ArticlesLatest

ಜಗತ್ತಿಗೆ ಯುದ್ಧ ವೊಂದೇ ಪರಿಹಾರವಾದರೆ… ಮನುಕುಲದ ಮುಂದಿನ ಭವಿಷ್ಯವೇನು?

ಯುದ್ಧದ ಭೀಕರತೆ… ಅದು ಹೊತ್ತು ತರುವ ಸಾವು, ನೋವುಗಳು, ಕಷ್ಟ ನಷ್ಟಗಳು, ದ್ವೇಷ ಅಸೂಯೆಗಳು, ಪರದಾಟಗಳು ಒಂದೆರಡಲ್ಲ… ಇಷ್ಟಕ್ಕೂ ಯುದ್ಧದಿಂದ ಸಾಧಿಸುವುದಾದರೂ ಏನು? ಯುದ್ಧವನ್ನು ಬದಿಗೆ ಸರಿಸಿ ಶಾಂತಿಯಿಂದ ಎಲ್ಲವನ್ನೂ ಗೆಲ್ಲಬಹುದು ಎಂಬ ಸಂದೇಶವನ್ನು ಲೇಖಕಿ, ಪತ್ರಕರ್ತೆಯೂ ಆಗಿರುವ ಕೆ.ಟಿ.ವಾತ್ಸಲ್ಯ ಅವರು ಹೇಳುತ್ತಾ ಬಂದಿದ್ದರು.. ಅಷ್ಟೇ ಅಲ್ಲದೆ ಪುಸ್ತಕವನ್ನು ಪ್ರಕಟಿಸಿದ್ದರು… ಆದರೀಗ ಯುದ್ಧ ನಡೆಯುತ್ತಿದೆ… ರಕ್ತ ಹರಿಯುತ್ತಿದೆ… ಆ ಭೀಕರತೆಯನ್ನು ನೋಡುವಾಗಲೆಲ್ಲ ಕಣ್ಣಂಚಿನಲ್ಲಿ ನೀರು ಹರಿಯುತ್ತಿದೆ…  ಎದೆಯಾಳ ಸಂಕಟವನ್ನು ಅವರು ಇಲ್ಲಿ ಹೊರಹಾಕಿದ್ದಾರೆ….

ಅದೊಂದು ಸುಂದರವಾದ ಊರು.  ಆ ಊರಿನಲ್ಲಿ ಒಂದಷ್ಟು ಮನೆಗಳು ಕಾನನ  ಮಧ್ಯೆ  ಹೊಳೆ-ತೊರೆ  ಹಳ್ಳಗಳ  ಮಧ್ಯೆ ನಿಶಬ್ಧದ ಆಲಯದಲಿ ಮೈದಳೆದು ನಿಂತಿತ್ತು. ಅದೊಂದು ಸುಂದರವಾದ ಕಲ್ಪನೆಯ ಊರು. ಮಂಜಿನ ಹನಿಗಳು ಗಿಡದ ಚಿಗುರೆಲೆಯಲಿ ವಜ್ರದ ಮುಕುಟ ಮಣಿಯಂತೆ  ಹೊಳೆಯುವ ನಿತ್ಯ ವೈಭವದ ಆ ಊರಿಗೆ “ಓಯಾಸಿಸ್ ” ಎಂದು ನಾಮಕರಣ ಮಾಡಲಾಗಿತ್ತು.

ಅಲ್ಲಿ  ನನ್ನದೇ ಒಂದು ಜಗತ್ತು ನಿರ್ಮಾಣವಾಗಿತ್ತು.  ಪುಟ್ಟದಾದ  ಅಡುಗೆ ಕೋಣೆ.  ಅದಕ್ಕೆ ಹೊಂದಿರುವ ಮನೆಯ ಗ್ರಂಥಲಯ, ಮಲಗುವ ಕೋಣೆ.  ಅದೊಂದು ಪಕ್ಷಿಗಳ ಕಲರವದ ವಠಾರ.  ದಿನನಿತ್ಯ  ಪಕ್ಷಿಗಳ ಧ್ವನಿ ನನ್ನಲ್ಲಿ ಹೊಸ ಹುರುಪಿಗೆ  ಮುನ್ನುಡಿ ಇಡುತ್ತಿತ್ತು. ಅಕ್ಕ-ಪಕ್ಕದ ಮನೆಯವರ ಪ್ರೀತಿ-ವಿಶ್ವಾಸದ ಬದುಕು ಆ ಗ್ರಾಮದ ಶಾಂತಿಯ ನೆಲೆವೀಡಾಗಿಸಿತ್ತು. ಅದೊಂದು ರಾತ್ರಿ

