CinemaLatest

ಡಾ.ರಾಜ್ ಕುಮಾರ್… ಸಾಧನೆ, ದಾಖಲೆಗಳ ಧ್ರುವತಾರೆ… ನಾವು ಅರಿಯದ ಅದೆಷ್ಟು ವಿಷಯಗಳಿವೆ ಗೊತ್ತಾ?

 ಡಾ.ರಾಜ್ ಕುಮಾರ್ ಕನ್ನಡ ನಾಡಿನ ಹೆಮ್ಮೆ… ಚಿತ್ರರಂಗದಲ್ಲಿ ಇವರು ಮರೆಯಲಾಗದ ಸಾಧನೆಯನ್ನು ಮತ್ತು ಅಳಿಸಲಾಗದ ದಾಖಲೆಯನ್ನು ಮಾಡಿಹೋಗಿದ್ದಾರೆ… ಹೀಗಾಗಿಯೇ ಇವರು ಚಂದನವನ ಚರಿತ್ರೆಯಲ್ಲಿ ಮಾತ್ರವಲ್ಲ, ಭಾರತಿಯ ಚಿತ್ರರಂಗದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದ ಸಿನಿಮಾರಂಗದ ಇತಿಹಾಸದಲ್ಲಿ ನಿತ್ಯನೂತನ ಸತ್ಯಶ್ರೇಷ್ಠ ದಾಖಲೆ ಸೃಷ್ಟಿಸಿದ ವಿನೂತನ ವಿಶೇಷ ವಿಶಿಷ್ಟ ಅಭಿನಯದ ನಟಸಾರ್ವಭೌಮರಾಗಿ ಕಂಗೊಳಿಸುತ್ತಿದ್ದಾರೆ… ಇಂತಹ ಸ್ಟಾರ್ ನಟ ನಮ್ಮ ನಾಡಿನವರು ಎನ್ನುವುದೇ ನಮಗೊಂದು ಸಂತೋಷ… ಹಾಗಾದರೆ  ಡಾ.ರಾಜ್‌ಕುಮಾರ್ ನಿರ್ಮಿಸಿದ ದಾಖಲೆಗಳು ಯಾವುದು ಎಂಬ ಕುತೂಹಲ ಸಹಜವಾಗಿಯೇ ನಿಮ್ಮನ್ನು ಕಾಡಬಹುದು… ದಾಖಲೆಗಳ ಕುರಿತಂತೆ ಇಲ್ಲಿ ಹಿರಿಯಬರಹಗಾರದಾದ ಕುಮಾರಕವಿ ನಟರಾಜ್  ಅವರು ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ.. ಪ್ರತಿಯೊಬ್ಬರೂ ತಪ್ಪದೇ ಓದಿರಿ… ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯದಿರಿ….

ಡಾ.ರಾಜ್ ಕುಮಾರ್ ಅವರ ಕುಟುಂಬವೇ ಕಲೆಯನ್ನು ಉಸಿರಾಗಿಸಿಕೊಂಡು ಬಂದಿದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರು ಕಲಾವಿದರಾಗಿದ್ದವರು.( ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರ ಬಗೆಗಿನ ಮಾಹಿತಿಗೆ ಇದರ ಮೇಲೆ ಕ್ಲಿಕ್ ಮಾಡಿ) ಅವರ ಪುತ್ರನಾಗಿ ಮುತ್ತುರಾಜ್ ಸಿನಿಮಾ ರಂಗದಲ್ಲಿ ಡಾ.ರಾಜ್ ಕುಮಾರ್ ಆಗಿ ಮೆರೆದಿದ್ದು ಇತಿಹಾಸ..

ಇನ್ನು ಪ್ರಪಂಚದಲ್ಲೇ ಅತಿಹೆಚ್ಚು ಸಂಖ್ಯೆಯ ಸಿನಿಮಾ ಕಲಾವಿದರು ಇರುವ ನಟನಟಿಯರ ಬಂಧು ಬಳಗ ಪಡೆದ ಏಕೈಕ ಬೃಹತ್ ಕುಟುಂಬ ಡಾ.ರಾಜ್ ಪರಿವಾರ ಎನ್ನುವುದರಲ್ಲಿ ಎರಡು ಮಾತಿಲ್ಲ.. ಅದರ ಬಗ್ಗೆ  ಹೇಳಬೇಕೆಂದರೆ ಮುತ್ತುರಾಜ್‍  ಉರುಫ್ ರಾಜ್‍ಕುಮಾರ್  *ರಾಜ್ ತಂದೆ -ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ. *ರಾಜ್ ತಾಯಿ -ಪಾರ್ವತಮ್ಮ  *ರಾಜ್ ಸೋದರ -ವರದರಾಜ್ *ರಾಜ್ ಸೋದರಿ -ಶಾರದಾ *ರಾಜ್ ಸೋದರಳಿಯ -ಬಾಲರಾಜ್

