LatestMysore

ಶರಣರ ಜೀವನ ಮೌಲ್ಯ ಸಾರುವ ವಚನಗಳು ಸಾರ್ವಕಾಲಿಕ ಸತ್ಯಗಳು: ಕಲ್ಮಳ್ಳಿ ನಟರಾಜು ಅಭಿಮತ

 ಮೈಸೂರು: ಶರಣರ ಜೀವನ ಮೌಲ್ಯಗಳನ್ನು ಸಾರುವ ವಚನಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಜೆ ಎಸ್ ಎಸ್ ಮಹಾ ವಿದ್ಯಾ ಪೀಠದ ನೌಕರರ ಸಂಘದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು ಅಭಿಪ್ರಾಯಪಟ್ಟರು

ನಂಜನಗೂಡಲ್ಲಿ ನಡೆಯುತ್ತಿರುವ ಗರಳಪುರಿ ಉತ್ಸವ 2026ರ ಕಾರ್ಯಕ್ರಮ ಅಂಗವಾಗಿ ವಿವಿಧ ಬಸವ ಪರ ಸಂಘಟನೆಗಳ ಸಹ ಯೋಗದಲ್ಲಿ ಶ್ರೀ ವಿಶ್ವ ಗುರು ಬಸವೇಶ್ವರ ವೃತ್ತದ ನಂದಿ ಕಲ್ಯಾಣ ಮಂಟಪದಲ್ಲಿ ನಡೆದ ವಚನ ಗಾಯನ ಸ್ಪರ್ಧೆಗೆ ಶರಣರ ನಾಮ ಸ್ಮರಣೆಗಳ ವಾಚನದೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು ವಚನಗಳು ಶರಣರ ಹೃದಯದಿಂದ ಹೊರ ಹೊಮ್ಮಿದ ಪರಿಶುದ್ಧ ಭಾವನೆಗಳಾ ಗಿದ್ದು, ಆತ್ಮಶುದ್ಧಿಯಿಂದ ಕೂಡಿವೆ, ಹಾಗಾಗಿ ಅಲ್ಲಮ ಪ್ರಭು ತನ್ನದೊಂದು ವಚನದಲ್ಲಿ ಮಾತೆoಬುದು ಜ್ಯೋತಿರ್ಲಿಂಗ  ಎಂದು ಮಾತಿನ ಮಹತ್ವ ತಿಳಿಸಿದ್ದಾರೆ ಎಂದರು.

ಬಸವಣ್ಣನ ವಚನ ಒಂದು ನುಡಿದಂತೆ ನಡೆ ನರಜನ್ಮ ಕಡೆ ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲ ಸಂಗಮದೇವ ಎಂದಿದ್ದಾನೆ ನಡೆ ನುಡಿ ಒಂದಾದಾಗ ಮಾತ್ರ ಮನುಷ್ಯನ ವ್ಯಕ್ತಿತ್ವ ಕ್ಕೆ ಗೌರವ ಸಿಗಲು ಸಾಧ್ಯ. ಹಾಗಾಗಿ ವಚನಗಳು ಕೇವಲ ಬಾಯಿಂದ ಬಂದ ಶಬ್ದರ್ಥಗಳಾಗದೆ  ಶರಣರ ಬದುಕನ್ನು ಬಿಂಬಿಸುವ ಸೋಪಾನಗಳಾದವು. ಅಂತರಂಗ ಬಹಿರಂಗದ ಬದುಕು ಒಂದೇ ಆಗಿದ್ದರೆ ಮಾತ್ರ ದೇವರನ್ನು ಕಾಣಲು ಸಾಧ್ಯ.

ಸತ್ಯ ಶುದ್ಧ ಮಾತು ಮತ್ತು ಕಾಯಕದಿಂದ ಇಹಪರಗಳಲ್ಲಿ ಸದ್ಗತಿ ಪಡೆಯಲು ಸಾಧ್ಯ ಎನ್ನುವುದನ್ನು 1200 ವರ್ಷ ಕಳೆದರೂ ನೂರಾರು ಶರಣರ ವಚನಗಳು ಸಾರುವ ಜೀವನ, ಸತ್ಯ ಸಂದೇಶಗಳು. ಅವು ಅನುಭವ ಜನ್ಯ ವಾದ ಕಾರಣ ಹಿಂದೆ, ಇಂದು, ಮುಂದೆ  ಎಲ್ಲೆಲ್ಲೂ ಎಂದೆಂದಿಗೂ ಕಾಲತೀತ ಸಿಮಾತಿ ತವಾಗಿ ಉಳಿಯಲಿಕ್ಕೆ ಸಾಧ್ಯವಾಗಿವೆ. ಜಗತ್ತಿನಲ್ಲಿ ಪ್ರೀತಿ ಕರುಣೆ ಗಳಿಲ್ಲದೆ ಜಗತ್ತನ್ನು ಆಳಿದ ಸಾಮ್ರಾಜ್ಯ ಗಳು ರಾಜರುಗಳು ಅಳಿದು ಹೋಗಿವೆ ಅಳಿದು ಹೋಗಿದ್ದಾರೆ, ಆದರೆ 1200 ವರ್ಷ ಕಳೆದರೂ ಶರಣ ಧರ್ಮ ಉಳಿದಿದೆ ಎಂದರೆ ಸತ್ಯ ಕರುಣೆ ಪ್ರೀತಿ,ಪ್ರಾಮಾಣಿಕತೆ ಕರ್ತವ್ಯ ಪರತೆ ಶ್ರದ್ದೆ ಇವು ನಿಜವಾದ ಮಾನವತೆಯೇ ಮಾನವ ಧರ್ಮ ಎನ್ನುವುದಕ್ಕೆ ವಚನಗಳಿಗಿಂತ ಬೇರೆ ಉದಾಹರಣೆ ಬೇಕಿಲ್ಲ  ಎಂದರು.

ನಿಜಕ್ಕೂ ಬಸವ ಪರ ಸಂಘಟನೆಗಳು ಈ ಕಾರ್ಯಕ್ರಮ ಆಯೋಜಿಸಿರುವುದು ಅದರಲ್ಲೂ ಬಹುತೇಕ ಚಿಕ್ಕ ಮಕ್ಕಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿರುವುದು ಉತ್ತಮ ಬೆಳವಣಿಗೆ. ಶರಣ ಸಂಸ್ಕೃತಿ ಉಳಿಸಿ ಬೆಳೆಸಲು ಇದು ಉತ್ತಮ ಚಿಂತನೆ. ವಿಶೇಷವಾಗಿ ಶರಣ ಪರಂಪರೆಯಲ್ಲಿ ಹಾದಿಯಲ್ಲಿ ನಡೆದು ಕೊಂಡು ಬರುತ್ತಿರುವ ದೇವನೂರ ಮಠದ ಶ್ರೀ ಗುರುಮಲ್ಲೇಶ್ವರರು ಮಲ್ಲನ ಮೂಲೆ ಮಠದ ಗುರು ಪರಂಪರೆ ಸುತ್ತೂರು ಮಠದ ಗುರು ಪರಂಪರೆ ಈ ಭಾಗದಲ್ಲಿ ಶರಣ ಧರ್ಮದ ಹಾದಿಯಲ್ಲಿ ಸಾಗಿ ಜಾತಿ ಧರ್ಮ ಲಿಂಗ ಭೇದವಿಲ್ಲದೆ ಅನ್ನ ಅಕ್ಷರ ಅರೋಗ್ಯ ಆಧ್ಯಾತ್ಮಿಕ ಚಟುವಟಿಕೆ ಮೂಲಕ ಉತ್ತಮ ಮಾನವ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿವೆ ಎಂದರು

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಯೋಗ ಪ್ರಕಾಶ್, ವಿಶ್ವ ಬಸವ ಸೇನೆ ಅಧ್ಯಕ್ಷರಾದ ಬಸವ ಯೋಗಿ ಅಕ್ಕಾ ಮಹಾದೇವಿ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶ್ರೀ ಚೆನ್ನಪ್ಪ ಮುಳ್ಳೂರು ಪ್ರಕಾಶ್ ಕಲ್ಪುರ ಮಹೇಶ್ ಹೊಸವೀಡು ಸುರೇಶ್ ಮೂರ್ತಿ ಶ್ರೀಮತಿ ಸುಜಾತ ಸಿದ್ದಪ್ಪ ಗಂಗಾಧರ್ ಸೇರಿದಂತೆ ನೂರಾರು ಶರಣೆ ಶರಣರು ಮಕ್ಕಳು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want