ವಿಶೇಷ ಅನುಭವದ ರಾತ್ರಿಯಾಗಿ ಪರಿಣಮಿಸಿತು.  ಕತ್ತಲೆ- ಬೆಳಕಿನಾಟದಲ್ಲಿ ನನ್ನ ಪ್ರಯಾಣ ಸಾಗಿತ್ತು. ಅದು ದೈನಂದಿನ  ಪ್ರಯಾಣ. ಅಂದು  ನನ್ನ ಮನಸಿನಲ್ಲಿ ನೊರೆಂಟು ಆಲೋಚನೆ.  “ಯುದ್ಧ ನಡೆಯುತ್ತಿದೆ. ಜಗತ್ತು ಏನಾಗಬಹುದು? ಮುಂದಿನ ಮಕ್ಕಳ ಭವಿಷ್ಯವೇನು?”  ಹೀಗೆ ನೂರೆಂಟು ಆಲೋಚನೆ ಗಳು ನನ್ನ ಮನದಲ್ಲಿ ಸುಳಿದಾಡಿದವು.  ಅಂದು ರಾತ್ರಿ ನಿದ್ರೆ ಇರಲಿಲ್ಲ. ಕಣ್ಣ ರೆಪ್ಪೆಗಳು ನಿದ್ರೆಯನ್ನು ಆಲಂಗಿಸಲು ಪ್ರಯತ್ಸಿಸಿದವಾದರೂ ಮನಸ್ಸಿಗೆ ನಿದ್ರೆ ಬೇಡವಾಗಿತ್ತು. ನಿದ್ರೆ ಬರದ ಕಾರಣ ಹತ್ತಿರ ಬಾಟಲಿಯಲ್ಲಿದ್ದ ನೀರು ಖಾಲಿಯಾಗಿತ್ತು.

ಸರಿಸುಮಾರು ರಾತ್ರಿ 1.30 ರ ಸಮಯ! ಮದ್ಯರಾತ್ರಿ ಅಳುವ  ಧ್ವನಿ ಮನೆಯ ಗ್ರಂಥಲಯದಲ್ಲಿ ಕೇಳಿಬಂತು. ಆ ಧ್ವನಿ ಕೇಳಿದೊಡನೆ ನಾನು ನಿದ್ರೆಯಿಂದ ಎಚ್ಚರಗೊಂಡಂತೆ  ಎಚ್ಚೆತ್ತುಕೊಂಡೆ.  ” ಯಾರದು ಅಳುತ್ತಿರೋದು? ಅದೂ ಲೈಬ್ರೇರಿ ಕೊಠಡಿಯಲ್ಲಿ!! ಅದು ಈ ಸಮಯದಲ್ಲಿ?! ನನ್ನ ಭ್ರಮೆಯೇ? ಹಾರರ್ ಸಿನಿಮಾದಂತೆ ದೆವ್ವದ ಕಾಟವೇನಾದರೂ!? ” ಹೀಗೆ ಪ್ರಶ್ನೆಗಳು ಸುಳಿದಾಡಿದರೂ,  ಮೊಬೈಲ್  ಆನ್ ಆಗಿದೆಯೋ ಎಂದು ಪರೀಕ್ಷೆ ಮಾಡಿದೆ. “ಇಲ್ಲ … ಇಲ್ಲ…” ಮೊಬೈಲ್ ಆಫ್ ಆಗಿದೆ.‌ ಅದು…  ಅದು… ಗ್ರಂಥಾಲಯದಿಂದ ನಿಜವಾಗಿಯೂ ಬರುತ್ತಿದೆ.. ಮುಖ ಬೆವರಿದೆ. ಮೈ ನಡುಕ ಶುರುವಾಗಿದೆ… ಆ ಅಳುವಿನ ಧ್ವನಿ ಯಾರಿದು ಇರಬಹುದು? ಒಂದು ನಿಮಿಷ  ನನ್ನ ಎದೆ ಬಡಿತ ನಿಂತ ಅನುಭವ.

