LatestMysore

ಸ್ತ್ರೀ, ಪುರುಷರು ಒಬ್ಬರ ಏಳಿಗೆಗೆ ಮತ್ತೊಬ್ಬರು ಸಹಕರಿಸಿದರೆ ಪರಿಪೂರ್ಣ ಬದುಕು ಸಾಧ್ಯ: ಅಂಬಿಕಾ ಶಿವನಂಜಪ್ಪ ಹುಸ್ಕೂರು

ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ

ಮೈಸೂರು: ಪ್ರಪಂಚದಲ್ಲಿ ಸ್ತ್ರೀ ಮತ್ತು ಪುರುಷರಾಗಲಿ ಯಾರು ಪರಿಪೂರ್ಣರಲ್ಲ ಒಬ್ಬರ ಏಳಿಗೆಗೆ ಮತ್ತೊಬ್ಬರ ಸಹಕಾರ ಇದ್ದಾಗ ಮಾತ್ರ ಬದುಕು ಪರಿ ಪೂರ್ಣವಾಗಲು ಸಾಧ್ಯ ಎಂದು ಜೆ ಎಸ್ ಎಸ್ ತಾಂತ್ರಿಕ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಕನ್ನಡ ಪ್ರಾಧ್ಯಾಪಕಿ ಕುಮಾರಿ ಅಂಬಿಕಾ ಶಿವನಂಜಪ್ಪ ಹುಸ್ಕೂರು ಹೇಳಿದರು.

ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಜಗನ್ಮಾತೆ ಅಕ್ಕಾ ಮಹಾದೇವಿ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದಲ್ಲಿಯೇ ಹೆಣ್ಣನ್ನು ಗೌರವಿಸಿದ ರಾಷ್ಟ್ರ ಭಾರತ ಬಿಟ್ಟರೆ ಜಗತ್ತಿನಲ್ಲಿ ಮತ್ತೊಂದು ಸಿಗಲಾರದು. ಪ್ರಾಚೀನ ಪುರಾಣ ಕಥೆಗಳಲ್ಲಿ ಸ್ತ್ರೀ ಯನ್ನು ದೇವರಿಗೆ ಹೋಲಿಸಿರುವ ಘಟನೆಗಳನ್ನು ಕಾಣ ಬಹುದು.

ಸ್ತ್ರೀ ಹೇಗೆ ತಾಯಿಯಾಗಿ ಹೆಂಡತಿ ಯಾಗಿ ಮಗಳಾಗಿ ಎಲ್ಲ ಸ್ತರದ ಬದುಕನ್ನು ತುಂಬುತ್ತಾಳೆ ಹಾಗೆಯೇ ಪುರುಷ ತಂದೆಯಾಗಿ ಗಂಡನಾಗಿ ಮಗನಾಗಿ ಬದುಕನ್ನು ಅರ್ಥಪೂರ್ಣ ಗೊಳಿಸುತ್ತಾನೆ. ಹೀಗಾಗಿ ಕೂಡಿ ಬಾಳಿದರೆ ಮಾತ್ರ ಸಂತೃಪ್ತಿ ನೆಮ್ಮದಿ ಕಾಣಲು ಸಾಧ್ಯ ಎಂದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ ಎಸ್ ಎಸ್ ಬಾಲ ಜಗತ್ ಪ್ರೌಢ ಶಾಲೆಯ ಮುಖ್ಯ್ಯೊ ಪಾಧ್ಯಯಿನಿ ಶ್ರೀಮತಿ ಮಂಜುಳಾ ಮಾಲಂಗಿ ಸುರೇಶ್ ನಿಜಕ್ಕೂ ಸಂಘಟನೆಯ ಪುರುಷರೆ ಈ ಕಾರ್ಯಕ್ರಮ ಆಯೋಜಿಸಿ ಮಾಡುತ್ತಿರುವುದು ಅತ್ಯಂತ ಸಂತೋಷವಾಗಿದೆ. ಮೊದಲು ಸಂಘಟನೆಯ ಪದಾಧಿಕಾರಿಗಳಿಗೆ ತುಂಬು ಅಭಿನಂದನೆ ಸಲ್ಲಿಸುತ್ತೇನೆ. ಸ್ತ್ರೀ ಕುಟುಂಬ ಸಂಘ ಸಮಾಜ ವಿವಿಧ ಸ್ತರಗಳಲ್ಲಿ ಕೆಲಸ ನಿರ್ವಹಿಸುವಾಗ ಹೇಗೆ ತನ್ನ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸುತ್ತಾಳೆ ಎನ್ನುವುದರ ಮೇಲೆ ಅವಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಬದಲಾದ ಕಾಲ ಘಟ್ಟದಲ್ಲಿ ಅತಿಯಾದ ಸ್ವಾತಂತ್ರವೂ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ. ನಾವು ನೋಡುವ ಮನೋಭಾವದಂತೆ ನಮಗೆ ಒಳ್ಳೆಯದು ಕೆಟ್ಟದ್ದು ಎಂದು ಗೋಚರಿಸುತ್ತದೆ ಸಕಾರಾತ್ಮಕ ಭಾವನೆ ಬೆಳೆಸಿ ಕೊಂಡರೆ ಉತ್ತಮ ಬಾಂಧವ್ಯ ರೂಪು ಗೊಳ್ಳುತ್ತದೆ ಎಂದರು

