ಪುರುಷ ಪಾತ್ರಕ್ಕೆ ಜೀವ ತುಂಬುತ್ತಿದ್ದ ಹಿರಿಯನಟಿ ಎಸ್.ಕೆ.ಪದ್ಮಾದೇವಿ… ಕಲೆಗೆ ಸಮರ್ಪಿಸಿಕೊಂಡ ನಟಿ

ಚಂದವನದ ಬೆಳ್ಳಿತೆರೆಯಲ್ಲಿ ಮಿಂಚಿ ಮರೆಯಾದ ಹಿರಿಯ ನಟಿಯರನ್ನು ಇದೀಗ ನೆನಪಿಸಿಕೊಳ್ಳುವ ಕಾಲಬಂದಿದೆ.. ಅಂದಿನ ಅವರನಟನೆ ಇಂದು ನೋಡುವಾಗ ಅಚ್ಚರಿ ಮೂಡಿಸುತ್ತದೆ. ಮನೋಜ್ಞ ಅಭಿನಯಗಳು ಖುಷಿ ಕೊಡುತ್ತವೆ.. ಇವತ್ತು ಸಿನಿಮಾರಂಗದಲ್ಲಿ ಕೆಲಸ ಮಾಡಲು ಮುಂದೆ ಬರುವ ನಟಿಯರಿಗೆ ಕೊರತೆ ಇಲ್ಲ… ಆದರೆ ಹಲವು ದಶಕಗಳ ಹಿಂದೆ ಹೀಗಿರಲಿಲ್ಲ… ಆದರೂ ಕಲೆಯನ್ನು ಉಸಿರಾಗಿಸಿ ಕೊಂಡು ನಟಿಯಾಗಿ ಬೆಳೆದು ಸಿನಿಮಾರಂಗದಲ್ಲಿ ಅಚ್ಚಳಿಯದ ಹೆಜ್ಜೆಗಳನ್ನು ಬಿಟ್ಟುಹೋಗಿದ್ದಾರೆ.. ಅಂತಹ ಹಿರಿಯ ನಟಿಯರಲ್ಲಿ ಎಸ್.ಕೆ.ಪದ್ಮಾದೇವಿ ಒಬ್ಬರಾಗಿದ್ದಾರೆ.. ಇವರ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಬರೆದಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…

ಪದ್ಮಾದೇವಿ 15ನೇ ಜೂನ್ 1924ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ನಾಟಕ ಮತ್ತು ಸಿನಿಮಾರಂಗದಲ್ಲಿ ಸ್ತ್ರೀಪಾತ್ರಗಳನ್ನು ಮಹಿಳೆಯರು ಅಭಿನಯಿಸಲು ಅಭಾವವಿದ್ದ ಬರಗಾಲದಲ್ಲಿ ದೊರಕಿದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ತಮ್ಮ ಮನೆಯಲ್ಲಿ ತಾಯಿ ತಂದೆ ಬಂಧುಬಳಗ ಎಲ್ಲರ ತೀವ್ರ ವಿರೋಧ ಇದ್ದರೂ ಅವರೆಲ್ಲರ ಇಚ್ಚೆ ಸಲಹೆಗಳನ್ನು ತಿರಸ್ಕರಿಸಿ 1930ರಲ್ಲಿ ರಂಗಭೂಮಿ ಮತ್ತು ಮೂಕಿಚಿತ್ರಗಳಲ್ಲಿ ನಟಿಸುವ ಮೂಲಕ ನಾಟಕ- ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಅಭಿನಯ ಕಲೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಬಹಳ ಧೈರ್ಯವಂತೆ ಎನಿಸಿಕೊಂಡರು!