ಪತ್ರಿಕೆ ನಡೆಸಿದ ಅನುಭವ ‘ಧೈರ್ಯವಂತೆ ‘ ಎಂದು ಎಲ್ಲಾರ ಜೊತೆಗೆ  ಹೊಗಳಿಸಿ ಕೊಂಡಿದ್ದೆ . ಅ  ಧೈರ್ಯ  ನನ್ನನ್ನು ಗ್ರಂಥಾಲಯ ಕಡೆಗೆ ಹೆಜ್ಜೆ ಹಾಕುವಂತೆ ಮಾಡಿತು. ನನಗೆ ದೊಡ್ಡ  ಶಾಕ್. ನನ್ನ ತುಟಿಗಳು ಒಣಗಿದವು. ನಿಂತಲ್ಲೇ ನಾನು ಕಲ್ಲಾದ ಅನುಭವ.  ನನಗೆ  ಮಾತು ಹೊರಳುತ್ತಿಲ್ಲ.  ಇಷ್ಟು ಹೊತ್ತಲ್ಲಿ  ನನ್ನ ಮನೆಗೆ  ಕಳ್ಳ ಬಂದಿದ್ದಾನೆ. ಅವನು ಅಳುತ್ತಿದ್ದಾನೆ!  ಒಂದು ನಿಮಿಷ ತಲೆ ತಿರುಗಿದ ಅನುಭವ ವಾಯಿತು . ಮನೆಯ  ಈ ಪುಟ್ಟ ದಾದ ಗ್ರಂಥಲಯದಲ್ಲಿ  ಪುಸ್ತಕ ಬಿಟ್ಟರೆ ಬೇರೇನೂ ಇರಲಿಲ್ಲ.  ಹಾಗಾಗಿ ಈ ಅಳುವ ಧ್ವನಿಗೆ ನನಗೆ ಏನೂ  ತೋಚಲಿಲ್ಲ “ಯಾರು  ನೀನು “ಎಂದು ಪ್ರಶ್ನೆ ಮಾಡಿದೆ .  ಪಕ್ಕದ ಮನೆಯವರನ್ನು ಕರೆಯಲು ಮೊಬೈಲ್ ನತ್ತ ಕೈ ಅಡಿಸಿದೆ.  ಪೋಲೀಸರಿಗೆ ಕರೆ ಮಾಡೋಣವೆಂದು ಮಂದ ದೀಪದಲ್ಲೊಮ್ಮೆ ಅವನ ಕೈಯ್ಯಲ್ಲಿ ಚಾಕುವೇನಾದರೂ ಇದೆಯೇ ಎಂದು ನೋಡಿದೆ.

ಅರೆ…. ನಾನು ಬರೆದ “ಮೂರನೇ ಮಹಾಯುದ್ಧ ಮತ್ತು ಶಾಂತಿ ” ಪುಸ್ತಕ! ಕದಿಯಲು ಬಂದವನ ಕೈಯ್ಯಲ್ಲಿ ಪುಸ್ತಕ!! ಆಶ್ಚರ್ಯದಿಂದ ಸಾವರಿಸಿಕೊಂಡೆ.   ಗಾಬರಿ ಯಿಂದ ಧೈರ್ಯಮಾಡಿ ವಿಚಾರಿಸಿದೆ. “ನಿನ್ನ ಕೈಯ್ಯಲ್ಲಿ ನನ್ನ ಪುಸ್ತಕವಿದೆಯಲ್ಲಾ..? ಇಲ್ಲಿ ನಿನಗೆ ಬೇಕಾದ್ದು ಏನೂ ಇಲ್ಲ”. ಅದಕ್ಕವನು  ” ಹೌದು ಮೇಡಂ.  ನಾನು ಕಳ್ಳ ನಲ್ಲ. ಆದರೆ,  ನಾನು ಕಳ್ಳನಾದೆ. ಈ ಯುದ್ಧ ನನ್ನನ್ನು ಕಳ್ಳನನ್ನಾಗಿ ಮಾಡಿದೆ. ಇoದು ಪ್ರಪಂಚದಲ್ಲಿ ಯುದ್ಧ ನಡೆಯುತ್ತಿದೆ. ಇದು ಜಗತ್ತಿನ ಯುದ್ಧ. ನಾನು ಮತ್ತು ನನ್ನ ಕುಟುಂಬ ಹಸಿವಿನ ಯುದ್ಧದಲ್ಲಿ ಬಳಲುತ್ತಿದ್ದೇವೆ. ನೀವು ” ಮೂರನೇ ಮಹಾ ಯುದ್ಧ ಮತ್ತು ಶಾಂತಿ “ಪುಸ್ತಕ ಬರೆದು ಮುಂದೆ ಜಗತ್ತಿನ ಒಳಿತಿಗಾಗಿ  ಮುಂದಿನ ಪೀಳಿಗೆಗೆ ಅಮೂಲ್ಯವಾದ ಕೊಡುಗೆ ನೀಡಿದ್ದೀರಿ.  ಇದು ಬೆತ್ತಲೆ ಜಗತ್ತು.  ಒಳ್ಳೇಯದನ್ನು ಸ್ವೀಕರಿಸೋದಿಲ್ಲ.

