CrimeLatest

ಹದಮಾಡಿ ಶೇಖರಿಸಿಟ್ಟಿದ್ದ ತಂಬಾಕುಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ನಾಶ… ಸಂಕಷ್ಟಕ್ಕೀಡಾದ ರೈತ!

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಂಬಾಕು ಹದಮಾಡಿ ಶೇಖರಣೆ ಮಾಡಿದ್ದ ತಂಬಾಕು ಸೊಪ್ಪಿಗೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟು ಕರಕಲಾಗಿರುವ ಘಟನೆ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಸಕಾಲದಲ್ಲಿ ಬೆಂಕಿಯನ್ನು ನಂದಿಸಿದ್ದರಿಂದ ಅದೃಷ್ಟವಶಾತ್ ಇನ್ನಷ್ಟು ಅನಾಹುತ ನಡೆಯುವುದು ತಪ್ಪಿದೆ.

ಗ್ರಾಮದ ನಟರಾಜ್ ಎಂಬುವರಿಗೆ ಸೇರಿದ ತಂಬಾಕು ಸೊಪ್ಪನ್ನು ಮನೆಯ ಕೊಟ್ಟಿಗೆಯಲ್ಲಿ ಒಂದೆಡೆ ಹದಗೊಳಿಸಿ ಶೇಖರಣೆ ಮಾಡಿ ಇಟ್ಟಿದ್ದರು  ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿ ಸುಮಾರು 5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ತಂಬಾಕು ಸೊಟ್ಟು ಕರಕಲಾಗಿದೆ. ಜೊತೆಗೆ ಮನೆ ಕಟ್ಟಲು ಇಟ್ಟಿದ್ದ  ಹಲವು ಕಿಟಕಿ ಬಾಗಿಲುಗಳ ಸಾಮಗ್ರಿಗಳು ಕೂಡ ಸುಟ್ಟುಹೋಗಿವೆ

ಇನ್ನು ಪಕ್ಕದಲ್ಲಿ ಇದ್ದ ವಾಸದ ಮನೆ ಹಾಗೂ ಮೇವುನ ಒಣಹುಲ್ಲು ಬೆಂಕಿ ತಗಲಿದರೆ ಭಾರಿ ಅನಾಹುತ ಸಂಭವಿಸುತಿತ್ತು. ಆದರೆ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ. ಇನ್ನು  ಬೆಂಕಿಗೆ ಇಡೀ ಕೊಟ್ಟಿಗೆಯ ಗೋಡೆಗಳು ಬಿರುಕು ಬಿಟ್ಟಿವೆ  ತಂಬಾಕು ಹದಗೊಳಿಸುವ ಬ್ಯಾರೆನ್ ಕೂಡ ಸುಟ್ಟು ಹೋಗಿದೆ.

ಈ ಘಟನೆಯಿಂದ ಲಕ್ಷಾಂತರ ರೂ ಖರ್ಚು ಮಾಡಿ ತಂಬಾಕು ಬೆಳೆದಿದ್ದ ರೈತ ನಟರಾಜ್ ಅವರು ಈಗ ಸಂಕಷ್ಟಕ್ಕೀಡಾಗಿದ್ದು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಪ್ರತಿ ವರ್ಷವೂ ತಂಬಾಕು ಬೆಳೆಗಾರರನ್ನು ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು, ಬೆಳೆಗಾರರು ಈ ವಿಚಾರದಲ್ಲಿ ಎಚ್ಚರ ವಹಿಸುವುದು ಒಳ್ಳೆಯದು.

admin
the authoradmin

Leave a Reply

Translate to any language you want