ಮೈಸೂರು: ಮೈಸೂರು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರಶೇಖರ್ ಅವರನ್ನು ಮೈಸೂರು ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಹತ್ತಿರದ ಶಿವ ಸನ್ನಿಧಿ ಗೆಳಯರ ಬಳಗದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವದ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ಬಿ ಎಂ ಪರಮೇಶ್ ಮಾಸ್ಟರ್, ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ನಿಕಟ ಪೂರ್ವ ಅಧ್ಯಕ್ಷರಾದ ಕಾನ್ಯ ಶಿವಮೂರ್ತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ ಆರ್ ಶಿವಕುಮಾರ್, ನಿರ್ದೇಶಕಿ ಶ್ರೀಮತಿ ಮೀನಾಕ್ಷಿ, ಮೈಸೂರು ಜಿಲ್ಲಾ ಜಗನ್ಮಾತೆ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶರ್ಮಿಳಾ ಮೋಹನ್ ದೇವನೂರು ಶಿಲ್ಪಾ ನಂದೀಶ್, ಜಗದಾಂಬ ಆನಂದ ಪ್ರಮೀಳಾ.

ಚಾಮರಾಜನಗರ ಡಯಟ್ ಉಪನ್ಯಾಸಕಿ ಮಂಜುಳ, ಉಪಾಧ್ಯಕ್ಷರಾದ ಉಮ್ಮತ್ತೂರು ಸುರೇಶ್ ಪ್ರಭು ಮಲ್ಲನಗುಳಿ ಡಾ ಕೆ ವಿ ಯೋಗೀಶ್, ಅಗ್ನಿ ಶಾಮಕ ಪರಶಿವ ಮೂರ್ತಿ, ಕಾರ್ಯದರ್ಶಿ ಮಹದೇವ ಪ್ರಸಾದ್, ಖಜಾಂಚಿ ಬಾಗಳಿ ಮಹೇಶ್, ಬಾನಹಳ್ಳಿ ಸಂತೋಷ್, ಸಾರಿಗೆ ಸಂಸ್ಥೆಯ ನೌಕರರಾದ ನಾಗ ಪ್ರಸನ್ನ ರಾಜಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು
ಮೈಸೂರು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಗೆ ಆತ್ಮೀಯ ಅಭಿನಂದನೆ ಸಲ್ಲಿಕೆ








