State

ನದಿ ಪ್ರವಾಸೋದ್ಯಮ ಉತ್ತೇಜನದ  ರೂ. 1,500 ಕೋಟಿ ಯೋಜನೆಗಳಿಗೆ ಐಡಬ್ಲ್ಯುಡಿಸಿ 3.0 ಅನುಮೋದನೆ

ಬೆಂಗಳೂರು: ಭಾರತದ ಒಳನಾಡಿನ ಜಲಸಾರಿಗೆ ಜಾಲವನ್ನು ವಿಸ್ತರಿಸಲು, ಪ್ರಮುಖ ಮೂಲಸೌಕರ್ಯ ಹೂಡಿಕೆಗಳನ್ನು ಅನುಮೋದಿಸಲು ಮತ್ತು ದೇಶದ ನದಿಗಳ ಸಂಪೂರ್ಣ ಆರ್ಥಿಕ ಸಾಮರ್ಥ್ಯವನ್ನು ಅನಾವರಣ ಮಾಡುವ ಉದ್ದೇಶದಿಂದ ಕೇಂದ್ರ- ರಾಜ್ಯ ಸಮನ್ವಯವನ್ನು ಬಲಪಡಿಸಲು ಸಮಗ್ರ ಮಾರ್ಗಸೂಚಿ ರೂಪಿಸುವುದರೊಂದಿಗೆ ಒಳನಾಡಿನ ಜಲಮಾರ್ಗ ಅಭಿವೃದ್ಧಿ ಮಂಡಳಿಯ ಐಡಬ್ಲ್ಯುಡಿಸಿ (3.0) ಮೂರನೇ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸುಸ್ಥಿರ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ನ ಪ್ರಮುಖ ಆಧಾರಸ್ತಂಭವಾಗಿ ಒಳನಾಡು ಜಲಸಾರಿಗೆಯನ್ನು ಬಲಪಡಿಸುವ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಹಸಿರು ಚಲನಶೀಲತೆಯನ್ನು ವೇಗಗೊಳಿಸುವ, ಬಹುಮಾದರಿ ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವ ಮತ್ತು ನದಿ ಆಧಾರಿತ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಐಡಬ್ಲ್ಯೂಡಿಸಿ 3.0 ರಲ್ಲಿ ರೂ. 1,500 ಕೋಟಿಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಪರಿಗಣಿಸಲಾಯಿತು. ದೇಶಾದ್ಯಂತ ಕ್ರೂಸ್ ಪ್ರವಾಸೋದ್ಯಮ ಸರ್ಕ್ಯೂಟ್ ಗಳ  ವಿಸ್ತರಣೆಯನ್ನು ಬೆಂಬಲಿಸುವ ಕೇರಳ, ಗುಜರಾತ್, ಕರ್ನಾಟಕ, ಒಡಿಶಾ ಮತ್ತು ತೆಲಂಗಾಣದಲ್ಲಿ ನದಿ ಕ್ರೂಸ್ ಜೆಟ್ಟಿಗಳು ಸೇರಿದಂತೆ ರೂ. 150 ಕೋಟಿಗಿಂತ ಹೆಚ್ಚಿನ ಯೋಜನೆಗಳಿಗೆ ಅಡಿಪಾಯ ಹಾಕಲಾಯಿತು.

ನೌಕಾಯಾನ, ಸುರಕ್ಷತೆ ಮತ್ತು ವರ್ಷಪೂರ್ತಿ ಕಾರ್ಯಾಚರಣೆಗಳನ್ನು ಹೆಚ್ಚಿಸಲು ರೂ. 465 ಕೋಟಿಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಯನ್ನು ಸಹ ಘೋಷಿಸಲಾಯಿತು. ರೂ. 900 ಕೋಟಿಗಿಂತ ಹೆಚ್ಚಿನ ಮೌಲ್ಯದ ಪ್ರಮುಖ ಹೊಸ ಯೋಜನೆಗಳ ಬಗ್ಗೆ ಮಂಡಳಿಗೆ ಮಾಹಿತಿ ನೀಡಲಾಯಿತು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ರೂಪಾಂತರದ ಕಾರ್ಯತಂತ್ರದ ಆಧಾರಸ್ತಂಭವಾಗಿ ಒಳನಾಡಿನ ಜಲಮಾರ್ಗಗಳು ಹೊರಹೊಮ್ಮಿವೆ ಎಂದರಲ್ಲದೆ, ನಮ್ಮ ಕ್ರಿಯಾಶೀಲ ಪ್ರಧಾನಿ ನರೇಂದ್ರ ಮೋದಿ ಅವರು ಒಳನಾಡಿನ ಜಲಮಾರ್ಗಗಳಿಗೆ ವಿಶೇಷ ಉತ್ತೇಜನ ನೀಡಿದ್ದಾರೆ, ಇದು ರಸ್ತೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವ ಜತೆಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಿದೆ ಮತ್ತು ವ್ಯಾಪಾರ ಮಾಡುವ ಸುಲಭತೆಯನ್ನು ಬಲಪಡಿಸಿದೆ.

ಇಂದು, ಮೋದಿ ಜೀ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಒಳನಾಡಿನ ಜಲಮಾರ್ಗಗಳು ಭಾರತದ ಬಹುಮಾದರಿ ಲಾಜಿಸ್ಟಿಕ್ಸ್ ಚೌಕಟ್ಟಿನ ಕಾರ್ಯತಂತ್ರದ ಆಧಾರಸ್ತಂಭಗಳಾಗಿವೆ. ಈ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ನದಿಗಳನ್ನು ಇನ್ನು ಮುಂದೆ ನೈಸರ್ಗಿಕ ಸಂಪನ್ಮೂಲಗಳಾಗಿ ನೋಡಲಾಗುವುದಿಲ್ಲ, ಬದಲಾಗಿ ಬೆಳವಣಿಗೆ, ಸುಸ್ಥಿರತೆ ಮತ್ತು ಸಂಪರ್ಕವನ್ನು ಚಾಲನೆ ಮಾಡುವ ಆರ್ಥಿಕ ಜೀವನಾಡಿಗಳಾಗಿ ನೋಡಲಾಗುತ್ತದೆ” ಎಂದು ಅವರು ಹೇಳಿದರು.

ಒಳನಾಡಿನ ಜಲಮಾರ್ಗಗಳು ಅತ್ಯಂತ ಇಂಧನ ಕ್ಷಮತೆಯ, ಮಿತ ವೆಚ್ಚದ ಮತ್ತು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿ ಉಳಿದಿವೆ ಎಂದು ಸಭೆ ಪುನರುಚ್ಚರಿಸಿತು, ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ರಸ್ತೆಗಳು ಮತ್ತು ರೈಲ್ವೆಗಳ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರ್ಕಾರವು ಆಧುನಿಕ ಕ್ರೂಸ್ ಟರ್ಮಿನಲ್ಗೆಳು, ಸುಧಾರಿತ ಸಂಚರಣೆ ವ್ಯವಸ್ಥೆಗಳು ಮತ್ತು ಮೀಸಲಾದ ಕ್ರೂಸ್ ಸರ್ಕ್ಯೂಟ್ ಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ನದಿ ಕ್ರೂಸ್ ಪ್ರವಾಸೋದ್ಯಮವನ್ನು ಕಡಲ ಆರ್ಥಿಕತೆಯ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದೆಂದು ಗುರುತಿಸಲಾಗಿದೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want