ArticlesLatest

ಈ ಮೂರು ಸಮರ್ಥ ಮಾನವನ ಸಾರ್ಥಕ ಜೀವನಕ್ಕೆ ಬೇಕಾದ ಸಮರ್ಪಕ ಲಕ್ಷಣಗಳು

ನಾವು  ನಮ್ಮ ಬದುಕನ್ನು ನೆಮ್ಮದಿಯಿಂದ ಸಾಗಿಸಬೇಕಾದರೆ ಕೆಲವೊಂದು ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ…  ಮೊದಲೆಲ್ಲ ಸಾರ್ಥಕ ಮನೆಯ ಲಕ್ಷಣಗಳ ಬಗ್ಗೆ ಬರೆದ ಬರಹಗಳನ್ನು ಕಟ್ಟುಹಾಕಿಸಿ ಮನೆಯಲ್ಲಿ ಎಲ್ಲರಿಗೂ ಕಾಣುವಂತೆ ಇಡಲಾಗುತ್ತಿತ್ತು. ಈಗ ಹಾಗಿಲ್ಲ ಬಿಡಿ… ಆದರೂ ಕೆಲವೊಂದು ವಿಚಾರಗಳನ್ನು ಅರಿತುಕೊಳ್ಳುವುದರಿಂದ ಹಲವು ಪ್ರಯೋಜನಗಳಿರುವುದಂತು ನಿಜ… ಈ ಬಗ್ಗೆ ನಮ್ಮ ನಿತ್ಯದ ಬದುಕಿನಲ್ಲಿ ಉಪಯೋಗಕ್ಕೆ ಬರುವ ವಿಚಾರಧಾರೆಯನ್ನು ಸಂಗ್ರಹಿಸಿ ಇಲ್ಲಿ ಓದುಗರ ಮುಂದಿಟ್ಟಿದ್ದಾರೆ ಕುಮಾರಕವಿ ನಟರಾಜ್… ನೀವೊಮ್ಮೆ ಓದಿ ಬಿಡಿ…

ಈ 3ನ್ನು ಹತೋಟಿಯಲ್ಲಿಡಬೇಕು:

ಆಸೆ, ಕೋಪ, ನಾಲಗೆ

ಈ 3ಕ್ಕೆ ಆತುರ ಪಡಬಾರದು:

ವ್ಯಾಪಾರ, ವಿವಾಹ, ಪ್ರಯಾಣ

ಈ 3ಕ್ಕೆ ಪ್ರಾಶಸ್ತ್ಯ ಕೊಡಬೇಕು:

ಪ್ರತಿಭೆ, ಸಾಮರ್ಥ್ಯ, ಜೇಷ್ಠತೆ

ಈ 3ಕ್ಕೆ ಆದ್ಯತೆ ನೀಡಬೇಕು:

ವಿಕಲಚೇತನರು, ಮಕ್ಕಳು, ವೃದ್ಧರು

ಈ 3ನ್ನು ವ್ಯರ್ಥಗೊಳಿಸಬಾರದು:

ಹಣ, ಸಮಯ, ಶಕ್ತಿ

ಈ 3ನ್ನು ಗೌರವಿಸಬೇಕು:

ಸಂಸ್ಕೃತಿ, ನಾಗರಿಕತೆ, ಸಂಪ್ರದಾಯ

ಈ 3ನ್ನು ನಿತ್ಯ ಪೂಜಿಸಬೇಕು:

ತಾಯಿ, ತಂದೆ, ಗುರು

ಈ 3ನ್ನು ಸದಾ ಪ್ರೀತಿಸಬೇಕು :

ಕರ್ತವ್ಯ, ಸಹಪಾಠಿ, ಸಹೋದ್ಯೋಗಿ

ಈ 3ನ್ನು ದ್ವೇಷಿಸಬೇಕು:

ಅಹಂಕಾರ, ಅನ್ಯಾಯ, ನಂಬಿಕೆದ್ರೋಹ

ಈ 3ನ್ನು ಸ್ವಾಗತಿಸಬೇಕು:

ಸಹಾಯ, ಸಹಕಾರ, ಸಂಘಟನೆ

ಈ 3ನ್ನು ಮರೆಯಬಾರದು:

ವಿದ್ಯೆ, ವಿನಯ, ಸಂಬಂಧ

ಈ 3ನ್ನು ತಿರಸ್ಕರಿಸಬಾರದು:

ಶಿಸ್ತು, ಹುದ್ದೆ, ಸಂಯಮ

ಈ3ನ್ನು ಪ್ರೋತ್ಸಾಹಿಸಬಾರದು:

ಹೊಗಳಿಕೆ, ಚಾಡಿ, ಹಿತಶತ್ರು

ಈ 3ನ್ನು ಬೆಳೆಸಬಾರದು:

ಅಸೂಯೆ, ಶತ್ರುತ್ವ, ಕುಯುಕ್ತಿ

ಈ 3ನ್ನು ಬಿಡಬಾರದು:

ಆತ್ಮಗೌರವ, ಸ್ವಯಾರ್ಜಿತ, ಕುಟುಂಬ

ಈ 3ಕ್ಕೆ ಹೋರಾಡಬೇಕು:

ತಾಯಿನಾಡು, ಮಾತೃಭಾಷೆ, ಸಮಾನತೆ

ಈ 3ನ್ನು ವರ್ಜಿಸಬೇಕು:

ಧೂಮಪಾನ, ಮದ್ಯಪಾನ, ಪರಸ್ತ್ರೀಸಂಗ

ಈ 3ನ್ನು ಅಳವಡಿಸಿಕೊಳ್ಳಬೇಕು:

ಸತ್ಯ, ನ್ಯಾಯ, ನೀತಿ

ಈ 3ನ್ನು ಸರಿದೂಗಿಸಬೇಕು:

ಆದಾಯ, ಖರ್ಚು, ಉಳಿತಾಯ

ಈ 3ಕ್ಕೆ ಕ್ರಮಬದ್ಧವಾಗಿರಬೇಕು:

ಆಹಾರ, ನಿದ್ರೆ, ದುಡಿಮೆ

ಈ 3ನ್ನು ಎದುರಿಸಲು ಸಿದ್ಧರಾಗಬೇಕು:

ದು:ಖ, ಸೋಲು, ಸಾವು

(ಸಂಗ್ರಹ)

admin
the authoradmin

1 ಟಿಪ್ಪಣಿ

ನಿಮ್ಮದೊಂದು ಉತ್ತರ