ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಇತಿಹಾಸ ಪ್ರಸಿದ್ಧ ದುರ್ಗಾಪರಮೇಶ್ವರಿಯ ಪ್ರತಿರೂಪ ಶ್ರೀ ಮಂಡವೇಶ್ವರಿ ಅಮ್ಮನವರ ಓಕಳಿ ಹಬ್ಬ ಮತ್ತು ಜಾತ್ರೋತ್ಸವ ಏ.7 ಮಂಗಳವಾರ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಲಿದ್ದು ಈ ಜಾತ್ರಾ ಮಹೋತ್ಸವಕ್ಕೆ ರಾಜಕೀಯ ಮುಖಂಡರು ಅತಿಥಿ ಗಣ್ಯರು ಆಗಮಿಸಲಿದ್ದು ಈ ಹಬ್ಬಕ್ಕೆ ಭಕ್ತಾದಿಗಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮುಂಡೂರು ಗ್ರಾಮದ ಮುಖಂಡ ಚಾಮುಂಡೇಶ್ವರಿ ಬಾರ್ ಮಾಲೀಕ ಮನು ಗೌಡ ಮನವಿ ಮಾಡಿದ್ದಾರೆ.
ಹಿಂದೂ ಸಂಪ್ರದಾಯದ ವರ್ಷದ ಮೊದಲ ಹಬ್ಬ ಯುಗಾದಿಯ ನಂತರ ನಡೆಯುವ ಮೊದಲನೇ ಹಬ್ಬವು ಸಾಲಿಗ್ರಾಮ ತಾಲೂಕಿನ ಮುಂಡೂರು ಗ್ರಾಮದ ಶ್ರೀ ಮಂಡವೇಶ್ವರೀ ಅಮ್ಮನವರ ಜಾತ್ರೆ ಮತ್ತು ಓಕಳಿ ಹಬ್ಬ ಬಹಳ ಪವಿತ್ರವಾದದ್ದು ಹಾಗೂ ಮುಂಗಾರು ಮಳೆಯ ಮುನ್ಸೂಚನೆಯನ್ನು ನೀಡುವ ಈ ಶಕ್ತಿ ದೇವತೆಯ ಹಬ್ಬ ಈ ಭಾಗಕ್ಕೆ ಅತ್ಯಂತ ಪ್ರಾಮುಖ್ಯತೆ ಇದೆ ಹಬ್ಬಕ್ಕೆ ಗ್ರಾಮದಲ್ಲಿ ಒಂದು ತಿಂಗಳಿನಿಂದ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು ಅತ್ಯಂತ ಯಶಸ್ವಿಯಾಗಿ ನಡೆಯುವುದರಿಂದ ಈ ಭಾಗದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಈ ಜಾತ್ರಾ ಮಹೋತ್ಸವದಲ್ಲಿ ಇಂದು ತಪ್ಪೇ ಓಕಳಿ ನಾಳೆ ಶ್ರೀದೇವಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯ ತುಂಬಿದ ಕಳಸದೊಂದಿಗೆ ವಿವಿಧ ಗ್ರಾಮೀಣ ಸೊಗಡಿನ ಹುಲಿ ವೇಷ ಡೊಳ್ಳು ಕುಣಿತ ದೇವಿಯ ಆರಾಧಿಸುವ ಗುಡ್ಡೆಗಳ ಕುಣಿತ ಸೇರಿದಂತೆ ಇನ್ನಿತರ ಮಾರುವೇಷ ದಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತರ ರಂಜಿಸುವ ಹಾಗೂ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಈ ಜಾತ್ರಾ ಮಹೋತ್ಸವದ ನಂತರ ಗ್ರಾಮದ ಹಿರಿಯರು ಮತ್ತು ಯುವಕರು ಮಂಗಳವಾರ ರಾತ್ರಿ ಚಂಡಾಸುರನ ವಧೆ ಅಥವಾ ಹೇಮಾವತಿ ಸ್ವಯಂವರ ಎಂಬ ಪೌರಾಣಿಕ ನಾಟಕವನ್ನು ಸಹ ಅಭಿನಯಿಸಲಿದ್ದು ಜಾತ್ರಾ ಮಹೋತ್ಸವಕ್ಕೆ ಮತ್ತು ಪೌರಾಣಿಕ ನಾಟಕ ಕಾರ್ಯಕ್ರಮಕ್ಕೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು ಮಾಜಿ ಸಚಿವರಾದ ಸಾರಾ ಮಹೇಶ್ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಡಿ.ಹರೀಶ್ ಗೌಡರು ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್ ವಿಶ್ವನಾಥ್. ಸಿಎನ್ ಮಂಜೇಗೌಡ ಬಿ ವಿವೇಕಾನಂದ ಸೇರಿದಂತೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮುಖಂಡರು ಭಾಗವಿಸಲಿದ್ದು ಈ ಕಾರ್ಯಕ್ರಮಕ್ಕೆ ದೇವಿಯ ಭಕ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನು ಗೌಡ ಮನವಿ ಮಾಡಿದ್ದಾರೆ.








