LatestMysore

ಅದಮ್ಯ ರಂಗ ಶಾಲೆಯು ಬಾಲಂಗೋಚಿ ಮಕ್ಕಳ ಬೇಸಿಗೆ ಶಿಬಿರ…  ನಿಮ್ಮ ಮಕ್ಕಳಿಗೆ ಸುವರ್ಣಾವಕಾಶ!

ಮೈಸೂರು:  ಅದಮ್ಯ ರಂಗ ಶಾಲೆಯು ಕಳೆದ ಎಂಟು ವರ್ಷಗಳಿಂದ ಮೈಸೂರಿನ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಕ್ಕಳ ಹಾಗೂ ವಯಸ್ಕರಿಗೆ ಅಭಿನಯ ತರಬೇತಿ ಕಾರ್ಯಾಗಾರ, ನಾಟಕೋತ್ಸವ, ನಾಟಕ ಪ್ರದರ್ಶನ ಹಾಗೂ ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸಿಕೊಂಡು ಬರುತ್ತಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ.

ಇದೀಗ ರಂಗಶಾಲೆಯ ಮುಂದಿನ ಹೆಜ್ಜೆಯಾಗಿ 5 ರಿಂದ 13 ವರ್ಷದ ಮಕ್ಕಳಿಗಾಗಿ 30 ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ವಿಜಯನಗರ ಮೂರನೇ ಹಂತದಲ್ಲಿರುವ ವಿ.ಕೆ.ಪಬ್ಲಿಕ್ ಸ್ಕೂಲ್ (ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ ಎದುರು)ಆಯೋಜಿಸಲಾಗುತ್ತಿದೆ. ಈ ಶಿಬಿರ ‘ಬಾಲಂಗೋಚಿ’ ಎಂಬ ಶೀರ್ಷಿಕೆಯಡಿ ಶಿಬಿರ ನಡೆಯಲಿದೆ.

‘ಪುಟಾಣಿಗಳ ಪುಂಡಾಟ’ ಎಂಬ ಅಡಿಬರಹವೇ ಹೇಳುವ ಹಾಗೆ ಒಂದು ತಿಂಗಳ ಕಾಲ ಆಡಿ, ಹಾಡಿ, ಕುಣಿದು, ನಲಿದು, ತರಲೆ ತುಂಟಾಟಗಳ ನಡುವೆ ರಂಗಾಟಗಳು, ರಂಗಗೀತೆಗಳು, ಜನಪದ ಗೀತೆಗಳು, ಭಾವಗೀತೆಗಳು, ದೇಸಿ ಆಟಗಳು, ಚಿತ್ರಕಲೆ, ಮಾಸ್ಕ್ ಮೇಕಿಂಗ್, ಮಕ್ಕಳ ಸಂತೆ, ವರ್ಲಿ ಆರ್ಟ್ಸ್, ಮಕ್ಕಳ ಸಿನಿಮಾ, ಪೇಪರ್ ಕ್ರಾಫ್ಟ್, ವಾಯ್ಸ್ ಕಲ್ಚರ್, ಹೋಳಿಯಾಟ, ಮೈಮ್, ಕಂಗಿಲು ನೃತ್ಯ, ಚಿನ್ನು ಕುಣಿತ, ಪಟ್ಟದ ಕುಣಿತ, ದೊಣ್ಣೆ ವರೆಸೆ, ಹುಲಿ ಕುಣಿತ,  ಪೂಜಾ ಕುಣಿತ, ಕಂಸಾಳೆ, ನಾಟಕಗಳು ಇಷ್ಟೆಲ್ಲಾ ಕಲೆಗಳ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಪ್ರದರ್ಶನಕ್ಕೂ ಸಜ್ಜುಗೊಳಿಸಲಾಗುತ್ತದೆ.

ಅಂದಹಾಗೆ ಬಾಲಂಗೋಚಿ ಮಕ್ಕಳ ಬೇಸಿಗೆ ಶಿಬಿರ – 2026 ಏಪ್ರಿಲ್ 6ರಂದು ಪ್ರಾರಂಭವಾಗಿ ಮೇ 6ರಂದು ಮುಕ್ತಾಯವಾಗುತ್ತದೆ. ಪ್ರತಿದಿನ ಬೆಳಗ್ಗೆ 10-30 ರಿಂದ ಸಂಜೆ 4- 30ರವರೆಗೆ ಶಿಬಿರ ನಡೆಯುತ್ತದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಕ್ಕಳು ಮತ್ತು ಅವರ ಪೋಷಕರು ಏಪ್ರಿಲ್ 6 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.   ಗರಿಷ್ಠ 60 ಮಂದಿಗೆ ಅವಕಾಶವಿರುತ್ತದೆ. ಆದ್ದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 8660103141ನ್ನು ಸಂಪರ್ಕಿಸಬಹುದಾಗಿದೆ.

admin
the authoradmin

Leave a Reply

Translate to any language you want