ಮುಖ್ಯ ಅತಿಥಿಯಾಗಿ ಮಾತನಾಡಿದ ಮೈಸೂರು ಜಿಲ್ಲಾ ಜಗನ್ಮಾತೆ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಶ್ರೀಮತಿ ಗೀತಾ ಕಲ್ಮಳ್ಳಿ ನಟರಾಜು ಕುಟುಂಬ ಸೇವೆಗೆ ಸೀಮಿತವಾಗಿದ್ದ ಮಹಿಳೆಯರು ತಾವು ಶಿಕ್ಷಣ ಪಡೆದು ತಮ್ಮ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಪುರುಷ ರಿಗೆ ಸಮನಾಗಿ ಕೃಷಿ ಶಿಕ್ಷಣ ಕೈಗಾರಿಕೆ ಬ್ಯಾಂಕಿಂಗ್ ಆಡಳಿತ ಸಾಹಿತ್ಯ ವೈದ್ಯಕೀಯ ಕ್ರೀಡೆ ತಂತ್ರಜ್ಞಾನ ಬಾಹ್ಯಕಾಶ ಮಿಲಿಟರಿ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಲ್ಲಿಸುತ್ತಿದ್ದೂ ಹೆಣ್ಣು ಶಾಪವಲ್ಲ.

ಪ್ರಗತಿಯ ಕಣ್ಣು ಎನ್ನುವುದು ಸಾಬೀತಾಗಿದೆ. ಹಾಗಾಗಿ ಹೆಣ್ಣು ಮಕ್ಕಳು ಕುಟುಂಬಕ್ಕೆ ಶಾಪವಾಗದೆ ವರವಾಗಿದ್ದಾರೆ. ಹೆಣ್ಣು ಹುಟ್ಟಿದರೆ ದುಃಖ ಪಡದೆ ಹೆಮ್ಮೆ ಪಡುವಂತಾಗಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು

ಇದೇ ವೇಳೆ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಎಲ್ಲ ಪದಾಧಿಕಾರಿಗಳನ್ನು ಸ್ಮರಣ ಫಲಕ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಬಿ ಆರ್ ಶಿವಕುಮಾರ್, ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ರಾಜ್ಯ ಸರಕಾರಿ ನೌಕರರ ಸಂಘದ ವಿಭಾಗಿಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್,

ಜಿಲ್ಲಾ ವೀರ ಶೈವ ಮಹಿಳಾ ಘಟಕದ ಕಾರ್ಯದರ್ಶಿ ಮಲ್ಲಿಕಾ, ಸಂಘದ ಉಪಾಧ್ಯಕ್ಷರಾದ ಸುರೇಶ್ ಉಮ್ಮತ್ತೂರು ಪುಟ್ಟ ಸುಬ್ರಮಣ್ಯ, ಜೊತೆಖಜಾಂಚಿ ಬಾಗಲಿ ಮಹೇಶ್ ಬೆಳವಾಡಿ ಗವಿಶ್ ಬಾನಳ್ಳಿ ಸಂತೋಷ್ ಕಾರ್ಯದರ್ಶಿ ಪ್ರಸಾದ್, ನಿಕಟ ಪೂರ್ವ ಕಾರ್ಯ ದರ್ಶಿ ಪ್ರಭುಸ್ವಾಮಿ ಜೆ ಎಸ್ ಎಸ್ ಸಂಸ್ಥೆ ಯ ಶಿಕ್ಷಕಿ ಶ್ರೀಮತಿ ಪ್ರಿಯಕುಮಾರಿ, ಶ್ರೀಮತಿ ಲೀಲಾoಬಿಕಾ ಸಿದ್ದ ರಾಮೇಶ್ ನಂದಿನಿ ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಬಸವಣ್ಣ ಶರ್ಮಿಳಾ ಮೋಹನ್, ಶಿಲ್ಪಾ ನಂದೀಶ್, ಮಂಜುಳಾ ಮಾದಲಾoಬಿಕೆ ಜಾಗದಾoಬಾ, ಶ್ರೀಮತಿ ಉಷಾ ಆನಂದ್, ಶಿಕ್ಷಕರಾದ ರಾಜಶೇಖರ್ ಸಿದ್ದ ರಾಮೇಶ ಗಜೇಂದ್ರ ನಿತಿನ್ ಭೋಗಪುರ ಮಂಜು ತಾಳವಾಡಿ ಅನಿಲ್ ಆಯರಹಳ್ಳಿ ಮೊದಲಾದವರಿದ್ದರು.

admin
the authoradmin

Leave a Reply

Translate to any language you want