LatestMysore

ಶೀರೆನಹಳ್ಳಿ ಗ್ರಾಮದ ಬೀರೇಶ್ವರ ಉತ್ಸವ, ಜಾತ್ರೆ.. ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸುವ ಮಹಿಳಾ ಭಕ್ತರು

 ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ಶೀರೆನಹಳ್ಳಿ ಗ್ರಾಮದ ಬೀರೇಶ್ವರ ಉತ್ಸವ ಹಾಗೂ ಜಾತ್ರೆ  ಸಂಪನ್ನ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ರವಿಶಂಕರ್ ತಿಳಿಸಿದ್ದಾರೆ.

ಗ್ರಾಮದ ಬೀರೇಶ್ವರ ದೇವಸ್ಥಾನದ ಉತ್ಸವ ಮೂರ್ತಿಯನ್ನು ಮಾ. 30ರ ಸೋಮವಾರ ಬೆಳಿಗ್ಗೆ ಗ್ರಾಮದಿಂದ ಪಕ್ಕದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಕಾವೇರಿ ನದಿಗೆ ಬೆಳಿಗ್ಗೆ 10.30 ಕ್ಕೆ ಇಡಿ ಗ್ರಾಮದ ಎಲ್ಲಾ ಜನಾಂಗದವರು ಬರಿಗಾಲಿನಲ್ಲಿ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಹೋಗಿ ಕಾವೇರಿ ನದಿಯಲ್ಲಿ ಸ್ವಚ್ಛತೆಯೊಂದಿಗೆ ಭಕ್ತರು ನದಿ ಸ್ನಾನ ಮಾಡಿ ಅದೇ ದಿನ ಗ್ರಾಮಕ್ಕೆ ವಾಪಸ್ ಬರುವರು.

ಗ್ರಾಮಕ್ಕೆ ಬಂದ ನಂತರ ರಾತ್ರಿ ಇಡೀ ಬೀದಿ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಸುವಾಗ ಮಹಿಳೆಯರು ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸುವರು. ಗ್ರಾಮದಲ್ಲಿ  7 ದಿನಗಳ ವರೆಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ  ಮಾರ್ಚ್ 31 ರಿಂದ ಏಪ್ರಿಲ್ 2ರತನಕ್ಕೆ ಪ್ರತಿ ವರ್ಷದಂತೆ 3 ದಿನಗಳ ಕಾಲ ಜಾತ್ರೆ ನಡೆಯಲಿದೆ. ಇಡೀ ಗ್ರಾಮದ ಜನಾಂಗಕ್ಕೆ ಹಾಗೂ ಅಕ್ಕಪಕ್ಕದ ತಾಲೂಕಿನಿಂದ ಬರುವ ಹಾಗೂ ತಾಲೂಕಿನ ಗ್ರಾಮಗಳಿಂದ ಬರುವ ಭಕ್ತರಿಗೆ ದಾಸೋಹ ನಡೆಯಲಿದೆ

ದೇವಸ್ಥಾನಕ್ಕೆ ಹರಕೆ ಹೊತ್ತ  ಮಹಿಳೆಯರು ಬಾಯಿ ಬೀಗ ಹಾಕಿಸಿಕೊಂಡರೆ ಹಲವು ಮಹಿಳಾ ಭಕ್ತರು ಸೇರಿದಂತೆ ಕೇಶಮುಡಿ ನೀಡುವರು. ದೇವಸ್ಥಾನದ ಆವರಣದಲ್ಲಿ ಚಿಕ್ಕಯ್ಯ, ದೊಡ್ಡಯ್ಯ, ಉಜೀನಯ್ಯ, ದೈವಗಳನ್ನು  ಕುಣಿದು ಮೆರೆಯುವುದು. ಮಾರ್ಚ್ 30ರ ಸೋಮವಾರ ಉತ್ಸವ ಮೂರ್ತಿ ಕಾವೇರಿ ನದಿಗೆ, ರಾತ್ರಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾರ್ಚ್ 31ರ ಮಂಗಳವಾರ ಚಿಕ್ಕಯ್ಯ ದೊಡ್ಡಯ್ಯ ಊಜಿನಯ್ಯ  ದೈವಗಳನ್ನು ಮೆರೆಸುವುದು  ಮತ್ತು  ಮಧ್ಯಾಹ್ನ 2 ಗಂಟೆಗೆ ಕೊಂಡೂತ್ಸವ ನಡೆಯಲಿದೆ.

ಗ್ರಾಮದ ಯಜಮಾನರಾದ ಮಹೇಶ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಿಂತು ಹೋಗಿದ್ದ ಉತ್ಸವವನ್ನು ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ಹಿಂದಿನ ಕಾಲದ ಹಿರಿಯರು ನಡೆಸಿಕೊಂಡು ಬಂದ ರೀತಿ ಧಾರ್ಮಿಕ ವಿಧಿ ವಿಧಾನದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ.

admin
the authoradmin

Leave a Reply

Translate to any language you want