*ರಾಜ್ ಮಕ್ಕಳಾದ -ಶಿವರಾಜ್ ಕುಮಾರ್ , *-ರಾಘವೇಂದ್ರ ರಾಜ್‌ಕುಮಾರ್, *-ಪುನೀತ್(ಲೋಹಿತ್) ರಾಜ್‍ಕುಮಾರ್, *-ಮಗಳು ಪೂರ್ಣಿಮಾ, *-ಬೀಗರು ಶೃಂಗಾರ್ ನಾಗರಾಜ್, *-ಅಳಿಯ ರಾಮಕುಮಾರ್(ಪೂರ್ಣಿಮ ಪತಿ), *-ಧನ್ಯಾ ರಾಮಕುಮಾರ್ (ಪೂರ್ಣಿಮಾ ಪುತ್ರಿ), *ರಾಜ್ ಮೊಮ್ಮಕ್ಕಳು – ನಿವೇದಿತಾ ಶಿವರಾಜ್, *-ವಿನಯ್ (ರಾಘವೇಂದ್ರ) ರಾಜಕುಮಾರ್,  *-ಯುವ(ರಾಘವೇಂದ್ರ)ರಾಜಕುಮಾರ್, *-ವಿಜಯರಾಘವೇಂದ್ರ (ಎಸ್.ಎ.ಚಿನ್ನೇಗೌಡ್ರ ಮಗ), *-ಶ್ರೀ ಮುರಳಿ (ಎಸ್.ಎ.ಚಿನ್ನೇಗೌಡರ ಮಗ), *-ಅನೂಪ್  (ಸಾ.ರಾ.ಗೋವಿಂದು ಮಗ)

ಮತ್ತೊಂದು ವಿಶ್ವದಾಖಲೆ ಏನೆಂದರೆ, ಡಾ.ರಾಜ್‌ಕುಮಾರ್ ನಟಿಸಿದ ಒಟ್ಟಾರೆ 214 ಸಿನಿಮಾಗಳಲ್ಲಿ ಒಂದೇಒಂದು ಚಿತ್ರವೂ ಸಹ ಫಿಲಂ ಸೆನ್ಸಾರ್ ಬೋರ್ಡ್ ನಿಂದ ವಯಸ್ಕರಿಗೆ ಮಾತ್ರ ಎಂಬ “ಎ” ಸರ್ಟಿಫಿಕೇಟ್ ಪಡೆದ ಚಿತ್ರ ಇರಲಿಲ್ಲ. ಇದೂ ಸಹ ಪ್ರಪಂಚದ ನೂತನ ದಾಖಲೆ.

ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…

ನಟ-ಕಂ-ಹಿನ್ನೆಲೆಗಾಯಕ ವಿಶ್ವದಾಖಲೆ, ಜೀವನಚೈತ್ರ ಚಿತ್ರದ “ನಾದಮಯ….” ಹಾಡಿಗೆ ಅಖಿಲ ಭಾರತ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದ ಮೊಟ್ಟಮೊದಲ ಹೀರೋ-ಕಂ-ಪ್ಲೇಬ್ಯಾಕ್ ಸಿಂಗರ್.  *ಪ್ರಪಂಚದಾದ್ಯಂತ 25ವರ್ಷಕಾಲ 500ಕ್ಕು ಹೆಚ್ಚಿನ “ಮ್ಯೂಸಿಕಲ್ ನೈಟ್” ಸಾರ್ವಜನಿಕ ಸಹಾಯಾರ್ಥ ಕಾರ್ಯಕ್ರಮ ನಡೆಸಿಕೊಟ್ಟ ಏಕೈಕ ಹೀರೋ-ಕಂ-ಆರ್ಕೆಷ್ಟ್ರ ಸಿಂಗರ್. *ಸಿನಿಮಾದಲ್ಲಿ ತನ್ನದೇ ಪಾತ್ರಕ್ಕೆ ತಾನೇ ಹಿನ್ನೆಲೆ ಗಾಯಕನಾಗುವುದರ ಜತೆಗೇ ಇತರೆ ನಟರ ಸಿನಿಮಾಗಳು ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ 500ಕ್ಕೂ ಹೆಚ್ಚಿನ ಚಿತ್ರಗೀತೆ ಹಾಡಿದ ಪ್ರಪ್ರಥಮ ನಟ-ಹಿನ್ನೆಲೆಗಾಯಕ.

