LatestMysore

ಮೈಸೂರಿನಲ್ಲಿ  ಕೆ ಎಂ ಪಿ ಕೆ ಟ್ರಸ್ಟ್ ನಿಂದ ಜನರಲ್ಲಿ ಎಸ್ ಐಆರ್ ಜಾಗೃತಿ ಕಾರ್ಯಕ್ರಮ

ಮತದಾನದ ಹಕ್ಕು ಪಡೆಯಲು  ವಿಕ್ರಂ ಅಯ್ಯಂಗಾರ್ ಮನವಿ

ಮೈಸೂರು: ಭಾರತದ ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ  ಮೈಸೂರಿನ ನಗರದ ಬಸ್ ನಿಲ್ದಾಣದಲ್ಲಿ ಕರಪತ್ರ ಹಿಡಿದು ಎಸ್ ಐ ಆರ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಮ್‌ಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್  ನೀವುಗಳು ನಿಮ್ಮ ಮನೆಗಳಲ್ಲಿ ಬಿ ಎಲ್ ಎ ಗಳು ಬಂದ ಸಂದರ್ಭದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅವರಿಗೆ ಸ್ಪಂದಿಸಿ ಮತದಾನದ ಹಕ್ಕನ್ನು ಪಡೆಯಬೇಕು. ಎಸ್ಐಆರ್ ದೇಶದ ಪ್ರಜೆ ಹೌದು ಅಲ್ಲವೋ ಎಂಬುದನ್ನು ತೀರ್ಮಾನ ಮಾಡುವ ಒಂದು ಪ್ರಕ್ರಿಯೆ ನಾವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸಬೇಕು.

ರಾಷ್ಟ್ರದ ಹಿತದೃಷ್ಟಿಯಿಂದ ಮಾಡುವ ಕಾರ್ಯ ಇದಾಗಿದೆ. ಯಾವುದೇ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಕೈಬಿಡದಂತೆ ಕ್ರಮವಹಿಸಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಪಕ್ಷದ ಬಿ ಎಲ್ ಎ ರಾಜಕೀಯ ಮಾಡುವಂತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾಗಿದೆ ಎಂದು ಜಾಗೃತಿ ಮೂಡಿಸಿದರು

ಇದೇ ಸಂದರ್ಭದಲ್ಲಿ ಕೆ ಎಮ್ ಪಿ ಕೆ ಟ್ರಸ್ಟ್  ನ ಎಸ್ ಎನ್ ರಾಜೇಶ್, ಚಕ್ರಪಾಣಿ, ಮಹಾನ್ ಶ್ರೇಯಸ್, ಸುಚೀಂದ್ರ, ಜಗದೀಶ್, ದೂರ ರಾಜಣ್ಣ, ದಯಾನಂದ ನಾಯಕ್, ರವಿ, ರಾಕೇಶ್, ದುರ್ಗಾ ಪ್ರಸಾದ್, ಹಾಗೂ ಇನ್ನಿತರರು ಇದ್ದರು.

admin
the authoradmin

Leave a Reply