ಹಾಲಲ್ಲು ಬಿದ್ದು ಶಾಶ್ವತ ಹಲ್ಲು ಹುಟ್ಟದಿರದ ಕೇವಲ ಆರು ವಯಸ್ಸಿನ ಬಾಲಕಿ ಇದ್ದಾಗಲೇ ರಂಗಪ್ರವೇಶ ಮಾಡಿ ಅಂದಿನ ಅತಿರಥಮಹಾರಥ ಕಲಾವಿದರನ್ನೂ ನಾಟಕ ಕಂಪನಿ ಮಾಲೀಕರನ್ನೂ ಸಿನಿಮಾ ಉದ್ಯಮಿಗಳನ್ನೂ ದಿಗ್ಭ್ರಾಂತರನ್ನಾಗಿಸಿದ ಚೂಟಿ ಬಾಲನಟಿ! ಕಾಲಕ್ರಮೇಣ ಎಸ್.ಕೆ.ಪದ್ಮಾದೇವಿಯವರು ಪುರುಷ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ ಮೆಚ್ಚುಗೆ ಪಡೆದರಲ್ಲದೆ ಆ ಕಾಲದ ಮಹಾರಾಜ ಬ್ರಿಟಿಷ್ ಅಧಿಕಾರಿ ಕಲೆಕ್ಟರ್ ಸಾಹುಕಾರ್ ಜಾಗೀರ್ದಾರ್ ಜಮೀನ್ದಾರ್ ಪಟೇಲ್ ಶ್ಯಾನುಭೋಗ್ ಮೊದಲ್ಗೊಂಡು ಸಾಮಾನ್ಯ ಪ್ರೇಕ್ಷಕರವರೆಗೆ ಪ್ರತಿಯೊಬ್ಬರಿಂದ ಶಹಭಾಶ್‍ಗಿರಿ ಪಡೆದಂಥ ಹುಟ್ಟು ಕಲಾವಿದೆ.
20ವರ್ಷದೊಳಗೆ 18ವಿವಿಧ ಕಥಾವಸ್ತುವುಳ್ಳ 500ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರವಹಿಸಿ ರಾಜ್ಯದಾದ್ಯಂತ ದಾಖಲೆ ನಿರ್ಮಿಸಿದರು. ಇವರಲ್ಲಿದ್ದ ಉತ್ತಮ ಅಭಿನಯ, ಗಾಯನ, ನೃತ್ಯಕಲೆ ಮುಂತಾದಪ್ರತಿಭೆಗಳನ್ನ ಗಮನಿಸಿದ ಚಲನಚಿತ್ರ ನಿರ್ಮಾಪಕರು ನಿರ್ದೇಶಕರು ಆಶ್ಚರ್ಯಚಕಿತರಾಗಿ ಇವರಿಗೆ ಹತ್ತಾರು ಮೂಕಿ-ಟಾಕೀ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ನೀಡಿದರು.

1945ರ ಒಂದು ಶುಭದಿನ ಪದ್ಮಾದೇವಿರವರು ರಂಗಭೂಮಿ ಕಲಾವಿದ, ಗಾಯಕ ಹಾಗೂ ಸಂಗೀತ ವಿದ್ವಾನ್ ಪದ್ಮನಾಭರಾವ್ ರನ್ನು ವಿವಾಹವಾಗಿ ಮೂವರು ಮಕ್ಕಳ ಮಾತೆ ಆದರು. ಗೃಹಿಣಿಯಾದ ಮೇಲೂ ಸಹ 1961 ವರೆಗೆ ಹಲವಾರು ನಾಟಕ-ಸಿನಿಮಾದಲ್ಲಿ ಅಭಿನಯಿಸಿದರು. ನಂತರವೂ ಸುಮಾರು 20 ವರ್ಷಕಾಲ 1980 ರವರೆಗೆ ಆಕಾಶವಾಣಿ ಕಲಾವಿದೆಯಾಗಿ ಸಾರ್ಥಕ, ಸಮರ್ಪಕ ಸೇವೆ ಸಲ್ಲಿಸಿ ನೂತನ ದಾಖಲೆ ನಿರ್ಮಿಸಿದರು!
1940-60ರ ಕಾಲಘಟ್ಟದಲ್ಲಿ… ಇಪ್ಪತ್ತು ವರ್ಷ ಹಿಂದಿ-ಮರಾಠಿ ಚಿತ್ರರಂಗಕ್ಕೆ ಹೋಗಿ ಅಲ್ಲಿನ 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಮೇರುನಟರ ಜತೆ ನಟಿಸದೇ ಇದ್ದಿದ್ದರೆ ಅಥವ ಮುಂಬೈ-ಪುಣೆ ನಗರಗಳಲ್ಲಿ ಉಳಿದುಕೊಂಡು ಬಾಲಿವುಡ್ ನಲ್ಲಿ ಕ್ರಾಂತಿ ಮಾಡದೇ ಹೋಗಿದ್ದಿದ್ದರೆ. ಈ ಅಪ್ಪಟ ಕನ್ನಡ ಕಲಾವಿದೆ 100ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದರೇನೋ ಬಲ್ಲವರಾರು?! ಏಕೆಂದರೆ ಇವರ ಸಮಕಾಲೀನ ನಟಿಯರಲ್ಲಿ ಧೀರ್ಘ ಕಾಲ ಬದುಕಿದ್ದವರ ಪೈಕಿ ಇವರೇ ಅಗ್ರಸ್ಥಾನದಲ್ಲಿದ್ದರು.

ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಸಕಲಕಲಾವಲ್ಲಭೆ ಪದ್ಮಾದೇವಿಯವರ ಕಲಾಸೇವೆ ಗುರುತಿಸಿದ ಮಹಾರಾಜರು ರಾಜ್ಯಪಾಲರು ಅನೇಕ ಗಣ್ಯಾತಿಗಣ್ಯರು ಹಲವು ಬಿರುದು ಸನ್ಮಾನ ಬಹುಮಾನ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ಪ್ರತಿವರ್ಷ ಕನ್ನಡ ಚಲನಚಿತ್ರ ನಟನಟಿಯರ ಜೀವಮಾನ ಸಾಧನೆಗೆ ಶ್ರೇಷ್ಠ ಕಲಾವಿದರಿಗೆ ಕೊಡುವ ಪ್ರತಿಷ್ಠಿತ ಆರ್.ನಾಗೇಂದ್ರರಾವ್ ಸ್ಮರಣಾರ್ಥ RNR ಪ್ರಶಸ್ತಿಯನ್ನು 2016ರಲ್ಲಿ ಪಡೆದ ಈ ಮಹಾನಟಿ 95 ವರ್ಷದ ತುಂಬುಜೀವನ ಪೂರೈಸಿ 19.9.2019ರಂದು ಬೆಂಗಳೂರಿನಲ್ಲಿ ವಯೋಸಹಜ ನಿತ್ರಾಣದಿಂದ ಸ್ವರ್ಗಸ್ಥರಾದರು.

ಕನ್ನಡ ನಾಟಕ-ಸಿನಿಮಾ ರಂಗದ ಬಹುಮುಖ ಪ್ರತಿಭಾವಂತೆ, ಮೂಕಿ-ಟಾಕೀ ಯುಗದ ಪ್ರಮುಖ ಕಲಾವಿದೆ ಹಾಗೂ ಚಂದನವನದ ಮತ್ತೊಂದು ಚಿನ್ನದಕೊಂಡಿ ಕಳಚಿಬಿದ್ದು ಕನ್ನಡ-ತೆಲುಗು-ತಮಿಳು-ಮರಾಠಿ-ಹಿಂದಿ ಚಿತ್ರ ಲೋಕಕ್ಕೆ ತುಂಬಲಾರದ ನಷ್ಟವಾಯಿತಲ್ಲದೇ ಬೆಳ್ಳೆತೆರೆ-ಕಿರುತೆರೆ-ರಂಗಭೂಮಿ ಕಲಾವಿದರಿಗೆ ಭರಿಸಲಾರದ ದುಃಖವೂ ಫಲಿಸಿತು! ಎಸ್.ಕೆ. ಪದ್ಮಾದೇವಿಯಂಥ ಹಿರಿಯ ಅಭಿನೇತ್ರಿ, ನೃತ್ಯಪಟು, ಹಿನ್ನೆಲೆಗಾಯಕಿ, ನಿರ್ಮಾಪಕಿ, ನಿರ್ದೇಶಕಿ, ಇತ್ಯಾದಿಗಳ ಪ್ರತಿಭಾಪುತ್ಥಳಿ ಚಿರಸ್ಮರಣೀಯ, ಆಚಂದ್ರಾರ್ಕ ಅಜರಾಮರ…

ಎಸ್.ಕೆ.ಪದ್ಮಾದೇವಿ ನಟಿಸಿದ ಚಿತ್ರಗಳು ಹೀಗಿವೆ… ಭಕ್ತಧ್ರುವ/ 1933-34, ಸತಿಸುಲೋಚನ/ 1934, ಸದಾರಮೆ/ 1935, ಸಂಸಾರನೌಕಾ/ 1936, ಜೀವನ ನಾಟಕ/ 1942, ಗಂಗಾವತಾರಂ/ 1942 [ತಮಿಳು], ಶ್ರೀಕೃಷ್ಣಸುಧಾಮ/ 1944, ಮಹಾನಂದ/ 1947, ಚಂದ್ರಹಾಸ/ 1947, ಭಕ್ತಸುಧಾಮ/ 1947[ತೆಲುಗು], ಶಿವಶರಣೆ ನಂಬಿಯಕ್ಕ/ 1955-56, ಮಾಲ್ಗುಡಿ ಡೇಸ್- ಟಿ.ವಿ. ಸೀರಿಯಲ್ಸ್ 1970-80, (ಇಂಗ್ಲಿಷ್, ಹಿಂದಿ, ಕನ್ನಡ, ಮೂರೂ ಭಾಷೆಗಳಲ್ಲಿ)