ನಿಮ್ಮಲ್ಲಿ ಏನಾದ್ರು ಸಿಗಬಹುದು ಎಂದು ಅಲ್ಲಿ ಇಲ್ಲಿ ಹುಡುಕಾಡಿದೆ.  ಆದರೇ ನನ್ನ ಕೈಗೆ ಏನೂ ಸಿಗಲಿಲ್ಲ ನೀವು ಬರೆದ” ಮೂರನೇ ಮಹಾ ಯುದ್ಧ ಮತ್ತು ಶಾಂತಿ ” ನನಗೆ ಸಿಕ್ಕಿತು. ನೋಡಿ  ನನಗೆ ದುಃಖ್ಖ ಉಕ್ಕಿ ಬಂತು ಈ ಪುಸ್ತಕದ ಬೆಲೆ ಈಗ ನನಗೆ ಅರ್ಥ ಆಗುತ್ತಿದೆ” ಎಂದ ಬಿಕ್ಕಳಿಸುತ್ತ.

ಒಬ್ಬ ಲೇಖಕ ತನ್ನ ಲೇಖನಿ ಚಿಂತನೆ ಮೂಲಕ ಪ್ರಪಂಚಕ್ಕೆ ಸಂದೇಶ ಕಳಿಹಿಸುತ್ತಾನೆ.   ಆದರೆ,  ಈ ರಾಜಕೀಯ ಆರಾಜಕತೆ ಪ್ರಪಂಚವನ್ನು ಹಾಳು ಮಾಡುತ್ತದೆ. ಮೇಡಂ  ಯುದ್ಧ ಬೇಡ ಶಾಂತಿ ಬೇಕು ‘ಬುದ್ಧನ ಶಾಂತಿ ಮಂತ್ರ “ಎದ್ದು ಕಾಣುತ್ತಿದೆ. ಈ ವಿಶ್ವದ ಜನತೆ ಜ್ಞಾನವನ್ನು ಬೆಂಬಲಿಸಿದರೆ ಖಂಡಿತವಾಗಿಯೂ ಮುಂದಿನ ಪೀಳಿಗೆಗೆ  ಭವಿಷ್ಯ ಉಜ್ವಲ ವಾಗುತ್ತದೆ.

ಈ ಪುಸ್ತಕ ನೋಡಿ ಹೊಟ್ಟೆ ತುಂಬಿ ಬಂತು ಮೇಡಂ ನನಗೆ  ಏನೂ ಬೇಡ  ಈ ಪುಸ್ತಕದ ಲೇಖಕಿ ಮನೆಗೆ ಬಂದು ಕಳ್ಳನಾಗಿ ಬಂದು ನಿಮ್ಮನ್ನು ನೋಡಿದ ಪುಣ್ಯ ನನಗೆ ಸಿಕ್ಕಿದೆ.  ಅಷ್ಟು ಸಾಕು ಈ ಜೀವಕೆ.  ನಾನಿನ್ನು ಹೋರಡುತ್ತೇನೆ.  ಧನ್ಯವಾದಗಳು ” ಎಂದಾಗ ನನ್ನ ಕಣ್ಣಿನಿಂದ ಹರಿದ ಕಣ್ಣೀರಿನ ಹನಿಗಳು ಮುಗ್ದ ಜನರ, ಅಮಾಯಕ  ಜನರ, ಮಕ್ಕಳ. ಭವಿಷ್ಯದ ಮಕ್ಕಳ, ಮಹಿಳೆಯರ  ರೋಧನೆ ಯನ್ನು ಒತ್ತಿ ಹೇಳುತ್ತಿತ್ತು.

ಕಳ್ಳ  ನನ್ನನ್ನು ದಿಟ್ಟಿಸಿ “ಯಾರಿಗೂ   ಶಾಂತಿಯಿಲ್ಲ  ನೀವು ಈ ಪುಸ್ತಕ ದಿಂದ ವಿಶ್ವ ಕ್ಕೆ ಉತ್ತಮ ಸಂದೇಶ ನೀಡಿದ್ದೀರಿ. ಇದು ಮೂರ್ಖರ ಜಗತ್ತು ,! ಒಳ್ಳೇಯದಕ್ಕೆ ಬೆಂಬಲವಿಲ್ಲ. ಹಾಗಾಗಿ ಈ ಜಗತ್ತಿಗೆ ಇಂದು ಯುದ್ಧ ಎನ್ನುವ ಕಾರ್ಮೋಡ ಕವಿದಿದೆ  . ಒಳ್ಳೆ ಯವರಿಗೆ ಕಾಲವಿಲ್ಲ ಒಳ್ಳೆಯವರು ಕೆಟ್ಟವರಾಗುತ್ತಾರೆ . ಅವನ ಮಾತಿಗೆ ನಾನು ಶರಣಾದೆ. ಆತನ ಚಿಂತನೆ ಯುದ್ಧಕ್ಕೆ ಸಜ್ಜಾಗಿರುವ ನಾಯಕನಿಗೆ ಇಲ್ಲದಾಯಿತೇ ಎಂದು ನನಗೆ ದುಃಖವಾಯಿತು. ಅಕ್ಕಿ, ತರಕಾರಿ  ಜೊತೆಗೆ ನಾನು ಬರೆದ “ಮೂರನೇ ಮಹಾ ಯುದ್ಧ ಮತ್ತು ಶಾಂತಿ “ಪುಸ್ತಕ ವನ್ನು ನಾನು ಅವನಿಗೆ ಕೊಟ್ಟು ಕಳುಹಿಸಿದೆ.

