್ ಚಾಲನೆ ನೀಡಲಾಯಿತು.

ಇದೇ ಸಂದರ್ಭ ಮಾತನಾಡಿದ ಮುಖ್ಯ ಅತಿಥಿ ಸುರೇಶ್ ನಂಜಪ್ಪ” ಕೊಡವರು ಶೂರರು ಹಾಗೂ ಸ್ನೇಹಜೀವಿಗಳು, ಕೊಡಗಿನಲ್ಲಿ ಪರಿಸರ ರಕ್ಷಣೆಯೊಂದಿಗೆ ಜೀವನ ನಡೆಸುವ ಇವರು ಮೈಸೂರು ಬೆಂಗಳೂರಿನಂತ ನಗರಗಳಲ್ಲಿ ತಮ್ಮದೇ ಆದ ಸಾಂಸ್ಕೃತಿಕ ಸಂಘಗಳನ್ನ ಬೆಳೆಸಿಕೊಂಡು ಸರ್ವ ಜನಾಂಗದ ಜೊತೆ ಸಾಮರಸ್ಯ ಬಾಳ್ವೆ ನಡೆಸಿ ಅಭಿವೃದ್ಧಿ ಹೊಂದುತ್ತಿದ್ದಾರೆ.

ಭವಿಷ್ಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕು, ಏನಾದರೂ ಕೊಡಗಿನ ನೆಲವನ್ನು ,ಸಂಸ್ಕೃತಿಯನ್ನು ಮರೆಯಬಾರದು ಎಂದರು. ವೇದಿಕೆ ಕಾರ್ಯಕ್ರಮದಲ್ಲಿ ಪ್ರೇಮಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ದೇಶಪ್ರೇಮಿ ಯೋಧರು,  ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಸಂಘಟಕರು ಹಾಗೂ ಶೈಕ್ಷಣಿಕವಾಗಿ ಉನ್ನತ ಸಾಧನೆ ತೋರಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೊಡಗಿನ ಜಾನಪದ ಶೈಲಿಯ ಉಮ್ಮತಾಟ, ಕೋಲಾಟ ಪರಯಕಳಿ, ಜಾನಪದ ನೃತ್ಯಗಳ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಲೆಮಾಡ ನಂಜಪ್ಪ, ಗೌರವ ಕಾರ್ಯದರ್ಶಿ ಮನೆಯಪಂಡ ತಿಮ್ಮಯ್ಯ, ಸಹಕಾರ್ಯದರ್ಶಿ ಚೋಯಮಾಡಂಡ ಗಂಗಮ್ಮ, ಖಜಾಂಚಿ ಮಚ್ಚಾಂಡ ಕುಸುಮ, ಸಲಹೆಗಾರ ಬೊಟ್ಟೊಳಂಡ ಪೊನ್ನಣ್ಣ, ಮೈಸೂರು ಕೊಡವ ಸಮಾಜದ ನಿರ್ದೇಶಕರಾದ ಆಳಮಂಡ ಹರೀಶ್, ಪಟ್ಟಮಾಡ ದೇವಕಿ ಸೋಮಯ್ಯ, ತಲಕಾವೇರಿ ಸಂಘದ ಪದಾಧಿಕಾರಿಗಳಾದ ಸೋಮಯ್ಯ, ರಮೇಶ್ ,

ದೇವಯ್ಯ, ಭೀಮಯ್ಯ, ನಾಣಯ್ಯ ,ಮಿಥುನ್, ಲೋಕೇಶ್, ಕೆ. ನಾಣಯ್ಯ , ಯಶೋಧ ಪೂಣಚ್ಚ, ಕರುಂ ಬಯ್ಯ,  ವರುಣ್ , ಗಗನ್, ಉತ್ತಪ್ಪ, ಮಾದಪ್ಪ,  ಶಶಿಕಲ, ಬೀನಾ ಸೇರಿದಂತೆ ಮೈಸೂರಿನ ಕೊಡೋ ಸಮಾಜದ ಪದಾಧಿಕಾರಿಗಳು,  ವಿವಿಧ ಬಡಾವಣೆಗಳ ಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಸಹಕಾರ ಸಂಘಗಳ ಪ್ರಮುಖರು ಭಾಗವಹಿಸಿದ್ದರು.

admin
the authoradmin

ನಿಮ್ಮದೊಂದು ಉತ್ತರ