Thank you so much Lava sir
Exciting and fantastic article on legendary actress S K PADMADEVI. KUMARAKAVI NATARAJ SIR PROVED THE PROVERB “OLD IS GOLD”. To be honest I never knew details about actor/actress belongs to olden Era of golden years.
Thank you very much all of you.
VIBHA MANASAKUMARI, Vijayanagar, Bengaluru
Exciting and fantastic article on legendary actress S K PADMADEVI. KUMARAKAVI NATARAJ SIR PROVED THE PROVERB “OLD IS GOLD”. To be honest I never knew details about actor/actress belongs to olden Era of golden years. Thank you very much all of you belong to JANAMANA KANNADA e-newsletter. Smt.VIBHA MANASAKUMARI, Vijayanagar, Bengaluru
Kannada nadina keerti belagida aa kaalada uttama abhinetri SK PADMADEVI article superb. Hiriya mattu best cinema subject lekaka Natraj ravarige dhanyavadagalu sir. 👏
Sathyanarayana
Kannada nadina keerti belagida aa kaalada uttama abhinetri SK PADMADEVI article superb. Hiriya mattu best cinema subject lekaka Natraj ravarige dhanyavadagalu sir. 👏 Mysore University rtd.supdt. Sathyanarayana, Kuvempu nagara, Mysore
ಇಂಥಹ ಅಮೋಘ ಮತ್ತು ಅಪ್ರತಿಮ ಕಲಾವಿದರನ್ನು ಪಡೆದ ಕನ್ನಡ ಚಿತ್ರರಂಗ ಮಾನ್ಯ, ಕನ್ನಡಿಗರು ಧನ್ಯ. ಇವರಹಾಗೆ ಎಲ್ಲದರಲ್ಲು ಶ್ರದ್ಧೆ ಹಾಗೂ ಧೈರ್ಯಶಾಲಿ ನಟಿಯರು ಮತ್ತೆ ಹುಟ್ಟಿಬರಲಿ ಚಂದನವನ ಚರಿತ್ರೆಯನ್ನು ಮತ್ತಷ್ಟು ಶ್ರೇಷ್ಠ ಗೊಳಿಸಲಿ ಎಂದು ಪ್ರಾರ್ಥಿಸೋಣ. ಇಂತಿ ನಿಮ್ಮ ಪ್ರೀತಿಯ ಓರ್ವ ನಾಟಕ-ಸಿನಿಮ ಕ್ಷೇತ್ರದ ಹವ್ಯಾಸಿ ಕಲಾವಿದ.-ನವೀನ್ ಕುಮಾರ್, ದೊಡ್ಡಬಳ್ಳಾಪುರ, ಬೆಂಗಳೂರು.
ಎಸ್.ಕೆ.ಪದ್ಮಾದೇವಿ ಅವರಂಥಹ ಅಮೋಘ ಮತ್ತು ಅಪ್ರತಿಮ ಕಲಾವಿದರನ್ನು ಪಡೆದ ಕನ್ನಡ ಚಿತ್ರರಂಗ ಮಾನ್ಯ, ಕನ್ನಡಿಗರು ಧನ್ಯ. ಇವರಹಾಗೆ ಎಲ್ಲದರಲ್ಲು ಶ್ರದ್ಧೆ ಹಾಗೂ ಧೈರ್ಯಶಾಲಿ ನಟಿಯರು ಮತ್ತೆ ಹುಟ್ಟಿಬರಲಿ ಚಂದನವನ ಚರಿತ್ರೆಯನ್ನು ಮತ್ತಷ್ಟು ಶ್ರೇಷ್ಠ ಗೊಳಿಸಲಿ ಎಂದು ಪ್ರಾರ್ಥಿಸೋಣ. ಇವರನ್ನು ನಮ್ಮಂಥ ಇವತ್ತಿನ ಯುವಪೀಳಿಗೆಗೆ ಪರಿಚಯಿಸುವ ಉತ್ತಮಪ್ರಯತ್ನ ಮಾಡಿದ
ಅತುತ್ತಮ ಲೇಖಕ ನಟರಾಜ ಕವಿಯವರಿಗೆ ನನ್ನ ಅನಂತಾನಂತ ಧನ್ಯವಾದ. ಇಂತಿ ನಿಮ್ಮ ಪ್ರೀತಿಯ ಓರ್ವ ನಾಟಕ-ಸಿನಿಮ ಕ್ಷೇತ್ರದ ಹವ್ಯಾಸಿ ಕಲಾವಿದ.-ನವೀನ್ ಕುಮಾರ್, ದೊಡ್ಡಬಳ್ಳಾಪುರ, ಬೆಂಗಳೂರು.