ಈ ಜಗತ್ತಿಗೆ ಯುದ್ಧ  ಒಂದೇ ಪರಿಹಾರವಾದರೆ  ಈ ಮನುಕುಲದ ಮುಂದಿನ ಭವಿಷ್ಯವೇನು? ಈ ಬಗ್ಗೆ ಚಿಂತಿಸಿ ನಾನು ಯುದ್ಧ ದ ಬಗ್ಗೆ ಬರೆದ ಕವನ ನೆನಪು ಮಾಡಿಕೊಂಡೆ.”ಕೂಸೊoದು ಮನುಕುಲವನ್ನು ಪ್ರಶ್ನಿಸುತ್ತಿದೆ ವಿಶ್ವದಲ್ಲಿ ಶಾಂತಿ ಎಂದು ?” ಇದಕ್ಕೆ ಉತ್ತರ  ನೀಡುವವರು ಯಾರು ಎಂದು ನೆನೆಯುತ್ತಾ ನಿದ್ರೆಗೆ ಜಾರಿದೆ.

(ಈ ಒಂದು ಸಂದೇಶ ಜಗತ್ತಿನ ಪ್ರತಿಯೊಬ್ಬರಿಗೂ ತಲುಪಬೇಕು. ಈ ಕಥೆ  ಜಗತ್ತಿನ ಎಲ್ಲಾ ಭಾಷೆ ಯಲ್ಲಿ ಭಾಷಾoತರ ಗೊಂಡು ಯುದ್ಧ ಪ್ರಾರಂಭಿದ ನಾಯಕ ನಿಗೆ  ತಲುಪು ವರೆಗೆ ಶೇರ್  ಮಾಡಿ. ದಯವಿಟ್ಟು ಶೇರ್ ಮಾಡಿ ಜಗತ್ತಿನಲ್ಲಿ ಮಾನವೀಯ  ಮೌಲ್ಯ ಗಳು ಉದಯ ವಾಗಬೇಕು. ಮುಂದಿನ ಪೀಳಿಗೆಗೆ ಕರುಣೆ ಪಾಠ ಕಲಿಯಬೇಕು. ಈ ಭೂಮಿ ಮುಂದಿನ ಪೀಳಿಗೆಗೆ ಉಳಿಯಬೇಕು. “ಯುದ್ಧ  ನಿಂತು ಜಗತ್ತಿನಲ್ಲಿ ಶಾಂತಿ ಉದಯ ವಾಗಬೇಕು .ಸಾಹಿತಿಗಳು, ಚಿಂತಕರು, ಸಮಾಜ ಸುಧಾರಕರು, ವಿಜ್ಞಾನಿಗಳು, ಪ್ರತಿಯೊಬ್ಬರು ಸಾಮಾಜಿಕ ಜಾಲತಾಣ ಗಳಲ್ಲಿ ಯುದ್ಧದ ಕುರಿತು  ಬರೆದು ಪೋಸ್ಟ್ ಮಾಡಿ

(ಲೇಖಕಿ- ಮೂರನೇ ಮಹಾ ಯುದ್ಧ ಮತ್ತು ಶಾಂತಿ,  ವಿಶ್ವ ಶಾಂತಿ ಗಾಗಿ ಲೇಖನಿ ಅಭಿಯಾನದ ಸಂಚಾಲಕಿ)

 

ಕೊಡಗಿನಲ್ಲಿ ಗಮನಸೆಳೆಯುತ್ತಿರುವ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನಕ್ಕೀಗ ಶತಕದ ಸಂಭ್ರಮ… ಏನಿದರ ವಿಶೇಷ…?

admin
the authoradmin

Leave a Reply