LatestMysore

ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾದ ರಿಷಿಕೇಶ್‌ಗೆ ಅವನೀ ಟ್ರಸ್ಟ್ ನಿಂದ  ನೆರವು ..

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಮುಂದಿನ ತಿಂಗಳು ಇಂಡೋನೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಬೆಂಗಳೂರಿನ ಪ್ರವೀಣ್ ಕುಮಾರ್, ಯಶಸ್ವಿನಿ ದಂಪತಿ ಪುತ್ರ ರಿಷಿಕೇಶ್‌ಗೆ ಅವನೀ ಟ್ರಸ್ಟ್(ರಿ) ವತಿಯಿಂದ   50 ಸಾವಿರ ರೂ.ಗಳ ಆರ್ಥಿಕ ಸಹಕಾರ ನೀಡಲಾಯಿತು.

ಮೈಸೂರು ತಾಲೂಕಿನ ಜೈಪುರ ಹೋಬಳಿಯ ಮೂಡಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ನಗದನ್ನು ರಿಷಿಕೇಶ್ ಅಕೌಂಟ್‌ಗೆ ವರ್ಗಾವಣೆ ಮಾಡಿ, ಶುಭಕೋರಿದರು.

ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಸಂಗಮೇಶ್, ಇಂಡೋನೇಷಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್‌ಗೆ ಭಾರತದಿಂದ ರಿಷಿಕೇಶ್ ಆಯ್ಕೆಯಾಗಿದ್ದಾನೆ. ಆತ ಆ ದೇಶಕ್ಕೆ ಪ್ರಯಾಣ ಬೆಳೆಸಲು 4 ಲಕ್ಷ ರೂ. ಅವಶ್ಯಕತೆ ಇತ್ತು. ಆತನ ಪಾಲಕರು ಆರ್ಥಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ದಾನಿಗಳ ಮೋರೆ ಹೋಗಲಾಗಿತ್ತು. ಅದರಂತೆ ನಮ್ಮ ಟ್ರಸ್ಟ್ ಗಮನಕ್ಕೆ ಬಂದಾಗ ಟ್ರಸ್ಟ್ ನ ಅಭಯ ಆಂದೋಲನದ ಅಡಿಯಲ್ಲಿ 50 ಸಾವಿರ ರೂಗಳ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಯುವ ಪ್ರತಿಭೆ ರಿಷಿಕೇಶ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ತೆರಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಠಿಣ ಪರಿಶ್ರಮ, ನಿಯಮಿತ ಅಭ್ಯಾಸದಿಂದ ರಿಷಿಕೇಶ್ ಅವಕಾಶ ಗಳಿಸಿದ್ದಾನೆ. ಆದರೆ ಆರ್ಥಿಕ ತೊಡಕಿನಿಂದ ಪ್ರತಿಭೆ ಹಾಳಾಗಬಾರದು. ರಿಷಿಕೇಶ್‌ಗೆ ಮತ್ತಷ್ಟು ದಾನಿಗಳ ನೆರವು ಅಗತ್ಯವಾಗಿ ಬೇಕಾಗಿದೆ. ದಾನಿಗಳು ಯಾರಾದರೂ ಇದ್ದರೆ ರಿಷಿಕೇಶ್ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

(ಹೆಸರು : ಪಿ.ರಿಷಿಕೇಶ್, ಅಕೌಂಟ್ ನಂ: 110300794842 ಕೆನರಾ ಬ್ಯಾಂಕ್, ಐಎಫ್‌ಎಸಿ ನಂ : ಸಿಎನ್‌ಆರ್‌ಬಿ 0010491, ಬ್ರಾಂಚ್ : ಯಲಹಂಕ ನ್ಯೂ ಟೌನ್, ಬೆಂಗಳೂರು. ಸಂಪರ್ಕಕ್ಕೆ : 9611440673)

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಸೂರ್ಯ, ಖಜಾಂಚಿ ಗಾನಶ್ರೀ, ಬ್ಯಾಸ್ಕೆಟ್ ಬಾಲ್ ತಂಡದ ಕೋಚ್ ರೋಹಿತ್ ಅರಸ್, ದೈಹಿಕ ಶಿಕ್ಷಣ ಶಿಕ್ಷಕಿ ಕವಿತಾ ಇತರರು ಇದ್ದರು.

admin
the authoradmin

Leave a Reply

Translate to any language you want