ಮೈಸೂರು: ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಗುರುವಾರ ಸಂಜೆ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ನೂರಾರು ಜನರಿಗೆ ಅನ್ನದಾನ ಮಾಡಲಾಯಿತು.
ಕೇಂದ್ರದ ಆವರಣದಲ್ಲಿ ಗಣೇಶ, ಶಿವ, ನಂದಿ, ಮೂರ್ತಿಗಳನ್ನು ಪ್ರತಿಷ್ಠಾನೆ ಮಾಡಿ ಅಷ್ಟೋತ್ತರ ಮಂತ್ರ ಜಪಿಸುವ ಮೂಲಕ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ಬಸವಮಾರ್ಗ ಸಂಸ್ಥೆಯ ವ್ಯಸನಿಗಳು ಹಾಗೂ ಅವರ ಕುಟುಂಬದವರಿಗೆ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಸಂಕಲ್ಪ ಮಾಡಿಸಲಾಯಿತು. ಅರ್ಚಕರಾದ ಸಾಗರ್ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿತು.

ಈ ವೇಳೆ ಸಂಸ್ಥೆಯ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ಬಸವಮಾರ್ಗ ಫೌಂಡೇಷನ್ ವತಿಯಿಂದ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣೆಮೆಯ ದಿನಗಳಲ್ಲಿ ಶಿವನಿಗೆ ವಿಶೇಷೆ ಪೂಜೆಯನ್ನು ಮಾಡಲಾಗುತ್ತದೆ. ಜತೆಗೆ ನೂರಾರು ಜನರಿಗೆ ಅನ್ನದಾನ ಸೇವೆಯನ್ನು ಮಾಡಲಾಗುತ್ತದೆ. ವ್ಯಸನದ ಸಮಸ್ಯೆಯಿಂದ ನಮ್ಮ ಸಂಸ್ಥೆಗೆ ದಾಖಲಾಗಿರುವ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬ ವರ್ಗದವರಿಗೆ ದೇವರ ಅನುಗ್ರಹ ಸಿಗಲಿ ಎನ್ನುವ ನಿಟ್ಟಿನಲ್ಲಿ ನಾವು ಈ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿಕೊಂಡ ಬರಲಾಗುತ್ತದೆ ಎಂದರು ತಿಳಿಸಿದರು.

ವ್ಯಸನ ದೈಹಿಕ, ಮಾನಸಿ ಹಾಗೂ ಆತ್ಮಿಕ ಕಾಯಿಲೆ. ಇದು ಕಾಯಿಲೆ ಎಂದು ಸಮಸ್ಯೆಗೆ ಸಿಲುಕಿಕೊಂಡಿರುವ ವ್ಯಕ್ತಿಗೂ ಮತ್ತು ಮನೆಯವರಿಗೂ ಕೂಡ ತಿಳಿದಿರುವುದಿಲ್ಲ. ಈ ಕಾಯಿಲೆಗೆ ಪ್ರಾರಂಭಿಕ ಹಂತದಲ್ಲೇ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ ವ್ಯಸನಿಂದ ದೂರ ಇರಬಹುದು. ಕುಡಿತವಾಗಲಿ ಅಥವಾ ಇನ್ಯಾವುದೇ ವ್ಯಸನವಾಗಲಿ ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯದೊಂದಿಗೆ, ವ್ಯಸನಿಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪರ್ಯಾಯ ಕಾರ್ಯಕ್ರಮಗಳು ತುರ್ತಾಗಿ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ಮಂಜುನಾಥ್, ನಿಶ್ಚಿತಾ, ನೇತ್ರಾ, ಉಷಾರಾಣಿ, ಮೋನಿಷಾ, ರಾಧಿಕಾ, ಅರ್ಚಿತ್ ರಾಮ್, ಆನಂದ್, ರಾಘವೇಂದ್ರ, ಅಭಿ, ಶ್ರೀಧರ್, ನಂದೀಶ್, ಗೋವಿಂದ್, ರವೀಂದ್ರ, ಹೇಮಂತ್, ಅಭಿ, ಗೌತಮ್, ಕೃಷ್ಣ, ಪ್ರಜ್ವಲ್, ದಾನಿಗಳಾದ ಪದ್ಮಾ, ನರಸೇಗೌಡ ಇತರರು ಇದ್ದರು.