*50 ವರ್ಷಕಾಲ ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಜಾನಪದಗೀತೆ, ಇಂಗ್ಲಿಷ್ ಗೀತೆ, ಆಲ್ಬಂ, ಮುಂತಾದ ವಿಭಾಗದಲ್ಲಿ 5000ಕ್ಕೂ ಹೆಚ್ಚಿನ ಗೀತೆಗಳನ್ನು 100ಕ್ಕು ಹೆಚ್ಚಿನ ಸಂಗೀತ ನಿರ್ದೇಶಕರ ರಾಗ ಸಂಯೋಜನೆಯಲ್ಲಿ ಹಾಡಿದ ಜಗತ್ತಿನ ಏಕೈಕ ನಟ-ಹಿನ್ನಲೆಗಾಯಕ! *ಓರ್ವ ಸಿನಿಮ ಹಿನ್ನೆಲೆಗಾಯಕ-ಕಂ-ನಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಭಿನಯದ ಮುದ್ದಿನಮಾವ ಚಿತ್ರಕ್ಕೆ “ದೀಪಾವಳಿ…. ದೀಪಾವಳಿ….” ಎಂಬ ಗೀತೆ ಹಾಡಿದ ವಿಶ್ವದ ಓರ್ವನೇ ನಾಯಕನಟ-ಕಂ-ಹಿನ್ನೆಲೆಗಾಯಕ!

ಇದನ್ನೂ ಓದಿ: ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್…

*ಸಾಹಸಸಿಂಹ ಡಾ.ವಿಷ್ಣುವರ್ಧನ್ ನಟಿಸಿದ ಧಣಿ ಚಿತ್ರದ”ನೀಕಂಡ ಆಲೋಕ…” ಹಾಡನ್ನ ಹಾಡಿದ ಮತ್ತು ರೆಬೆಲಸ್ಟಾರ್ ಡಾ.ಅಂಬರೀಷ್ ನಟಿಸಿದ ಮಿಡಿದ ಹೃದಯಗಳು ಚಿತ್ರದ “ತಂದೆ ಕೊಡಿಸೋ ಸೀರೆ….” ಹಾಡನ್ನು ಹಾಡುವ ಮೂಲಕ ಯಾವುದೇ ಒಂದು ಪ್ರಾದೇಶಿಕ ಭಾಷೆಯಲ್ಲಿ 200ಕ್ಕು ಹೆಚ್ಚು ಫಿಲಂಸ್ ಹೀರೋ ಆದವನು ಅದೇ ಭಾಷೆಯಲ್ಲಿ ತಲಾ 200ಕ್ಕು ಹೆಚ್ಚು ಚಿತ್ರದಲ್ಲಿ ನಟಿಸಿದ ಬೇರೆ ಇಬ್ಬರು ಹೀರೋಗಳಿಗೆ ಹಿನ್ನೆಲೆಗಾಯಕನಾದ ಪ್ರಪಂಚದ ಏಕೈಕ ಆಕ್ಟರ್-ಕಂ-ಪ್ಲೇಬ್ಯಾಕ್ ಸಿಂಗರ್ ಎನಿಸಿಕೊಂಡು ಡಾ.ರಾಜ್ ನೂತನ ಇತಿಹಾಸ ಸೃಷ್ಟಿಸಿದ್ದಾರೆ.

*ಡಾ.ರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಸಿನಿಮ ಹಿನ್ನೆಲೆ ಗಾಯಕನಾಗಿ ಹಾಡಿದ ಮೊಟ್ಟಮೊದಲ ಚಿತ್ರಗಳು.. ಓಹಿಲೇಶ್ವರ(1956), ಮಹಿಷಾಸುರ ಮರ್ಧಿನಿ (1959)ಸಂಪತ್ತಿಗೆಸವಾಲ್ (1974) ಕ್ರಮೇಣ 1975ರಿಂದ ಸತತವಾಗಿ ಅವರ ಎಲ್ಲ ಚಿತ್ರಗಳ ಅವರ ಪಾತ್ರಗಳಿಗೆ ಸ್ವಯಂ ತಾವೇ ಹಿನ್ನೆಲೆ ಗಾಯಕರಾದರು. ಇದೆಲ್ಲವನ್ನು ನೋಡಿದ ಮೇಲೆ ಡಾ.ರಾಜ್ ಕುಮಾರ್ ಅವರ ಸಾಧನೆ ಮತ್ತು ದಾಖಲೆಗಳೇನು ಎಂಬುದು ಮನದಟ್ಟಾಗಿ ಬಿಡುತ್ತದೆ… ಹೀಗಾಗಿಯೇ ಅವರು ಎಂದಿಗೂ ಚಿತ್ರರಂಗ ಮರೆಯದ ಮಾಣಿಕ್ಯನಾಗಿ ಕನ್ನಡಿಗರ ಪಾಲಿನ ಧ್ರುವತಾರೆಯಾಗಿ ಮಿನುಗುತ್ತಲೇ ಇರುತ್ತಾರೆ…

admin
the authoradmin

25 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