ಮೈಸೂರು: ನಗರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನ ಮಂತ್ರಿ ಬಾಬು ಜಗಜೀವನ್ ರಾಮ್ ರವರ 119 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಬಾಬೂಜಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಗರ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕರಾದ ಎಲ್ ನಾಗೇಂದ್ರ ರವರು ಮಾತನಾಡಿ ಬಾಬು ಜಗಜೀವನ್ ರಾಮ್ ರವರು ಶೋಷಿತ ಸಮುದಾಯದಲ್ಲಿ ಹುಟ್ಟಿದ ಮಹಾನ್ ಚೇತನ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಕೇಂದ್ರದಲ್ಲಿ ಆಹಾರ ಮಂತ್ರಿಯಾಗಿ ಆಹಾರ ಭೀಕರ ಬರಗಾಲದ ಸಮಯದಲ್ಲಿ ಆಹಾರ ಬಿಕ್ಕಟ್ಟು ನಿಭಾಯಿಸುವವರೆಗೆ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸಲು ಅವರ ಶ್ರಮ ಅಪಾರ ಆದ್ದರಿಂದ ಅವರು ಹಸಿರು ಕ್ರಾಂತಿಯ ಹರಿಕಾರ ಎಂದೇ ಜನಪ್ರಿಯತೆ ಪಡೆದವರು.ಬಾಬೂಜಿ ಅವರ ಜಿವನ ಚರಿತ್ರೆ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿ ಅವರ ಆದರ್ಶಗಳನ್ನು ಗೌರವಿಸಿ ಪಾಲಿಸಬೇಕು ಎಂದರು

ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿ.ಎಂ. ರಘು, ರುದ್ರಮೂರ್ತಿ, ಉಪಾಧ್ಯಕ್ಷ ಮೈ.ಪು.ರಾಜೇಶ್,,ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಸ್ವಾಮಿ, ಧರ್ಮರಾಜ್, ಚಲುವರಾಜ್, ಸೋಮೇಶ್, ಸರ್ವೇಶ್, ಸಿದ್ದರಾಜು, ಸುರೇಂದ್ರಬಾಬು, ಶಿವಣ್ಣ, ಸಿದ್ದರಾಜು ಕೆ.ಗಿರೀಶ್, ಎಸ್ ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ, ನಗರಪಾಲಿಕೆ ಮಾಜಿ ಸದಸ್ಯ ಚಿಕ್ಕವೆಂಕಟು, ಮಂಜುನಾಥ್, ಚಂದ್ರು, ರವಿ ನಾಗರಾಜ್ ಉಪಸ್ಥಿತರಿದ್ದರು .








