LatestMysore

ಗಂಧನಹಳ್ಳಿ ಗ್ರಾಮದ‌ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವ ಭರವಸೆ ನೀಡಿದ  ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್): ಗಂಧನಹಳ್ಳಿ ಗ್ರಾಮದ‌ ಸಮಗ್ರ ಅಭಿವೃದ್ಧಿಗೆ ಹಂತ‌ ಹಂತವಾಗಿ ಅನುದಾನ ನೀಡಲು ತೀರ್ಮಾನಿಸಲಾಗಿದ್ದು ಮೊದಲನೇ ಹಂತದಲ್ಲಿ ಎಸ್ ಬಿ ಎಂ ಬ್ಯಾಂಕ್ ಸೇರಿದಂತೆ ಇತರೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ನಡೆದ ಜಿಎಸ್ ವಿ ಅಭಿಮಾನಿ‌ ಬಳಗದ ಉದ್ಘಾಟನಾ ಸಮಾರಂಭದಲ್ಲಿ‌ ಮಾತನಾಡಿದ ಅವರು ಈ ಗ್ರಾಮವು‌ ಕ್ಷೇತ್ರದಲ್ಲಿಯೇ ಅತಿ ದೊಡ್ಡ ಗ್ರಾಮವಾಗಿದ್ದು ನಾನು ವಿಶೇಷ ಗಮನಹರಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದರು.

ಗ್ರಾಮದಲ್ಲಿ‌ ನಿರ್ಮಾಣ ಹಂತದಲ್ಲಿರುವ ಕನಕ ಭವನದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದ ಅವರು, ಇದರೊಂದಿಗೆ ಗ್ರಾಮದಿಂದ ರೈತರ ಜಮೀನುಗಳಿಗೆ ಸಂರ್ಪಕ ಕಲ್ಪಿಸುವ ರಸ್ತೆಗಳಿಗೂ ಅನುದಾನ ಬಿಡುಗಡೆ ಮಾಡಿಸುವುದಾಗಿ ಪ್ರಕಟಿಸಿದರು.

ಗಂಧನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳಿಗೆ ‌ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿರುವುದಾಗಿ ಪ್ರಕಟಿಸಿದ ಶಾಸಕರು ಎಲ್ಲ ವಿದ್ಯಾರ್ಥಿಗಳು ಈ ಶಾಲೆಗಳಿಗೆ ಸೇರಿ ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆಯಬೇಕೆಂದು ಸಲಹೆ ನೀಡಿದರು.

ಸಾಲಿಗ್ರಾಮ ಮಂಚನಹಳ್ಳಿ‌ ಮುಖ್ಯ ರಸ್ತೆಯಿಂದ ಗಂಧನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯ ನ್ನು ಅಗಲೀಕರಣಗೊಳ್ಳಿಸಿ ಚರ್ತಪಥವನ್ನಾಗಿಸುವ ವಾಗ್ದಾನ ನೀಡಿದ ಡಿ.ರವಿಶಂಕರ್ ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆಯಬೇಕಾದರೆ ಚುನಾಯಿತ‌ ಜನಪ್ರತಿನಿಧಿಗಳೊಂದಿಗೆ ಸಾರ್ವಜನಕರು‌ ಕೈ ಜೋಡಿಸಿ ಕೆಲಸ‌ಮಾಡಬೇಕೆಂದರು.

ಮೈಸೂರಿನ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಆದ ಸಮಾಜ ಸೇವಕ ಗಂಧನಹಳ್ಳಿ ಜಿ.ಎಸ್.ವೆಂಕಟೇಶ್ ಮಾತನಾಡಿ ಹುಟ್ಟೂರಿನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ನನ್ನೂರಿನ‌ ಜನರಿಗೆ ನನ್ನ ಕೈಲಾದ ಸಹಾಯ ಮಾಡಲು ನಾನು ಸದಾ ಸಿದ್ದನಿದ್ದೇನೆ ಎಂದರು.

ಗ್ರಾಮದ ಯುವಕರು ಸಧೃಡವಾಗಿ ತಮ್ಮ‌ಆರೋಗ್ಯ ಕಾಪಾಡಿಕೊಳ್ಳಲು ಗರಡಿ‌ ಮನೆ ನಿರ್ಮಾಣಕ್ಕೆ ಶಾಸಕರು ನಿವೇಶನ ಕೊಡಿಸಿದರೆ ನನ್ನ‌ಸ್ವಂತ ಹಣದಲ್ಲಿ‌ ಕಟ್ಟಡ ನಿರ್ಮಾಣ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಉಚಿತ‌ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಆರೋಗ್ಯ ಸಂಬಂಧಿತ ಸಲಹೆ ಮತ್ತು ಸೂಚನೆಗಳನ್ನು ನೀಡಿ ಔಷಧಿಗಳನ್ನು‌ ವಿತರಣೆ ಮಾಡಲಾಯಿತು. ಅಖಿಲ ಭಾರತ  ವೀರ ಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿದರು.

ತಾ.ಪಂ. ಮಾಜಿ ಅಧ್ಯಕ್ಷ‌ ಹಾಡ್ಯಮಹದೇವಸ್ವಾಮಿ, ಅರ್ಜುನ ಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ದಿಲೀಪ್, ಮುಖಂಡರಾದ ವೈ.ಎಸ್‌.ಜಯಂತ್, ಡಿ.ಜೆ.ಬಸವರಾಜ್, ಜಿ.ಎಸ್.ವಿ ಅಭಿಮಾನಿ ಬಳಗದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಮಹದೇವ, ಕಾರ್ಯದರ್ಶಿ ಗಣೇಶ್,  ಸದಸ್ಯರಾದ ಕೆಂಪರಾಜು, ಜಯಣ್ಣ, ರವಿ, ಬಸವರಾಜ್, ಸ್ವಾಮಿಗೌಡ, ಅವಿನಾಶ್, ಮಹೇಂದ್ರ, ನಿಂಗರಾಜು, ಕೃಷ್ಣೆ ಗೌಡ, ಶಿವಣ್ಣ, ಕೀರ್ತಿರಾಜ್, ಆನಂದ್, ಶಿವಣ್ಣ, ಅರುಣ, ಶರತ್, ಮಹಾದೇವ, ಸಂಜಯ್, ವಿನಯ್ ಕುಮಾರ್, ಮಹಾದೇವ, ಯೋಗನಿಂಗೇಗೌಡ, ಜಯಣ್ಣ, ಸ್ವಾಮಿ, ಸಂತೋಷ, ಉಮೇಶ, ರಾಮೇಗೌಡ, ತಮ್ಮೆಗೌಡ, ರಾಜೇಶ್, ರಾಜೇಗೌಡ, ಬಾಬು, ಕೆಂಪರಾಜು, ಬಸವರಾಜು, ಸುರೇಶ, ಸಹದೇವ, ರಾಜೇಶ್, ಅರ್ಜುನ್, ಯೋಗೇಶ್, ಅನಿಲ್, ಕಿರಣ್, ಸುನಿಲ್, ನವೀನ್, ಮಧು, ಸತಿ, ಬಲರಾಮ್, ಬಿರೇಶ್, ತೇಜು, ಪುನೀತ್, ದರ್ಶನ್, ಭರತ್, ಪ್ರಜ್ವಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply